ಅಲ್ಲು ಅರ್ಜುನ್ 'ಪುಷ್ಪ' ಚಿತ್ರಕ್ಕೆ ಸವಾಲು ಹಾಕಿದ ಕನ್ನಡದ ಅದಿತಿ ಪ್ರಭುದೇವ!

ನಟಿ ಅದಿತಿ ಪ್ರಭುದೇವ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸಾಕಷ್ಟು ಸಿನಿಮಾಗಳು ಅದಿತಿ ಅವರನ್ನು ಹುಡುಕಿಕೊಂಡು ಬರುತ್ತಿವೆ. ಅದಿತಿ ಪ್ರಭುದೇವ ಈಗ ತೆಲುಗಿನ ಪುಷ್ಪ ಸಿನಿಮಾದ ಜೊತೆಗೆ ಸುದ್ದಿ ಆಗುತ್ತಿದ್ದಾರೆ. ಹೌದು ಅದಿತಿ ಪ್ರಭುದೇವ ಅಭಿನಯದ 'ಆನಾ' ಮತ್ತು ಪುಷ್ಪ ಸಿನಿಮಾದ ನಡುವೆ ಒಂದು ನಂಟಿದೆ.

ಅದಿತಿ ಪ್ರಭುದೇವ ಅಭಿನಯದ 'ಆನಾ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಲಾಕ್‌ ಡೌನ್‌ ಬಳಿಕ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ಸಾಲು ಗಟ್ಟಿ ನಿಂತಿರುವುದರಿಂದ ಸಿಕ್ಕ ಗ್ಯಾಪ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಕನ್ನಡದ 'ಆನಾ' ಸಿನಿಮಾ ಇದೇ ಡಿಸೆಂಬರ್‌ 17ಕ್ಕೆ ತೆರೆಗೆ ಬರಲು ತಯಾರಾಗಿದೆ.

ಈ ದಿನಾಂಕ ಕೇಳಿದರೆ ಒಂದು ರೀತಿ ಅಚ್ಚರಿ ಮೂಡುತ್ತದೆ. ಯಾಕೆಂದರೆ ಡಿಸೆಂಬರ್ 17ಕ್ಕೆ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ತೆರೆಕಾಣುತ್ತಿದೆ. ಪುಷ್ಪ ಸಿನಿಮಾ ರಿಲೀಸ್‌ ಆಗುವ ಕಾರಣಕ್ಕೆ ಇನ್ನೂ ಅನೇಕ ದೊಡ್ಡ ದೊಡ್ಡ ಸಿನಿಮಾಗಳು ಕೊಂಚ ಬಳಿಕ ರಿಲೀಸ್‌ ಆಗಲು ಪ್ಲ್ಯಾನ್‌ ಮಾಡಿಕೊಂಡಿವೆ. ಆದರೆ 'ಆನಾ' ಮಾತ್ರ ಅದೇ ತೆರೆಗೆ ಬರುತ್ತಿದೆ.

ಪರಭಾಷೆ ಹಾವಳಿಯ ಆತಂಕ ಹೊರ ಹಾಕಿದ ಅದಿತಿ ಪ್ರಭುದೇವ!

ಪರಭಾಷೆ ಹಾವಳಿಯ ಆತಂಕ ಹೊರ ಹಾಕಿದ ಅದಿತಿ ಪ್ರಭುದೇವ!

ಕನ್ನಡ ಸಿನಿಮಾಗಳ ಮೇಲೆ ಪರಭಾಷೆ ಸಿನಿಮಾಗಳ ಹಾವಳಿ ಮೊದಲಿನಿಂದಲೂ ಇದ್ದಿದ್ದೇ, ಅದರಲ್ಲೂ ಪರ ಭಾಷೆ ಸಿನಿಮಾಗಳ ಸ್ಟಾರ್‌ ಸಿನಿಮಾಗಳು ರಿಲೀಸ್ ಆಗುತ್ತವೆ ಅಂದರೆ ಸಾಕು, ಕನ್ನಡದ ಸಣ್ಣ ಪುಟ್ಟ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಮೂಲೆ ಗುಂಪಾಗಿ ಬಿಡುತ್ತವೆ. ಹಲವು ಬಾರಿ ಈ ರೀತಿ ಆಗಿ ಬಿಡುತ್ತದೆ. ಹಾಗಾಗಿ 'ಆನಾ' ಸಿನಿಮಾದ ಬಗ್ಗೆ ನಟಿ ಅದಿತಿ ಪ್ರಭುದೇವ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಆತಂಕ ಹೊರ ಹಾಕಿದ್ದಾರೆ.

