For Quick Alerts
  ALLOW NOTIFICATIONS  
  For Daily Alerts

  ಅದಿತಿ ಪ್ರಭುದೇವ ಅಭಿನಯದ ಗಜಾನನ & ಗ್ಯಾಂಗ್ ರಿಲೀಸ್ ಮುಂದಕ್ಕೆ!

  |

  ಕನ್ನಡ ಸಿನಿಮಾರಂಗದಲ್ಲಿ ಅನೇಕ ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ. ಆದರೆ ಸಿನಿಮಾ ರಿಲೀಸ್ ಮಾಡಲು ಸರಿಯಾದ ದಿನಾಂಗು ಸಿಗುತ್ತಿಲ್ಲ. ಸಿನಿಮಾ ಮಂದಿರದಲ್ಲಿ 50% ಸೀಟ್ ಆಕ್ಯೂಪೆನ್ಸಿ ಇದ್ದರೆ. ಮತ್ತೊಂದು ಕಡೆ ಬೇರೆ ಒಂದೇ ದಿನಾಂಕಕ್ಕೆ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿರುವುದು.

  Recommended Video

  ಭಾವಿ ಪತಿ ಜೊತೆ ಹೊಸ ವರ್ಷ ಆಚರಿಸಿದ ಅದಿತಿ

  ಸದ್ಯ ಕರ್ನಾಟಕದಲ್ಲಿ ಚಿತ್ರಮಂದಿರಗಳಲ್ಲಿ ಪ್ರಸ್ತುತ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಹಾಗಾಗಿ ಸಿನಿಮಾಗಳನ್ನು ರಿಲೀಸ್ ಮಾಡಲು ಸಿನಿಮಾ ಮಂದಿ ಹಿಂದೇಟು ಹಾಕುತ್ತಿದ್ದಾರೆ. ಈಗ ಕನ್ನಡದ 'ಗಜಾನನ ಅಂಡ್​ ಗ್ಯಾಂಗ್​' ಸಿನಿಮಾದ ರಿಲೀಸ್ ದಿನಾಂಕವನ್ನು ಪೋಸ್ಟ್ ಪೋನ್ ಮಾಡಲಾಗಿದೆ.

  ಫೆಬ್ರವರಿ 4ರಂದು ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿತ್ತು. ಆದರೆ ಈಗ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಲಾಗಿದೆ. ಇನ್ನು ಕೆಲವು ದಿನಗ ಬಳಿಕ ಸಿನಿಮಾದ ಹೊಸ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟ ಮಾಡಲಿದೆ.

  ಈ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ ಹಾಗೂ ನಟ ಮಹದೇವ್​. ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ಅಭಿಷೇಕ್​ ಶೆಟ್ಟಿ. ನಾಗೇಶ್​ ಕುಮಾರ್​ ಬಂಡವಾಳ ಹೂಡಿದ್ದು, ಪ್ರದ್ಯೋತನ್​ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

  ರಾಜ್ಯದಲ್ಲಿ ಈಗ ವೀಕೆಂಡ್​ ಕರ್ಫ್ಯೂ ತೆರವುಗೊಂಡಿದೆ. ಆದರೂ ಚಿತ್ರಮಂದಿರದಲ್ಲಿ ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಈಗ ಒಂದೊಂದೇ ಸಿನಿಮಾಗೂ ರಿಲೀಸ್‌ಗೆ ಮುಂದಾಗುತ್ತಿವೆ. ಆದರೆ ಕೆಲವು ಸಿನಿಮಾಗಳು ಗಳಿಕೆ ಮೇಲೆ ಹೊಡೆತ ಬೀಳ ಬಹುದು ಎನ್ನುವ ಕಾರಣ ರಿಲೀಸ್ ಮುಂದಕ್ಕೆ ಹಾಕುತ್ತಿವೆ.

  ಈ ಚಿತ್ರಕ್ಕೆ ಉದಯ್​ ಲೀಲಾ ಛಾಯಾಗ್ರಹಣ ಇದೆ. ವಿಜೇತ್​ ಚಂದ್ರ ಸಂಕಲನ ಮಾಡುತ್ತಿದ್ದಾರೆ. ಫ್ರೆಂಡ್​ಶಿಪ್​, ಲವ್​, ಸೆಂಟಿಮೆಂಟ್​ ಮುಂತಾದ ಅಂಶಗಳನ್ನು ಸಿನಿಮಾ ಒಳಗೊಂಡಿದೆ. ಈ ಚಿತ್ರದ ಟ್ರೇಲರ್​ಗೆ ಈಗಾಗಲೇ ನಿರೀಕ್ಷೆ ಮೂಡಿಸಿದೆ.

  English summary
  Aditi Prabhudeva Starrer Gajanana and Gang Movie Release Postepone, New Release Date Will Out Soon
  Wednesday, January 26, 2022, 22:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X