ಗಣೇಶ್‌ ಸಿನಿಮಾದ ಮೂರು ಚೆಲುವೆಯರಲ್ಲಿ ಒಬ್ಬರಾದ ಅದಿತಿ ಪ್ರಭುದೇವ

ನಿಧಾನಕ್ಕೆ ಪ್ರಾರಂಭವಾಗಿದ್ದ ನಟಿ ಅದಿತಿ ಪ್ರಭುದೇವ ಸಿನಿ ಪಯಣ ಈಗ ಸಖತ್ ಜೋರಾಗಿ ಓಡುತ್ತಿದೆ. 2017 ರಲ್ಲಿಯೇ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಅದಿತಿ ಪ್ರಭುದೇವ್ ಮೊದಲೆರಡು ವರ್ಷ ಪ್ರಯಾಸಪೂರ್ಣವಾಗಿಯೇ ಕಳೆದವು. ಆದರೆ ಈಗ ಆಕೆ ಕನ್ನಡದ ಬ್ಯುಸಿ ನಟಿಯರಲ್ಲಿ ಒಬ್ಬರು.

ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ ಪ್ರಭುದೇವ್ ಅವರಿಗೆ ಮತ್ತೊಂದು ಮುಖ್ಯ ಸಿನಿಮಾದಿಂದ ಕರೆ ಬಂದಿದೆ. ಅದುವೇ ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್'.

ಹೌದು, ಗಣೇಶ್ ನಟನೆಯ, ಹಾಸ್ಯ-ರೊಮ್ಯಾಂಟಿಕ್ ಸಿನಿಮಾ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಅದಿತಿ ಜೊತೆಗೆ ಇನ್ನೂ ಇಬ್ಬರು ನಟಿಯರು ಸಿನಿಮಾದಲ್ಲಿ ಇರಲಿದ್ದಾರೆ.

ಮೂವರು ನಾಯಕಿಯರು-ಒಬ್ಬ ನಾಯಕನ ಕತೆ

ಮೂವರು ನಾಯಕಿಯರು-ಒಬ್ಬ ನಾಯಕನ ಕತೆ

'ತ್ರಿಬಲ್ ರೈಡಿಂಗ್' ಹೆಸರೇ ಪರೋಕ್ಷವಾಗಿ ಹೇಳುತ್ತಿರುವಂತೆ ಇದು ಮೂವರು ನಾಯಕಿಯರು, ಒಬ್ಬ ನಾಯಕನ ಕತೆ. ಸಿನಿಮಾದ ಮೂವರು ನಾಯಕಿಯರಲ್ಲಿ ಒಬ್ಬರಾಗಿ ಅದಿತಿ ಪ್ರಭುದೇವ ಆಯ್ಕೆ ಆಗಿದ್ದಾರೆ.

ಮೇಘನಾ ಶೆಟ್ಟಿ-ರಚನಾ ಇಂದರ್ ಸಹ ಇದ್ದಾರೆ

ಮೇಘನಾ ಶೆಟ್ಟಿ-ರಚನಾ ಇಂದರ್ ಸಹ ಇದ್ದಾರೆ

ತ್ರಿಬಲ್ ರೈಡಿಂಗ್ ಸಿನಿಮಾಕ್ಕೆ ಈಗಾಗಲೇ 'ಜೊತೆ-ಜೊತೆಯಲಿ' ಧಾರಾವಾಹಿ ನಾಯಕಿ ಅನು ಪಾತ್ರಧಾರಿ ಮೇಘನಾ ಶೆಟ್ಟಿ ಆಯ್ಕೆ ಆಗಿದ್ದಾರೆ. ನಂತರ ಲವ್ ಮಾಕ್ಟೆಲ್ ಸಿನಿಮಾ ಮೂಲಕ ಖ್ಯಾತಿ ಪಡೆದ ರಚನಾ ಇಂದರ್ ಸಹ ಇದ್ದಾರೆ.

ತ್ರಿಬಲ್ ರೈಡಿಂಗ್ ಚಿತ್ರೀಕರಣ ಆರಂಭ

ತ್ರಿಬಲ್ ರೈಡಿಂಗ್ ಚಿತ್ರೀಕರಣ ಆರಂಭ

ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣ ಮಂಗಳೂರಿನಲ್ಲಿ ಆರಂಭವಾಗಿದೆ. ಸಿನಿಮಾದ ನಿರ್ದೇಶನವನ್ನು ಮಹೇಶ್ ಗೌಡ ಮಾಡುತ್ತಿದ್ದಾರೆ. ಸಾಧುಕೋಕಿಲಾ, ಕುರಿ ಪ್ರತಾಪ್, ರವಿಶಂಕರ್ ಇನ್ನೂ ಹಲವು ನಟರು ಸಿನಿಮಾದಲ್ಲಿ ಇರಲಿದ್ದಾರೆ.

Recommended Video

'Nodidavaru Enantare' ಹೊಸದೆಲ್ಲ ಆಚೆ ಬರ್ಬೇಕು | SriMurali | Filmibeat Kannada
10 ಸಿನಿಮಾಗಳು ಬಿಡುಗಡೆ ಆಗಲಿವೆ

10 ಸಿನಿಮಾಗಳು ಬಿಡುಗಡೆ ಆಗಲಿವೆ

ತ್ರಿಬಲ್ ರೈಡಿಂಗ್ ಸೇರಿದಂತೆ ಇನ್ನು ಅದಿತಿ ಪ್ರಭುದೇವ್ ನಟನೆಯ ಬರೋಬ್ಬರಿ 10 ಸಿನಿಮಾಗಳು ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿವೆ. ಅದಿತಿ ನಟನೆಯ ತೋತಾಪುರಿ ಸಿನಿಮಾ ಬಿಡುಗಡೆಗೆ ತಯಾರಿದ್ದು, ಒಂಬತ್ತನೇ ದಿಕ್ಕು, ದಿಲ್‌ಮಾರ್, ಚಾಂಪಿಯನ್, ಓಲ್ಡ್‌ ಮಾಂಕ್, ಗಜಾನನ ಆಂಡ್ ಗ್ಯಾಂಗ್, ಆನಾ, ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿವೆ. ಕೆಲವು ಚಿತ್ರೀಕರಣ ಮುಗಿಸಿವೆ ಸಹ.

More from Filmibeat

English summary
Aditi Prabhudeva is heroine in Ganesh's next movie Trible Riding. Meghana Shetty and Rachana Inder is also there in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X