ಮಿಸ್ ಯೂನಿವರ್ಸ್: 4ನೇ ಸ್ಥಾನ ಪಡೆದ ಭಾರತದ ಆಡ್ಲೈನ್ ಕ್ಯಾಸ್ಟೆಲಿನೊ ಯಾರು? ಇಲ್ಲಿದೆ ಮಾಹಿತಿ

2021ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟ ಮೆಕ್ಸಿಕೊ ಸುಂದರಿಯ ಪಾಲಾಗಿದೆ. ಅಮೆರಿಕದ ಫ್ಲೋರಿಡಾದಲ್ಲಿ ನಡೆದ 69ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮೆಕ್ಸಿಕೊದ ಆಂಡ್ರಿಯಾ ಮೆಜಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

Recommended Video

ಕೊರೋನಾ ಪ್ರಶ್ನೆಗೆ ಉತ್ತರ ಕೊಟ್ಟು ಮಿಸ್ ಯೂನಿವರ್ಸ್ ಆದ್ರು ಆಂಡ್ರಿಯಾ ಮೆಜಾ | Filmibeat Kannada

ವಿಶ್ವದಾದ್ಯಂತ ಬಂದಿದ್ದ 73 ಸ್ಪರ್ಧಿಗಳ ಜೊತೆ ಸ್ಪರ್ಧಿಸಿ ಆಂಡ್ರಿಯಾ ಕಿರೀಟ ತನ್ನದಾಗಿಸಿಕೊಂಡಿದ್ದಾರೆ. ಟಾಪ್ 5 ಸ್ಥಾನದಲ್ಲಿ ಭಾರತದ ಸ್ಪರ್ಧಿ ಆಡ್ಲೈನ್ ಕ್ಯಾಸ್ಟೆಲಿನೊ ಜಾಗ ಪಡೆದಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಜೂಲಿಯಾ ಗಾಮಾ ಮತ್ತು 2ನೇ ರನ್ನರ್ ಆಗಿ ಪೆರುವಿನ ಜೆನಿಕ್ ಮಸೆಟಾ ಸ್ಥಾನ ಪಡೆದಿದ್ದಾರೆ.

ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದ ಭಾರತದ ಸ್ಪರ್ಧಿ ಆಡ್ಲೈನ್ ಕ್ಯಾಸ್ಟೆಲಿನೊ ಕರ್ನಾಟಕದ ಕರಾವಳಿ ಮೂಲದವರು ಎನ್ನುವುದೇ ಕನ್ನಡಿಗರಿಗೆ ಹೆಮ್ಮೆ. 3ನೇ ರನ್ನರ್ ಅಪ್ ಆಗಿರುವ ಆಡ್ಲೈನ್‌ಗೆ ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆಡ್ಲೈನ್ ಫೋಟೋ ಶೇರ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮುಂದೆ ಓದಿ...

ಉಡುಪಿ ಮೂಲದ ಮಾಡೆಲ್ ಆಡ್ಲೈನ್ ಕ್ಯಾಸ್ಟೆಲಿನೊ

ಉಡುಪಿ ಮೂಲದ ಮಾಡೆಲ್ ಆಡ್ಲೈನ್ ಕ್ಯಾಸ್ಟೆಲಿನೊ

1998ರಲ್ಲಿ ಆಡ್ಲೈನ್ ಕರ್ನಾಟಕದ ಉಡುಪಿ ಮೂಲದ ಕ್ಯಾಥೋಲಿಕ್ ಪೋಷಕರಿಗೆ ಜನಿಸಿದರು. ಕುವೈತ್ ನಲ್ಲಿ ಬೆಳೆದ ಆಡ್ಲೈನ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕುವೈತ್‌ನಲ್ಲೇ ಮುಗಿಸಿದರು. ಬಳಿಕ 15ನೇ ವಯಸ್ಸಿಗೆ ಮುಂಬೈ ಬಂದ ಆಡ್ಲೈನ್ ನಂತರದ ವಿದ್ಯಾಭ್ಯಾಸ ಮುಂಬೈನಲ್ಲಿ ಮುಗಿಸಿದರು. ವಿಲ್ಸನ್ ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಿಂದ ಪದವಿ ಪಡೆದರು.

ಸಾಮಾಜಿಕ ಕಾರ್ಯದಲ್ಲೂ ಭಾಗಿ

ಸಾಮಾಜಿಕ ಕಾರ್ಯದಲ್ಲೂ ಭಾಗಿ

ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿರುವ ಆಡ್ಲೈನ್ ಕ್ಯಾಸ್ಟೆಲಿನೊ ವಿಕಾಸ್ ಸಹಯೋಗ್ ಪ್ರತಿಷ್ಠಾನ್ ಎಂಬ ಕಲ್ಯಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ರೈತರ ಯೋಗಕ್ಷೇಮ ಮತ್ತು ಆತ್ಮಹತ್ಯೆ ನಿಗ್ರಹಿಸುವಲ್ಲಿ ಪ್ರಯತ್ನಿಸಿದ್ದಾರೆ. ಡ್ಯಾನ್ಸ್ ಅಂದರೆ ತುಂಬಾ ಇಷ್ಟ ಪಡುವ ಆಡ್ಲೈನ್ ನೃತ್ಯ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ.

ಲಿವಾ ಮಿಸ್ ದಿವಾ ಯೂನಿವರ್ಸ್ ಕಿರೀಟ ಗೆದ್ದಿರುವ ಆಡ್ಲೈನ್

ಲಿವಾ ಮಿಸ್ ದಿವಾ ಯೂನಿವರ್ಸ್ ಕಿರೀಟ ಗೆದ್ದಿರುವ ಆಡ್ಲೈನ್

2020ರಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್ ಕಿರೀಟ ಗೆದ್ದಿದ್ದಾರೆ. ಈ ಸಮಯದಲ್ಲಿ ಹುಟ್ಟೂರು ಉಡುಪಿಗೆ ಆಗಮಿಸಿದ್ದ ಆಡ್ಲೈನ್ ಅವರನ್ನು ಅದ್ದೂರಿ ಸ್ವಾಗತ ಮಾಡಲಾಗಿತ್ತು. ಮೆರವಣಿಗೆ ಮೂಲಕ ಹುಟ್ಟೂರಿಗೆ ಬರಮಾಡಿಕೊಳ್ಳಲಾಗಿತ್ತು.

ಹುಟ್ಟೂರಿನಲ್ಲಿ ಸಂತಸ

ಹುಟ್ಟೂರಿನಲ್ಲಿ ಸಂತಸ

ಸದ್ಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗಿಯಾಗಿ 4ನೇ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಆಡ್ಲೈನ್ ತನ್ನ ಹುಟ್ಟೂರಿಗೆ ಯಾವಾಗ ಆಗಮಿಸಲಿದ್ದಾರೆ? ಈ ಬಾರಿ ಹೇಗೆ ಸ್ವಾಗತ ಮಾಡಲಿದೆ ಊರು ಎನ್ನುವುದು ಕುತೂಹಲ ಮೂಡಿಸಿದೆ. ಆಡ್ಲೈನ್ ಸಾಧನೆಗೆ ಹುಟ್ಟೂರು ಉಡುಪಿಯಲ್ಲೂ ಸಂತಸ ಮನೆ ಮಾಡಿದೆ.

More from Filmibeat

English summary
Miss Universe 2021: Adline Castelino bags 4th place at Miss Universe. All you need to know about her?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X