'ಪೆಟ್ರೋಮ್ಯಾಕ್ಸ್'‌ನಲ್ಲಿ ಮೋಡಿ ಮಾಡಲಿದೆ 'ಬ್ರಹ್ಮಚಾರಿ' ಜೋಡಿ

ಸತೀಶ್ ನೀನಾಸಂ ಮತ್ತು 'ನೀರ್‌ದೋಸೆ' ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರುತ್ತಿದೆ ಎಂಬುದು ಈಗಾಗಲೇ ತಿಳಿದಿರುವ ವಿಚಾರ. ಈ ಚಿತ್ರಕ್ಕೆ ಈಗ ನಟಿ ಅದಿತಿ ಪ್ರಭುದೇವ ಎಂಟ್ರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಸತೀಶ್ ನೀನಾಸಂ ಜೊತೆ ಬ್ರಹ್ಮಚಾರಿ ಸಿನಿಮಾದಲ್ಲಿ ನಾಯಕಿಯಾಗಿದ್ದ ಅದಿತಿ ಪ್ರಭುದೇವ, ಈಗ ಮತ್ತೊಮ್ಮೆ ಸತೀಶ್ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಸಹಜವಾಗಿ ಕುತೂಹಲ ಹೆಚ್ಚಿಸಿದೆ.

ಈ ಚಿತ್ರದ ಇನ್ನೊಂದು ವಿಶೇಷ ಅಂದ್ರೆ ನಿರ್ದೇಶಕ ವಿಜಯ್ ಪ್ರಸಾದ್ ಚಿತ್ರದಲ್ಲೂ ಅದಿತಿ ಈಗಾಗಲೇ ಕೆಲಸ ಮಾಡಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನ ಹಾಗೂ ಜಗ್ಗೇಶ್ ನಟನೆಯಲ್ಲಿ ಮೂಡಿ ಬರುತ್ತಿರುವ 'ತೋತಾಪುರಿ' ಚಿತ್ರದಲ್ಲಿ ಅದಿತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಅಷ್ಟರಲ್ಲೆ ಅದೇ ನಿರ್ದೇಶನ ಮುಂದಿನ ಚಿತ್ರಕ್ಕೂ ಅದಿತಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

Aditi Prabhudeva and sathish ninasam are paired once again in Vijay Prasads Petromax Movie

ಅಂದ್ಹಾಗೆ, ಪೆಟ್ರೋಮ್ಯಾಕ್ಸ್ ಹೆಸರಿನಲ್ಲಿ ಈ ಹಿಂದೆಯೇ ಸತೀಶ್ ನೀನಾಸಂ ಜೊತೆಯಲ್ಲಿ ವಿಜಯ್ ಪ್ರಸಾದ್ ಸಿನಿಮಾ ಮಾಡಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಆಗಿರಲಿಲ್ಲ. ಅದೇ ಕಥೆಯನ್ನು ಈಗಿನ ಟ್ರೆಂಡ್‌ಗೆ ತಕ್ಕಂತೆ ಬದಲಾವಣೆ ಮಾಡಿದ್ದು ಮತ್ತೆ ತೆರೆಗೆ ತರಲು ನಿರ್ಧರಿಸಿದ್ದಾರೆ.

ಅಕ್ಟೋಬರ್ ತಿಂಗಳಿನಿಂದ ಪೆಟ್ರೋಮ್ಯಾಕ್ಸ್ ಸಿನಿಮಾ ಚಿತ್ರೀಕರಣ ಆರಂಭ ಮಾಡಲು ಚಿತ್ರತಂಡ ಯೋಜಿಸಿದೆ. ಇನ್ನುಳಿದಂತೆ ಕಲಾವಿದರ ತಂಡ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

Recommended Video

ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada

More from Filmibeat

English summary
Kannada actress Aditi Prabhudeva and sathish ninasam are paired once again in Vijay Prasad's Petromax Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X