"ನನಗೂ ಕೂಡ ತುಂಬಾ ನೋವಿದೆ. ನಮ್ಮ ನಾಡಲ್ಲಿ ನಮ್ಮ ಸಿನಿಮಾಗಳನ್ನ ನಾವು ಬೇರೆ ಭಾಷೆ ಸಿನಿಮಾಗಳಿಗಾಗಿ ತ್ಯಾಗ ಮಾಡಬೇಕಾಗಿದೆ. ಎನ್ನುವುದು ಬಹಳ ನೋವು ಉಂಟು ಮಾಡುತ್ತದೆ. ದೊಡ್ಡ ದೊಡ್ಡ ನಿರ್ದೇಶಕರು ಕೂಡ ಈ ಬಗ್ಗೆ ಮಾತನಾಡಿದ್ದರು, ಇದು ಹೀಗೆ ಮುಂದುವರೆದರೆ ಎಲ್ಲಿಗೆ ಬಂದು ನಿಲ್ಲುತ್ತೇವೆ ಗೊತ್ತಿಲ್ಲ" ಎಂದು ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ.

'ಆನಾ' ಭಾರತೀಯ ಸೂಪರ್ ವಿಮೆನ್ ಸಿನಿಮಾ!

'ಆನಾ' ಭಾರತೀಯ ಸೂಪರ್ ವಿಮೆನ್ ಸಿನಿಮಾ!

ನೀವೆಲ್ಲಾ ಹಾಲಿವುಡ್‌ನ 'ವಂಡರ್‌ ವಿಮೆನ್' ಚಿತ್ರದ‌ ಬಗ್ಗೆ ಕೇಳಿರುತ್ತೀರಿ. ಆದರೆ ಕನ್ನಡದಲ್ಲಿ ಸೂಪರ್‌ವಿಮೆನ್ ಆಗಿ ತೆರೆಮೇಲೆ ಬರುತ್ತಿದ್ದಾರೆ ನಟಿ ಅದಿತಿ ಪ್ರಭುದೇವ. 'ಆನಾ' ಚಿತ್ರದಲ್ಲಿ ನಟಿ ಅದಿತಿ ಪ್ರಭುದೇವ ಸೂಪರ್‌ ವಿಮೆನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಇದೊಂದು ಸಸ್ಪೆನ್ಸ್ ಸಿನಿಮಾ ಎನ್ನುವುದು ರಿವೀಲ್‌ ಆಗಿದೆ. ಸದ್ಯ ಈ ಚಿತ್ರದ ರಿಲೀಸ್‌ ದಿನಾಂಕ ಕೂಡ ನಿಗದಿ ಆಗಿದೆ. ಡಿಸೆಂಬರ್‌ 17 'ಪುಷ್ಪ' ಸಿನಿಮಾದ ಜೊತೆಗೆ ಈ ಚಿತ್ರ ತೆರೆಗೆ ಬರಲಿದೆ.

10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅದಿತಿ ಬ್ಯುಸಿ!

10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅದಿತಿ ಬ್ಯುಸಿ!

