'ಮುಂದುವರೆದ ಅಧ್ಯಾಯ' ಆರಂಭಿಸಿದ ಡೆಡ್ಲಿ ಆದಿತ್ಯ
ನಟ ಡೆಡ್ಲಿ ಆದಿತ್ಯ 'ಬೆಂಗಳೂರು ಅಂಡರ್ ವರ್ಲ್ಡ್' ಸಿನಿಮಾದ ನಂತರ ಯಾವುದೇ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಆದಿತ್ಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ಸಿಹಿ ವಿಚಾರ ತಿಳಿಸಿದ್ದಾರೆ.
ಆದಿತ್ಯ ಅಭಿನಯದ ಹೊಸ ಸಿನಿಮಾ ಮುಂದುವರೆದ ಅಧ್ಯಾಯ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ. ನಾರ್ಮ್ ಲ್ ಥ್ರಿಲ್ಲರ್ ಸಿನಿಮಾ ಮಾಡುವುದನ್ನ ಬಿಟ್ಟು ಜನರಿಗೆ ವಿಶೇಷವಾಗಿರುವುದನ್ನ ತಲುಪಿಸಬೇಕು ಎನ್ನುವ ಉದ್ದೇಶದಿಂದ ರೆವಲ್ಯೂಷನ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ ಬಾಲು ಚಂದ್ರಶೇಖರ್.

ಹುಟ್ಟುಹಬ್ಬದ ವಿಶೇಷವಾಗಿ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಬಾಲು ಚಂದ್ರಶೇಖರ್ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಮುಂದುವರೆದ ಅಧ್ಯಾಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸ್ವತಂತ್ರ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಛಾಯಾಗ್ರಹಣ ಮಾಡಿದ್ರೆ ಶ್ರೀಕಾಂತ್ ಸಂಕಲನ ಮಾಡುತ್ತಿದ್ದಾರೆ.

ಮುಂದುವರೆದ ಅಧ್ಯಾಯ ಸಿನಿಮಾದ ಚಿತ್ರೀಕರಣ ಜೂನ್ ನಿಂದ ಆರಂಭವಾಗುತ್ತಿದೆ. ಬೀಟ್ ಗುರು ತಂಡದಲ್ಲಿನ ಜಾನಿ ಮತ್ತು ನಿತಿನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕಣಜ ಎಂಟರ್ ಪ್ರೈಸಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ನಟ ಆದಿತ್ಯ ವಿಭಿನ್ನ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿ ಸಜ್ಜಾಗಿದ್ದಾರೆ.


Click it and Unblock the Notifications











