ದಾವಣಗೆರೆ ಹುಡುಗಿಯ ಮತ್ತೊಂದು ಸಿನಿಮಾ ಶುರು
ನಟಿ ಅದಿತಿ ಪ್ರಭುದೇವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಾಲೇ ಇದೆ. ಇದೀಗ ಅವರು ಇನ್ನೊಂದು ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ.
ಚಿರಂಜೀವಿ ಸರ್ಜಾ ಮುಂದಿನ ಸಿನಿಮಾಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಸಿಂಗ' ಎಂಬ ಟೈಟಲ್ ಫಿಕ್ಸ್ ಆಗಿದೆ. ಆಕ್ಷನ್ ಜೊತೆಗೆ ಪ್ರೇಮಕಥೆಯನ್ನ ಸಿನಿಮಾ ಹೊಂದಿದೆಯಂತೆ. ಇನ್ನು ಚಿತ್ರದ ಮುಹೂರ್ತ ನಿನ್ನೆ ನೆರವೇರಿದೆ.

ಸಿನಿಮಾದಲ್ಲಿ ಅದಿತಿ ಪಾತ್ರಕ್ಕೆ ಬಹಳ ಪ್ರಮುಖ್ಯತೆ ಇದೆಯಂತೆ. ಇನ್ನು ಈ ಸಿನಿಮಾವನ್ನ ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದು, ವಿಜಯ್ ಕಿರಣ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಈ ಸಿನಿಮಾದ ಜೊತೆಗೆ ಸದ್ಯ 'ಬಜಾರ್' ಸಿನಿಮಾದಲ್ಲಿ ಅದಿತಿ ನಟಿಸುತ್ತಿದ್ದಾರೆ. 'ಕುಸ್ತಿ' ಚಿತ್ರಕ್ಕೆ ಸಹ ಅವರೇ ನಾಯಕಿಯಾಗಿದ್ದಾರೆ.
English summary
Kannada actress Aditi Prabhudeva playing lead role in 'Singa' movie.


Click it and Unblock the Notifications