ನಟಿ ಅದಿತಿ ಪ್ರಭುದೇವ ಆನಾ ಸಿನಿಮಾ ರಿಲೀಸ್‌ ಬಗ್ಗೆ ಆತಂಕ ಹೊರ ಹಾಕಿದ್ದಾರೆ. ಜೊತೆಗೆ ಪರಭಾಷೆ ಸಿನಿಮಾಗಳ ಜೊತೆಗೆ ಕನ್ನಡ ಸಿನಿಮಾವನ್ನು ನೋಡಿ ಬೆಳೆಸಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಅದಿತಿ ಪ್ರಭುದೇವ 'ಆನಾ' ಹೊರತು ಪಡಿಸಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ 'ತ್ರಿಬಲ್‌ ರೈಡಿಂಗ್', '5ಡಿ', 'ತೋತಾಪುರಿ', 'ಓಲ್ಡ್ ಮಾಂಕ್', 'ಒಂಭತ್ತನೇ ದಿಕ್ಕು', 'ಅಂದೊದ್ದಿತ್ತು ಕಾಲ', 'ಮಾಫಿಯಾ', 'ಒನ್ಸ್‌ ಅಪಾನೆ ಟೈಮ್‌ ಇನ್‌ ಜಮಾಲಿ ಗುಡ್ಡ' ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಮುಂದೊಂದು ವರ್ಷ ನಡೆಯಲಿದೆ ದೊಡ್ಡ ಚಿತ್ರಗಳ ಹಾವಳಿ!

ಮುಂದೊಂದು ವರ್ಷ ನಡೆಯಲಿದೆ ದೊಡ್ಡ ಚಿತ್ರಗಳ ಹಾವಳಿ!

ನಟ ಅದಿತಿ ಪ್ರಭುದೇವ ತಮ್ಮ ಸಿನಿಮಾದ ಬಗ್ಗೆ ಆತಂಕ ವ್ಯಕ್ತ ಪಡಿಸಲು ಕಾರಣ ಇದೆ. ಕೊರೊನಾ ಬಳಿಕ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ಕಾಯುತ್ತಿವೆ. ಅದರಲ್ಲಿ ದೊಡ್ಡ ಬಜೆಟ್‌ನ, ದೊಡ್ಡ ಸ್ಟಾರ್‌ ಕಾಸ್ಟ್‌ ಇರುವ ಸಿನಿಮಾಗಳು ಅದಾಗಲೇ ರಿಲೀಸ್‌ ದಿನಾಂಕವನ್ನು ನಿಗದಿ ಮಾಡಿಕೊಂಡು ಸೇಫ್‌ ಆಗಿವೆ. ಡಿಸೆಂಬರ್‌ನಲ್ಲಿ 'ಪುಷ್ಪ', ಜನವರಿಯಲ್ಲಿ 'RRR', ಫೆಬ್ರವರಿಯಲ್ಲಿ ರಾಧೆಶ್ಯಾಮ್, ಏಪ್ರಿಲ್‌ನಲ್ಲಿ kgf2, ಇವುಗಳ ಜೊತೆಗೆ ಬಾಲಿವುಡ್‌ ಚಿತ್ರಗಳು ಕೂಡ ತೆರೆಗೆ ಬರಲು ಗಂಟು ಮೂಟೆ ಜೊತೆಗೆ ತಯಾರಾಗಿವೆ. ಹೀಗಿರುವಾಗ ಕನ್ನಡದ ಸಿನಿಮಾಗಳಿಗೆ ಆತಂಕ ಕಾಡುವುದು ಸಹಜ. ಯಾಕೆಂದರೆ ಇತ್ತೀಚೆಗೆ ಬರುತ್ತಿರುವ ಸಿನಿಮಾಗಳೆಲ್ಲಾ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗುತ್ತಿವೆ. ಹಾಗಾಗಿ ಮೂಲ ಕನ್ನಡ ಸಿನಿಮಾಗಳು ರಿಲೀಸ್‌ ಆಗಿ ಯಶಸ್ಸನ್ನು ಗಳಿಸುವುದು ಕಷ್ಟಕರವಾಗಿದೆ.

More from Filmibeat

English summary
Kannada Actress Aditi Prabhudeva Strarrer Aana Movie releasing On December 17th In front Of allu arjun starrer Pushpa, Adithi Is Nervous,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X