ಹಾರರ್ ಕಾಮಿಡಿ 'ಇಲ್ಲ್ ಒಕ್ಕೆಲ್' ತುಳು ಚಿತ್ರದ ಹೊಸ ಟ್ರೈಲರ್ ರಿಲೀಸ್

By ಫಿಲ್ಮಿ ಬೀಟ್ ಕನ್ನಡ ಡೆಸ್ಕ್

ಡಾ. ಸುರೇಶ್ ಚಿತ್ರಾಪು ನಿರ್ದೇಶನದ 'ಇಲ್ಲ್ ಒಕ್ಕೆಲ್' ತುಳು ಚಿತ್ರದ ಹೊಸ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಕಾಮಿಡಿ ಹಾರರ್ ಸಿನಿಮಾ ಅಕ್ಟೋಬರ್ 21ಕ್ಕೆ ತುಳುನಾಡಿನಾದ್ಯಂತ ತೆರೆಗಪ್ಪಳಿಸಲಿದೆ. ಈಗಾಗಲೇ 'ಇಲ್ಲ್ ಒಕ್ಕೆಲ್' ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದ್ದು, ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಮೂಡಿಸಿದೆ.

ಮಂಗಳೂರು ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಪಿಲಿನಲಿಕೆ ಕಾರ್ಯಕ್ರಮದಲ್ಲಿ 'ಇಲ್ಲ್ ಒಕ್ಕೆಲ್' ತುಳು ಚಿತ್ರದ ಹೊಸ ಟ್ರೈಲರ್ ಬಿಡುಗಡೆ ಆಗಿದೆ. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಪಿಲಿನಲಿಕೆ ಪ್ರತಿಷ್ಢಾನದ ಅಧ್ಯಕ್ಷ ಮಿಥುನ್ ರೈ, ಚಿತ್ರದ ನಿರ್ದೇಶಕ ಸಹ ನಿರ್ಮಾಪಕ ಡಾ. ಸುರೇಶ್ ಚಿತ್ರಾಪು, ನಿರ್ಮಾಪಕ ವಾಸುದೇವ್ ಎಸ್. ಚಿತ್ರಾಪು, ಮುಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್, ಡಾ.ಪ್ರಿಯಾ ಹರೀಶ್ ಮತ್ತು ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದರು ಉಪಸ್ಥಿತರಿದ್ದರು.

Advithi Shetty Starrer Tulu Movie illokkel New trailer Released

ಇದೊಂದು ಸಂಪೂರ್ಣ ಹಾಸ್ಯಮಯ ಹಾರರ್ ಚಿತ್ರವಾಗಿದ್ದು ಜೆ. ಎಸ್ ರಾಜ ಶಾ ಸಂಗೀತ ನೀಡಿದ್ದು, ಟಿಪ್ಪು, ರಘು ದೀಕ್ಷಿತ್, ಮೈಂ ರಾಮ್ ದಾಸ್ ಹಾಡಿರುವ ಹಾಡುಗಳು ಸದ್ದು ಮಾಡ್ತಿದೆ. ಸ್ಯಾಂಡಲ್‌ವುಡ್ ನಟಿ ಅದ್ವಿತಿ ಶೆಟ್ಟಿ ಈ ಚಿತ್ರದ ನಾಯಕಿಯಾಗಿ ನಟಿಸಿರುವುದು ವಿಶೇಷ. ಚಿತ್ರದಲ್ಲಿ ಹಾಸ್ಯ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ವಿ. ಜೆ. ವಿನೀತ್ ಕುಮಾರ್, ವಿಸ್ಮಯ ವಿನಾಯಕ್ ಉಮೇಶ್ ಮಿಜಾರು, ಸುನಿಲ್ ನೆಲ್ಲಿಗುಡ್ಡೆ, ಮೈಮ್ ರಾಮದಾಸ್, ರಾಜೇಶ್ ಪೂಜಾರಿ, ರಾದೇಶ್ ಶೆಣೈ, ಚಂದ್ರಕಲಾ ಮೋಹನ್, ರೂಪ ವರ್ಕಾಡಿ, ಯಕ್ಷಗಾನದ ಚಾರ್ಲಿ ಚಾಪ್ಲಿನ್ ಸೀತಾರಾಮ್ ಕಟೀಲ್ ಹಾಗೂ ನಿರೀಕ್ಷಾ ಶೆಟ್ಟಿ ಅಭಿನಯಿಸಿದ್ದಾರೆ.

ಶ್ರೀಗಜನಿ ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿ ಬಂದಿರುವ 'ಇಲ್ಲ್ ಒಕ್ಕೆಲ್' ಚಿತ್ರದ 'ಟಕಿಲಾ ಟಕಿಲಾ' ಹಾಡನ್ನು ಕೆಲ ದಿನಗಳಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರಿಲೀಸ್ ಮಾಡಿದ್ದರು. ನಿರ್ದೇಶಕ ಡಾ. ಸುರೇಶ್ ಚಿತ್ರಾಪು ಸಾಹಿತ್ಯ ಬರೆದಿರುವ ಈ ಹಾಡನ್ನು ಟಿಪ್ಪು ಹಾಡಿದ್ದಾರೆ. ಚಿತ್ರಕ್ಕೆ ವಾಸುದೇವ್ ಎಸ್. ಚಿತ್ರಾಪು ಬಂಡವಾಳ ಹೂಡಿದ್ದಾರೆ.

Advithi Shetty Starrer Tulu Movie illokkel New trailer Released

'ಇಲ್ಲ್ ಒಕ್ಕೆಲ್' ಒಂದು ಪ್ರಯೋಗಾತ್ಮಕ ಸಿನಿಮಾ ಆಗಿದ್ದು, ಮನರಂಜನೆಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಸಿನಿಮಾ ನಿರ್ಮಿಸಿದ್ದಾರೆ. ಮನೆ ಕಟ್ಟಿ ಕೊಡುವಲ್ಲಿನ ಅವಸರದ ಸನ್ನಿವೇಶವನ್ನು ಹಿಡಿದುಕೊಂಡು ಬಹಳ ತಮಾಷೆಯಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಮೊದಲಿಗೆ ಕಾಮಿಡಿ ಸಿನಿಮಾ ಅನ್ನಿಸಿದರು ನಿಧಾನವಾಗಿ ಹಾರರ್ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಒಂದೊಳ್ಳೆ ಮೆಸೇಜ್ ಕೂಡ ಸಿನಿಮಾದಲ್ಲಿದೆ.

More from Filmibeat

English summary
Advithi Shetty Starrer Tulu Movie illokkel New trailer Released. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X