»   » ಭೀಗೀ ಭೀಗೀ ರಾತೋಂ ಮೇಂ,,

ಭೀಗೀ ಭೀಗೀ ರಾತೋಂ ಮೇಂ,,

Posted By: Staff
Subscribe to Filmibeat Kannada

'ಕಭೀ ತೊ ನಜಾರ್‌ ಮಿಲಾವೋ" ಪಾಪ್‌ ಆಲ್ಬಂನಿಂದ ರಾತ್ರೋ ರಾತ್ರಿ ಮನೆಮಾತಾದ ಅದ್ನಾನ್‌ ಸಮಿ ಖಾನ್‌ ಕನ್ನಡದಲ್ಲಿ ಹಾಡಲಿದ್ದಾರೆ ! ಉಪೇಂದ್ರ ಗೆಳೆಯ ಹನುಮಂತು ನಿರ್ಮಾಣದ 'ಸೂಪರ್‌ ಸ್ಟಾರ್‌" ಚಿತ್ರಕ್ಕೆ ಹಂಸಲೇಖಾ ಟ್ಯೂನಿನಲ್ಲಿ ಸಮಿ ಹಾಡು ರೆಕಾರ್ಡ್‌ ಆಗಲಿದೆ.

'ಉಪೇಂದ್ರ" ಚಿತ್ರದಲ್ಲಿ ಉದಿತ್‌ ನಾರಾಯಣ್‌ ಅವರನ್ನು ಕರೆ ತಂದು ಹಾಡಿಸಿದ ಉಪೇಂದ್ರ, ಇನ್ನೂ ತೆರೆ ಕಾಣಬೇಕಿರುವ ಧನರಾಜ್‌ ನಿರ್ಮಾಣದ 'ಎಚ್‌ಟುಓ"ಗೆ ಹರಿಹರನ್‌, ಶಂಕರ್‌ ಮಹಾದೇವನ್‌ ಅವರನ್ನು ಕರೆಸಿ, ತಾವೂ ಅವರೊಡನೆ ನಿಂತು ಹಾಡಿ ಹೊಸತನ ಮೆರೆದವರು ! ಗಣೇಶನ ಪೆಂಡಾಲ್‌ಗಳಲ್ಲಿ 'ಎಚ್‌ಟುಓ" ಗೀತೆಗಳು ಈಗಲೂ ಮೊಳಗುತ್ತಿವೆ.

ಏನಾದರೊಂದು ಹೊಸತನ್ನು ಮಾಡುತ್ತಲೇ ಇರುವ ಉಪೇಂದ್ರ ಹಾಗೂ ಹೊಸ ಗಾಯಕರನ್ನು ಕನ್ನಡಕ್ಕೆ ಕೊಟ್ಟು, ಈಗ ಕನ್ನಡೇತರರಿಂದಲೂ ಹಾಡಿಸುತ್ತಿರುವ ಹಂಸಲೇಖಾ ಅವರ ಸಮಿ ಅವರನ್ನು ಕನ್ನಡಕ್ಕೆ ಪರಿಚಯಿಸುವ ಐಡಿಯಾ ಕ್ಲಿಕ್ಕಾಗುವುದೋ ಇಲ್ಲವೋ ನೋಡಬೇಕು. ಅಂದಹಾಗೆ, ಸಮಿ ಹಾಡಿರುವ ಮೊದಲ ಚಿತ್ರ 'ಅಜ್‌ನಬೀ" ಕೆಸೆಟ್ಟುಗಳು ಗೋಬಿ ಮಂಚೂರಿಯಂತೆ ಬಿಕರಿಯಾಗುತ್ತಿವೆ.

ಉದಿತ್‌, ಹರಿಹರನ್‌, ಸೋನು ನಿಗಮ್‌, ಶಂಕರ್‌ ಮಹಾದೇವನ್‌ ಯಾದಿಗೆ ಅದ್ನಾನ್‌ ಸಮಿ ಹೊಸ ಸೇರ್ಪಡೆ ಎನ್ನಲಿಕ್ಕೆ ಅಡ್ಡಿಯಿಲ್ಲ. ಈ ಹೊಸತನದ ಭರಾಟೆಯಲ್ಲಿ ರಾಜೇಶ್‌ ಕೃಷ್ಣ ನ್‌ ತಂಡ ಪರದೆಗೆ ಸರಿಯದಿದ್ದರೆ ಸಾಕು. 

English summary
Indi Pop sensation Adnan Sami to sing in Kannada movie Superstar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada