'45' ಹಾಗೂ 'ಮಾರ್ಕ್' ಚಿತ್ರಗಳ ಅಡ್ವಾನ್ಸ್ ಬುಕ್ಕಿಂಗ್ ಓಪನ್; ಟಿಕೆಟ್ ದರ ಎಷ್ಟು? ಹೇಗಿದೆ ರೆಸ್ಪಾನ್ಸ್?

ಕ್ರಿಸ್‌ಮಸ್ ಸಂಭ್ರಮಾಚರಣೆಗೆ 3 ದಿನ ಬಾಕಿಯಿದೆ. ಈ ಬಾರಿ ಡಿಸೆಂಬರ್‌ 25ಕ್ಕೆ ಬಾಕ್ಸಾಫೀಸ್‌ನಲ್ಲಿ ಕೂಡ ಆರ್ಭಟ ಜೋರಾಗಿ ಇರಲಿದೆ. ಕನ್ನಡದ ಬಹುನಿರೀಕ್ಷಿತ '45' ಹಾಗೂ 'ಮಾರ್ಕ್' ಚಿತ್ರಗಳು ಒಟ್ಟಿಗೆ ಬಿಡುಗಡೆ ಆಗ್ತಿದೆ. ಈಗಾಗಲೇ 2 ಚಿತ್ರಗಳ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ.

ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಹಳ ಸದ್ದು ಮಾಡ್ತಿದೆ. 'ಮ್ಯಾಕ್ಸ್' ಕಾಂಬಿನೇಷನ್‌ನಲ್ಲೇ ಈ ಸಿನಿಮಾ ಮೂಡಿ ಬಂದಿರುವುದು ವಿಶೇಷ. ಮೊತ್ತೊಮ್ಮೆ ಪೊಲೀಸ್ ಆಫೀಸರ್ ಆಗಿ ಸುದೀಪ್ ದುಷ್ಟರ ಬೇಟೆಗೆ ಇಳಿದಿದ್ದಾರೆ. 6 ತಿಂಗಳ ಹಿಂದೆಯೇ ಡಿಸೆಂಬರ್ 25ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಕಿಚ್ಚ ಹೇಳಿದ್ದರು. ಅದರಂತೆ ಸಿನಿಮಾ ತೆರೆಗೆ ಬರ್ತಿದೆ.

Advance Booking Rush Ahead of Christmas Mark and 45 Set for Massive Kannada Box Office Clash

ಗುರುವಾರ(ಡಿಸೆಂಬರ್ 25) ಬೆಳಗ್ಗೆ 6 ಗಂಟೆಗೆ 'ಮಾರ್ಕ್' ಸಿನಿಮಾ ತೆರೆಗಪ್ಪಳಿಸಲಿದೆ. ಸದ್ಯ 50ಕ್ಕೂ ಅಧಿಕ ಶೋಗಳ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಮೊದಲ ದಿನ(ಡಿಸೆಂಬರ್ 20) 9 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ. 5 ಶೋಗಳ ಟಿಕೆಟ್ ಈಗಾಗಲೇ ಸೋಲ್ಡೌಟ್ ಆಗಿ ಭರ್ಜರಿ ಕಲೆಕ್ಷನ್ ಮಾಡಿದೆ. ಎಲ್ಲಾ ಕಡೆಗಳಲ್ಲಿ ಬುಕ್ಕಿಂಗ್ ಆರಂಭವಾದ ಬಳಿಕ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸದ್ಯ ಗಂಟೆಗೆ 1 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ಕಿಂಗ್ ನಡೀತಿದೆ.

