ಅದಿತಿ ಪ್ರಭುದೇವ ಕೈ ತಪ್ಪಿದ 'ಗಾಳಿಪಟ 2' ಸಿನಿಮಾ

ನಟಿ ಅದಿತಿ ಪ್ರಭುದೇವ ಬಹು ಬೇಡಿಕೆಯ ನಟಿಯಾಗಿದ್ದಾರೆ. ಒಂದರ ಮೇಲೆ ಒಂದು ಸಿನಿಮಾಗಳು ಅವರಿಗೆ ಸಿಗುತ್ತಿವೆ. ಆದರೆ, ಆ ರೀತಿ ಸಿಕ್ಕ ಸಿನಿಮಾವೊಂದು ಅವರ ಕೈ ತಪ್ಪಿದೆ. ಆ ಸಿನಿಮಾ ಬೇರೆ ಯಾವುದು ಅಲ್ಲ 'ಗಾಳಿಪಟ 2'.

ಇದೀಗ 'ಗಾಳಿಪಟ 2' ಸಿನಿಮಾದ ನಾಯಕಿಯಲ್ಲಿಯೂ ಬದಲಾವಣೆಯಾಗಿದೆ. ನಟಿ ಸೋನಲ್ ಮಂಡೋರಿಯೋ ಹಾಗೂ ಅದಿತಿ ಪ್ರಭುದೇವ ಸಿನಿಮಾದಿಂದ ಹೊರ ಬಂದಿದ್ದಾರೆ. ಈ ಹಿಂದೆ ಸೋನಲ್ ಮಂಡೋರಿಯೋ ಅದಿತಿ ಪ್ರಭುದೇವ ಹಾಗೂ ಶರ್ಮಿಳಾ ಮಾಂಡ್ರೆ ಸಿನಿಮಾದ ನಾಯಕಿಯರು ಎಂದು ಘೋಷಣೆ ಮಾಡಲಾಗಿತ್ತು.

Recommended Video

ಗಾಳಿಪಟ ಸಿನಿಮಾ ಮತ್ತೆ ಬರ್ತಿದೆ | Filmibeat Kannada

ಶರ್ಮಿಳಾ ಮಾಂಡ್ರೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಲೆಯಾಳಂ ನಟಿ ಸಂಯುಕ್ತ ಮೆನನ್ ಸಿನಿಮಾಗೆ ಆಯ್ಕೆ ಆಗಿದ್ದಾರೆ. ಇದರ ಜೊತೆಗೆ ಚೈನಿಸ್ ಹಾಗೂ ಕೊರಿಯನ್ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಕನ್ನಡ ನಟಿ ನಿಶ್ಚಿಕಾ ನಾಯ್ಡು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ 'ಪಡ್ಡೆ ಹುಲಿ' ಹಾಗೂ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದಲ್ಲಿ ಈಕೆ ಅಭಿನಯಿಸಿದ್ದರು.

Adithi Prabhudeva Will Be Not Part Of Galipata 2

ಚಿತ್ರದ ನಿರ್ಮಾಪಕರಲ್ಲಿ ಕೂಡ ಬದಲಾವಣೆ ಆಗಿದೆ. ಮಹೇಶ್ ದಾನನ್ನವರ್ ಬದಲಿಗೆ ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಈ ಚಿತ್ರದ ಜೊತೆಗೆ ರಮೇಶ್ ಅರವಿಂದ್ ಅವರ '100' ವನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ.

'ಗಾಳಿಪಟ 2' ಯೋಗರಾಜ್ ಭಟ್ ನಿರ್ದೇಶನದ ಸಿನಿಮಾವಾಗಿದೆ. ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಸಿನಿಮಾದ ನಾಯಕರಾಗಿದ್ದಾರೆ.

More from Filmibeat

English summary
Actress Adithi Prabhudeva will be not part of 'Galipata 2'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X