ಶ್ರೀಮುರಳಿ 'ಭರಾಟೆ'ಯಲ್ಲಿ ಅಧಿತಿ ಪ್ರಭುದೇವ ಸರ್ಪ್ರೈಸ್
ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಹಾಡೊಂದರಲ್ಲಿ ಅತಿಥಿಯಾಗಿ ಹೆಜ್ಜೆ ಹಾಕಿದ್ದಾರೆ. ಶ್ರೀಲೀಲಾ ಮತ್ತು ರಚಿತಾ ಜೊತೆ ಮತ್ತೊಬ್ಬ ನಟಿಗೂ ಭರಾಟೆ ಸ್ಪೆಷಲ್ ಆಗಿದೆ.

ಹೌದು, ಸದ್ಯ ಕನ್ನಡ ಇಂಡಸ್ಟ್ರಿಯಲ್ಲಿ ಬೇಡಿಕೆಯ ನಟಿ ಎನಿಸಿಕೊಂಡಿರುವ ಅಧಿತಿ ಪ್ರಭುದೇವ ಭರಾಟೆ ಚಿತ್ರತಂಡದ ಜೊತೆ ಪ್ರತ್ಯಕ್ಷವಾಗಿದ್ದಾರೆ. ನಾಯಕಿ ಶ್ರೀಲೀಲಾ ಪಾತ್ರಕ್ಕೆ ಅಧಿತಿ ಡಬ್ ಮಾಡಿದ್ದಾರಂತೆ.

ಶ್ರೀಲೀಲಾ ಅವರ ಪಾತ್ರಕ್ಕೆ ಅಧಿತಿ ಧ್ವನಿ ಸೂಕ್ತವಾಗಹುದು ಎಂಬ ಉದ್ದೇಶದಿಂದ ನಿರ್ದೇಶಕ ಚೇತನ್ ಈ ಐಡಿಯಾ ಮಾಡಿದ್ದಾರೆ. ಈ ಮೂಲಕ ಒಬ್ಬ ನಟಿಗೆ ಇನ್ನೊಬ್ಬ ನಟಿ ಧ್ವನಿ ನೀಡಿರುವುದು ಅಪರೂಪ ಹಾಗೂ ವಿಶೇಷ.
ಇನ್ನುಳಿದಂತೆ ಭರಾಟೆ ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡ್ತಿದೆ. ಅರ್ಜುನ್ ಜನ್ಯ ಸಂಗೀತ ಮತ್ತು ವಿಜಯ ಪ್ರಕಾಶ್ ಗಾಯನದಲ್ಲಿ ಮೂಡಿಬಂದಿರುವ ಎರಡನೇ ಹಾಡನ್ನ ರಚಿತಾ ರಾಮ್ ಬಿಡುಗಡೆ ಮಾಡಿದ್ರು.


Click it and Unblock the Notifications











