ಕೆಜಿಎಫ್ ಆಡಿಷನ್ ನಲ್ಲಿ 'ಬುಲ್ ಬುಲ್' ಡೈಲಾಗ್ ಹೊಡೆದ ಆಫ್ರಿಕಾ ಅಭಿಮಾನಿ
Recommended Video
ಶುಕ್ರವಾರ ಬೆಂಗಳೂರಿನಲ್ಲಿ ಜನವೋ ಜನ. ಮಲ್ಲೇಶ್ವರಂನ ಬೀದಿ ಬೀದಿಯಲ್ಲೂ ಜನಸಾಗರ. ಕಿಲೋ ಮೀಟರ್ ಗಟ್ಟಲೇ ಸಾಲಿನಲ್ಲಿ ನಿಂತಿರುವ ಯುವಕರು. ವಾಹನಗಳಲ್ಲಿ ಓಡಾಡುತ್ತಿದ್ದವರೆಲ್ಲಾ ಈ ಜನರನ್ನ ನೋಡಿ ಒಂದು ಕ್ಷಣ ಅಚ್ಚರಿಯಾಗಿದ್ದರು.
ಹೌದು, ನಿನ್ನೆ ಕೆಜಿಎಫ್ 2 ಚಿತ್ರದ ಆಡಿಷನ್ ಹಮ್ಮಿಕೊಳ್ಳಲಾಗಿತ್ತು. ಈ ಆಡಿಷನ್ ನಲ್ಲಿ ಭಾಗವಹಿಸಲು ದೇಶದ ಮೂಲೆ ಮೂಲೆಯಿಂದಲೂ ಜನರು ಆಗಮಿಸಿದ್ದರು. ಪುಣೆ, ಕೊಯಮತ್ತೂರ್, ಗುಲ್ಬರ್ಗ, ಹುಬ್ಬಳ್ಳಿ, ಚೆನ್ನೈ, ಕೋಲಾರ್ ಹೀಗೆ ಅನೇಕ ಕಡೆಯಿಂದ ಅಭಿಮಾನಿಗಳು ಆಗಮಿಸಿದ್ದರು.
ಈ ವೇಳೆ ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಎಲ್ಲರ ಗಮನ ಸೆಳೆದ. ಕೆಜಿಎಫ್ ಆಡಿಷನ್ ನಲ್ಲಿ ಭಾಗವಹಿಸಿದ್ದ ಈ ಅಭಿಮಾನಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡೈಲಾಗ್ ಹೊಡೆದರಂತೆ. ಹಾಗಿದ್ರೆ, ಈ ಆಫ್ರಿಕಾ ಅಭಿಮಾನಿ ಯಾರು? ಹೇಗಿತ್ತು ಈ ಅಭಿಮಾನಿಯ ಆಡಿಷನ್ ಮುಂದೆ ಓದಿ....

ಹೆಸರು 'ರೋಬೋ', ಊರು ಆಫ್ರಿಕಾ
ಆಫ್ರಿಕಾ ಮೂಲದ ರೋಬೋ ಎಂಬ ವ್ಯಕ್ತಿ ಬೆಂಗಳೂರಿನಲ್ಲಿ ಯಲಹಂಕದಲ್ಲಿ ನೆಲೆಸಿದ್ದಾರೆ. ಕೆಜಿಎಫ್ ಚಾಪ್ಟರ್ 1 ಸಿನಿಮಾ ನೋಡಿ ತುಂಬಾ ಇಷ್ಟಪಟ್ಟಿದ್ದಾರೆ. ಚಾಪ್ಟರ್ 2 ಚಿತ್ರದಲ್ಲಿ ನಟಿಸಲು ಆಡಿಷನ್ ಇರೋದು ಸ್ನೇಹಿತರೊಬ್ಬರಿಂದ ತಿಳಿದು ಆಡಿಷನ್ ನಲ್ಲಿ ಭಾಗವಹಿಸಿದ್ದಾರೆ.

ದರ್ಶನ್ ಡೈಲಾಗ್ ಹೇಳಿದ್ರಂತೆ
ಆಡಿಷನ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ತು ಎಂದು ಸಂತಸ ಹಂಚಿಕೊಂಡ ರೋಬೋ, ಆಡಿಷನ್ ನಲ್ಲಿ ದರ್ಶನ್ ಅವರ ಡೈಲಾಗ್ ಹೊಡೆದು ಗಮನ ಸೆಳೆದಿದ್ದಾರೆ. ಬುಲ್ ಬುಲ್ ಮಾತಾಡಿಕಿಲ್ವಾ? ಎಂದು ಹೇಳಿದ್ದರಂತೆ. ಬುಲ್ ಬುಲ್ ಸಿನಿಮಾದಲ್ಲಿ ದರ್ಶನ್ ಈ ಡೈಲಾಗ್ ಹೇಳಿದ್ದರು. ಅದಕ್ಕೂ ಮುಂಚೆ ರೆಬೆಲ್ ಸ್ಟಾರ್ ಅಂಬರೀಶ್ ನಾಗರಹಾವು ಸಿನಿಮಾದಲ್ಲಿ ಈ ಡೈಲಾಗ್ ಹೇಳಿದ್ದರು.

ಗಾಂಚಲಿ ಬಿಡಿ ಕನ್ನಡ ಮಾತಾಡಿ
ಆಫ್ರಿಕಾದವರದಾರೂ ಕನ್ನಡವನ್ನ ಸಲೀಸಾಗಿ ಮಾತನಾಡುವ ರೋಬೋ ಗಾಂಚಲಿ ಬಿಡಿ ಕನ್ನಡ ಮಾತಾಡಿ ಎಂದು ವಲಸಿಗರಿಗೆ ಸಂದೇಶ ಕೂಡ ಕೊಟ್ಟಿದ್ದಾರೆ. ಇದನ್ನ ಆಡಿಷನ್ ನಲ್ಲೂ ಹೇಳಿದ್ರಂತೆ. ರೋಬೋ ಅವರ ಕನ್ನಡ ಶೈಲಿ ಕೇಳಿ ಆಡಿಷನ್ ಮಾಡಿದವರರು ಕೂಡ ಖುಷಿಯಾದರಂತೆ.

ಯಶ್ ಅಭಿಮಾನಿ ಅಂತೆ
ಕೆಜಿಎಫ್ ಸಿನಿಮಾ ಫುಲ್ ಥ್ರಿಲ್ ಆಗಿದ್ದ ರೋಬೋ ಯಶ್ ಅವರ ಅಭಿಮಾನಿ. ಒಂದು ವೇಳೆ ಕೆಜಿಎಫ್ 2 ಸಿನಿಮಾದಲ್ಲಿ ಅವಕಾಶ ಸಿಕ್ಕರೇ ಸಿಕ್ಕಾಪಟ್ಟೆ ಸೆಲೆಬ್ರೇಷನ್ ಮಾಡ್ತಾರಂತೆ. ವಿಲನ್ ಪಾತ್ರವನ್ನ ನಿರೀಕ್ಷೆ ಮಾಡ್ತಿದ್ದಾರೆ ಎಂದು ರೋಬೋ ತಿಳಿಸಿದ್ದಾರೆ.


Click it and Unblock the Notifications











