'ಗಾಳಿಪಟ 2' ಸಿನಿಮಾಗೆ ಸಿಕ್ಕಳು ಮೂರನೇ ನಾಯಕಿ
ನಿರ್ದೇಶಕ ಯೋಗರಾಜ್ ಭಟ್ ಮತ್ತೆ 'ಗಾಳಿಪಟ' ಹಾರಿಸುತ್ತಿದ್ದಾರೆ. 'ಪಂಚತಂತ್ರ' ಸಿನಿಮಾದ ಬಳಿಕ 'ಗಾಳಿಪಟ 2' ಸಿನಿಮಾ ಕೆಲಸದಲ್ಲಿ ಅವರು ತೊಡಗಿದ್ದಾರೆ.
ಈ ಸಿನಿಮಾದ ಪ್ರಮುಖ ಸುದ್ದಿ ಇದೀಗ ಬಹಿರಂಗವಾಗಿದೆ. ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ಈ ಮೂಲಕ 'ಗಾಳಿಪಟ 2' ಮೂರನೇ ನಾಯಕಿಯ ಆಯ್ಕೆ ಆಗಿದೆ.
ಸಿನಿಮಾಲ್ಲಿ ಶರಣ್, ರಿಷಿ ಹಾಗೂ ಪವನ್ ಕುಮಾರ್ ನಾಯಕರಾಗಿದ್ದಾರೆ. ಈ ಪೈಕಿ ಅದಿತಿ ಪ್ರಭುದೇವ ಯಾರಿಗೆ ಜೋಡಿ ಎನ್ನುವುದು ಇನ್ನು ತಿಳಿದಿಲ್ಲ. ಉಳಿದಂತೆ, ಶರ್ಮಿಳಾ ಮಾಂಡ್ರೆ ಹಾಗೂ ಸೋನಾಲ್ ಮೊಂಥೆರೋ ಚಿತ್ರದಲ್ಲಿ ನಟಿಸುತ್ತಿದ್ದಾರೆ .

ಅದಿತಿ ಪ್ರಭುದೇವ ಈಗ ಶಾನೆ ಟಾಪ್ ನಲ್ಲಿ ಇದ್ದಾರೆ. ಸಾಲು ಸಾಲು ಅವಕಾಶಗಳು ಅವರ ಕೈ ನಲ್ಲಿದೆ. 'ಬ್ರಹ್ಮಾಚಾರಿ', 'ರಂಗನಾಯಕಿ', 'ತೋತಾಪುರಿ', 'ಸಿಂಗ', 'ಕುಸ್ತಿ', 'ಆಪರೇಷನ್ ನಕ್ಷತ್ರ' ಈ ಎಲ್ಲ ಅವಕಾಶಗಳು ಅದಿತಿ ಕೈ ಸೇರಿವೆ.

ಈ ಎಲ್ಲ ಚಿತ್ರಗಳ ಜೊತೆಗೆ 'ಗಾಳಿಪಟ 2' ಎಂಬ ಮೆಗಾ ಪ್ರಾಜೆಕ್ಟ್ ಗೆ ಕೂಡ ಅದಿತಿ ಹೀರೋಯಿನ್ ಆಗಿದ್ದಾರೆ. ಚೈನಿಸ್ ಅಥವಾ ಕೋಡಿಯನ್ ಬೆಡಗಿ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.


Click it and Unblock the Notifications











