ನಾನು ರೆಬೆಲ್ ಆದರೆ ದರ್ಶನ್ ಡಬಲ್ ರೆಬೆಲ್, ನಾವು ರೆಬೆಲ್ ಮಕ್ಕಳು ಎಂದ ಆದಿತ್ಯ.!
''ನಾನು ರೆಬೆಲ್ ಆದರೆ ದರ್ಶನ್ ಡಬಲ್ ರೆಬೆಲ್. ಒಟ್ನಲ್ಲಿ ನಾವಿಬ್ಬರು ರೆಬೆಲ್ ಮಕ್ಕಳು'' - ಹೀಗಂತ ಹೇಳಿದವರು ನಟ 'ಡೆಡ್ಲಿ' ಆದಿತ್ಯ.
Recommended Video
ನಿಮಗೆಲ್ಲ ಗೊತ್ತಿರುವ ಹಾಗೆ ನಟ ಆದಿತ್ಯ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆತ್ಮೀಯ ಗೆಳೆಯರು. ಹೀಗಾಗಿ, ಸ್ನೇಹಿತ ಆದಿತ್ಯ ಅಭಿನಯದ 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಮಾಡಲು ನಟ ದರ್ಶನ್ ಆಗಮಿಸಿದ್ದರು.
'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ದರ್ಶನ್, ತಮ್ಮ ಮತ್ತು ಆದಿತ್ಯ ನಡುವಿನ ಗೆಳೆತನದ ಬಗ್ಗೆ ಮಾತನಾಡಿದ್ದರು. ಅದನ್ನ ಕೇಳಿಸಿಕೊಂಡ ಆದಿತ್ಯ ಎಮೋಷನಲ್ ಆಗಿ ದರ್ಶನ್ ಗೆ ಥ್ಯಾಂಕ್ಸ್ ಹೇಳಿದರು.

ದರ್ಶನ್ ಬಗ್ಗೆ ಆದಿತ್ಯ ಮಾತು
''ನಾನು ರೆಬೆಲ್ ಆದರೆ, ದರ್ಶನ್ ಡಬಲ್ ರೆಬೆಲ್. ಒಟ್ನಲ್ಲಿ ನಾವಿಬ್ಬರು ರೆಬೆಲ್ ಮಕ್ಕಳು. ನನ್ನ ಚಿತ್ರದ ಟ್ರೈಲರ್ ನ ನನ್ನ ಆತ್ಮೀಯ ಗೆಳೆಯ ದರ್ಶನ್ ರಿಲೀಸ್ ಮಾಡಿರೋದು ನನಗೆ ತುಂಬಾ ಖುಷಿ ಆಗುತ್ತಿದೆ'' ಎಂದು ಸಂತಸ ವ್ಯಕ್ತಪಡಿಸಿದರು ನಟ ಆದಿತ್ಯ.

ನಾವು ಮೈಸೂರು ಹುಡುಗರು
''ದರ್ಶನ್ ತುಂಬಾ ಚೆನ್ನಾಗಿ ಮಾತನಾಡಿದ. ನಾನು ತುಂಬಾ ಭಾವುಕನಾಗಿದ್ದೇನೆ. ನನ್ನ ಪ್ರೀತಿಯ ಚಕ್ರವರ್ತಿ, ನನ್ನ ಪ್ರೀತಿ ದಾಸನಿಗೆ ಥ್ಯಾಂಕ್ಯು. ನಮ್ಮ ಸ್ನೇಹ ಇನ್ಮುಂದೆ ಹೀಗೆ ಇರುತ್ತೆ. ಹೀಗೆ ಇರಬೇಕು. ಇಂಡಸ್ಟ್ರಿ ನಮ್ಮ ಮಧ್ಯೆ ಯಾವತ್ತೂ ಬಂದಿಲ್ಲ. ಬರುವುದೂ ಇಲ್ಲ. ನಾವು ಮೈಸೂರು ಹುಡುಗರು. ಫ್ರೆಂಡ್ ಶಿಪ್ ನ ಕಡೆಯವರೆಗೂ ಕಾಪಾಡೋದು ಮೈಸೂರು ಹುಡುಗರು'' ಎಂದರು ನಟ ಆದಿತ್ಯ.

ದರ್ಶನ್ ಗೆ ಸನ್ಮಾನ
'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಲಾಯಿತು.

'ಮುಂದುವರೆದ ಅಧ್ಯಾಯ' ಚಿತ್ರದ ಕುರಿತು
'ಲವ್', 'ಆದಿ', 'ವಿಲನ್', 'ಡೆಡ್ಲಿ ಸೋಮ', 'ಎದೆಗಾರಿಕೆ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದ ಆದಿತ್ಯ ಇದೀಗ 'ಮುಂದುವರೆದ ಅಧ್ಯಾಯ' ಚಿತ್ರದ ಮೂಲಕ ನಿಮ್ಮೆಲ್ಲರ ಮುಂದೆ ಬಂದಿದ್ದಾರೆ. ಆದಿತ್ಯ, ಆಶಿಕಾ ಗೌಡ, ಸಂದೀಪ್, ಜೈಜಗದೀಶ್ ಅಭಿನಯದ 'ಮುಂದುವರೆದ ಅಧ್ಯಾಯ' ಚಿತ್ರಕ್ಕೆ ಬಾಲು ಚಂದ್ರಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











