ಅದಿತಿ ಪ್ರಭುದೇವ 'ಫೀಮೇಲ್ ಸೂಪರ್ ಹೀರೋ' ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಕನ್ನಡದಲ್ಲಿ ಸದ್ಯ ಮೋಸ್ಟ್ ಬ್ಯುಸಿಯೆಸ್ ನಟಿ ಅಂದ್ರೆ ಅದಿತಿ ಪ್ರಭುದೇವ ಮುಂಚೂಣಿಯಲ್ಲಿದ್ದಾರೆ. ಸತತ ಸಿನಿಮಾಗಳ ಮೂಲಕ ಸುದ್ದಿಯಲ್ಲಿರುವ ಅದಿತಿ ಇತ್ತೀಚಿಗಷ್ಟೆ ಭಾರತದ ಮೊದಲ ಫೀಮೇಲ್ ಸೂಪರ್ ಹೀರೋ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು.
Recommended Video
ಈ ಚಿತ್ರದ ಹೆಸರು ಮತ್ತು ಫಸ್ಟ್ ಲುಕ್ ಅಕ್ಟೋಬರ್ 24 ರಂದು ಬಿಡುಗಡೆ ಮಾಡುವುದಾಗಿ ಸಹ ಮಾಹಿತಿ ನೀಡಿದ್ದರು. ಹೇಳಿದಂತೆ ಮೊದಲ ಫೀಮೇಲ್ ಸೂಪರ್ ಹೀರೋ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ಈ ಚಿತ್ರದ ಹೆಸರು 'ಆನ'. ಫಸ್ಟ್ ಲುಕ್ ಪೋಸ್ಟರ್ ಸಹ ಗಮನ ಸೆಳೆಯುತ್ತಿದೆ. ಮನೋಜ್.ಪಿ.ನಡುಲಮನೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

''ಬೆಂಕಿಯ ಜ್ವಾಲೆಗೆ ಧುಮುಕುವರಾರು? ಸುನಾಮಿ ಅಲೆಗಳ ಎದುರು ನಿಲ್ಲುವರಾರು? ಮಿಂಚಿನ ವೇಗವ ಮೀರಿಸುವವರಾರು? ಅವಳ ಶಕ್ತಿಯ ತಡ್ಯೋರ್ಯಾರು??? ಆಕೆ ಬರ್ತಾಯಿದ್ದಾಳೆ. ಆನ '' ಎಂದು ಮನೋಜ್.ಪಿ.ನಡುಲಮನೆ ಸಹ ಪೋಸ್ಟರ್ ಹಂಚಿಕೊಂಡಿದ್ದಾರೆ.
ಇನ್ನುಳಿದಂತೆ ಅದಿತಿ ಪ್ರಭುದೇವ್ ಅವರು ತೋತಾಪುರಿ, ದಿಲ್‌ಮಾರ್, ಒಂಬತ್ತನೇ ದಿಕ್ಕು, ಚಾಂಪಿಯನ್, ಓಲ್ಡ್ ಮಾಂಕ್, ಗಜಾನನ ಆಂಡ್ ಗ್ಯಾಂಗ್ ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