ಟಿಕೆಟ್ ದರದ ವಿಚಾರಕ್ಕೆ ಬಂದರೆ 'ಮಾರ್ಕ್' ಫ್ಯಾನ್ಸ್ ಶೋ ಟಿಕೆಟ್ ದರ ಹೆಚ್ಚಿಸಲಾಗಿದೆ. ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಬೆಳಗಿನ 6 ಗಂಟೆ ಶೋಗಳ ಟಿಕೆಟ್ 400 ರೂ. ಹಾಗೂ 500 ರೂ. ಇದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ 500 ರೂ.ಗೆ ಟಿಕೆಟ್ ದರ ಹೆಚ್ಚಿಸಿರುವುದನ್ನ ಗಮನಿಸಬಹುದು. ಹಾಗಾಗಿ ದೊಡ್ಡಮಟ್ಟದಲ್ಲಿ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ. ಇತ್ತೀಚೆಗೆ 'ಕಾಂತಾರ-1' ಹಾಗೂ 'ಡೆವಿಲ್' ಚಿತ್ರಗಳ ಟಿಕೆಟ್ ದರ ಕೂಡ ಹೆಚ್ಚಿಸಲಾಗಿತ್ತು.

ಮತ್ತೊಂದು ಕಡೆ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಕೂಡ ಇಂದಿನಿಂದ(ಡಿಸೆಂಬಬರ್ 21) ಆರಂಭವಾಗಿದೆ. ಒಂದು ದಿನ ಮುನ್ನ ಸಿನಿಮಾ ಪ್ರೀಮಿಯರ್ ಶೋಗಳು ನಡೆಯಲಿದೆ. ಹಾಗಾಗಿ ಗುರುವಾರ ಸಂಜೆ ಶೋಗಳ ಟಿಕೆಟ್ ಆನ್‌ಲೈನ್‌ನಲ್ಲಿ ಲಭ್ಯವಿದೆ. ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ರಾತ್ರಿ 7.45 ಶೋ ಟಿಕೆಟ್ ಸೋಲ್ಡೌಟ್ ಆಗಿದೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ಚಿತ್ರದಲ್ಲಿ ನಟಿಸಿದ್ದು ಟ್ರೈಲರ್ ಹಿಟ್ ಆಗಿ ನಿರೀಕ್ಷೆ ಹೆಚ್ಚಿಸಿದೆ.

'45' ಸಿನಿಮಾ ಪ್ರೀಮಿಯರ್ ಶೋಗಳ ಟಿಕೆಟ್ ದರ ಹೆಚ್ಚಿಸಿಲ್ಲ. ಗುರುವಾರದ ರಾತ್ರಿ ಶೋಗಳ ಟಿಕೆಟ್ 200 ರೂ. ಹಾಗೂ 250 ರೂ. ಮಾತ್ರ ಇದೆ. ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಇದು ಸಹಾಯ ಮಾಡಲಿದೆ. ಕೆಲವೇ ಶೋಗಳ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಮಾರ್ಕ್ ಸಿನಿಮಾ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದೆ. '45' ಚಿತ್ರಕ್ಕೆ ತ್ರಿವೇಣಿ ಮೇನ್ ಥಿಯೇಟರ್ ಆಗಿರಲಿದೆ. ಎರಡು ದೊಡ್ಡ ಸಿನಿಮಾಗಳು ಒಮ್ಮೆಲೆ ಬಿಡುಗಡೆ ಆಗುತ್ತಿರುವುದರಿಂದ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಸುಳಿವು ಸಿಕ್ತಿದೆ.

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜಾ ದಿನಗಳು ಎರಡೂ ಚಿತ್ರಗಳಿಗೆ ಪ್ಲಸ್ ಆಗುವ ಸಾಧ್ಯತೆಯಿದೆ. ಕಳೆದ ವರ್ಷ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಯುಐ' ಚಿತ್ರದ ಎದರು ಸುದೀಪ್ ನಟಿಸಿದ್ದ 'ಮ್ಯಾಕ್ಸ್' ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸರಿಯಾಗಿ ವರ್ಷದ ಬಳಿಕ ಅಂಥದ್ದೇ ವಾತಾವರಣ ನಿರ್ಮಾಣವಾಗಿದೆ. ಮಲಯಾಳಂ ಸಿನಿಮಾ 'ವೃಷಭ' ಸೇರಿ ಹಲವು ಸಿನಿಮಾಗಳು ಈ ವಾರ ತೆರೆಗೆ ಬರ್ತಿವೆ.

More from Filmibeat

Read more about: sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X