15 ವರ್ಷದ ಬಳಿಕ ಆತ್ಮೀಯ ಗೆಳತಿ ಜೊತೆ ಸಂತೋಷದ ಕ್ಷಣ ಕಳೆದ ಶ್ರೀಮುರಳಿ

Recommended Video

ಮಾನ್ಯ, ಶ್ರೀ ಮುರಳಿ ಗೆಳೆತನ ಎಂತದ್ದು ಗೊತ್ತಾ..? | Sri Murali | FILMIBEAT KANNADA

ದಿನನಿತ್ಯದ ನಮ್ಮ ಕೆಲಸಗಳ ನಡುವೆ, ಕೆಲವೊಂದು ಬಾರಿ ಸ್ನೇಹಿತರನ್ನು ಭೇಟಿ ಮಾಡಲು ಸಮಯ ಆಗುವುದಿಲ್ಲ. ಮುಂದಿನ ವಾರ.. ಮುಂದಿನ ತಿಂಗಳು.. ಎಂದು ಮುಂದೆ ಹಾಕುತ್ತಾ ಕೊನೆಗೆ ಎಂದೋ ಆ ಕಾಲ ಕೂಡಿ ಬರುತ್ತದೆ.

ಇದೇ ರೀತಿ ನಟ ಶ್ರೀಮುರಳಿಗೆ ಸಹ ತಮ್ಮ ಸಿನಿಮಾಗಳ ಕೆಲಸಗಳ ನಡುವೆ ಆತ್ಮೀಯ ಗೆಳತಿಯನ್ನು ಭೇಟಿ ಮಾಡಲು ಆಗಿರಲಿಲ್ಲ. ಇದೀಗ 15 ವರ್ಷದ ನಂತರ ಅಂತೂ ಆ ಸಮಯ ಒದಗಿ ಬಂದಿದೆ. ತಮ್ಮ ಮನಸ್ಸಿಗೆ ಬಹಳ ಹತ್ತಿರ ಆಗಿರುವ ಗೆಳತಿಯನ್ನು ಒಂದೂವರೆ ದಶಕದ ನಂತರ ಎದುರಾಗಿದ್ದಾರೆ. ಅಂದಹಾಗೆ, ಶ್ರೀಮುರಳಿ ಗೆಳತಿ ಬೇರೆ ಯಾರು ಅಲ್ಲ ನಟಿ ಮಾನ್ಯ.

ನ್ಯೂಯರ್ಕ್ ನಲ್ಲಿ ಮುರಳಿ - ಮಾನ್ಯ ಭೇಟಿ

ನ್ಯೂಯರ್ಕ್ ನಲ್ಲಿ ಮುರಳಿ - ಮಾನ್ಯ ಭೇಟಿ

ನಟ ಶ್ರೀಮುರಳಿ ಈಗ ತುಂಬ ಖುಷಿಯಲ್ಲಿ ಇದ್ದಾರೆ. ಅದಕ್ಕೆ ಕಾರಣ ಆಗಿರುವುದು ನಟಿ ಮಾನ್ಯ. ಶ್ರೀ ಮುರಳಿ ಹಾಗೂ ಮಾನ್ಯ ನಡುವೆ ಒಳ್ಳೆಯ ಸ್ನೇಹ ಇದೆ. ಆದರೆ, ಅವರು ಅನೇಕ ವರ್ಷಗಳ ಭೇಟಿ ಆಗಲು ಆಗಿರಲಿಲ್ಲ. ಮದುವೆಯ ಬಳಿಕ ಅಮೇರಿಕಾದಲ್ಲಿ ಮಾನ್ಯ ವಾಸವಾಗಿದ್ದಾರೆ. ಇತ್ತ ಶ್ರೀಮುರಳಿ ಕೂಡ ತಮ್ಮ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಇದ್ದರು. ಇದೀಗ 15 ವರ್ಷದ ನಂತರ ನ್ಯೂಯರ್ಕ್ ನಲ್ಲಿ ಇವರಿಬ್ಬರು ಭೇಟಿ ಮಾಡಿದ್ದಾರೆ.

ಗೆಳತಿಯ ಜೊತೆಗೆ ಬೀದಿ ಸುತ್ತಿದ ಅಗಸ್ತ್ಯ

ಗೆಳತಿಯ ಜೊತೆಗೆ ಬೀದಿ ಸುತ್ತಿದ ಅಗಸ್ತ್ಯ

ಶ್ರೀಮುರಳಿ ಮತ್ತು ಮಾನ್ಯ ಭೇಟಿ ಮಾಡಿರುವ ವಿಡಿಯೋವನ್ನು ಶ್ರೀಮುರಳಿ ಪತ್ನಿ ವಿದ್ಯಾ ಶ್ರೀಮುರಳಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''15 ವರ್ಷದ ನಂತರ ಮತ್ತೆ ಶ್ರೀಮುರಳಿ ಭೇಟಿ ಮಾಡಿದ್ದು, ಇಂದಿಗೂ ನಮ್ಮ ಸ್ನೇಹ ಹೀಗೆ ಇದೆ'' ಎಂದು ಮಾನ್ಯ ಸಂತಸ ವ್ಯಕ್ತ ಪಡಿಸಿದ್ದಾರೆ. ಮುಂದೆ ಎಂದೆಂದಿಗೂ ಈ ಸ್ನೇಹ ಹೀಗೆಯೇ ಮುಂದುವರೆಯುತ್ತದೆ ಎಂದಿದ್ದಾರೆ.

ಮಾನ್ಯ ಕುಟುಂಬದ ಜೊತೆಗೆ ಸಂತೋಷ ಕೂಟ

ಮಾನ್ಯ ಕುಟುಂಬದ ಜೊತೆಗೆ ಸಂತೋಷ ಕೂಟ

ಮಾನ್ಯ ನೋಡಲು ನ್ಯೂಯರ್ಕ್ ಗೆ ಹೋಗಿದ್ದ ಶ್ರೀಮುರಳಿಗೆ ಒಳ್ಳೆಯ ಆತಿಥ್ಯ ಸಿಕ್ಕಿದೆ. ಮಾನ್ಯ ಅವರ ಇಡೀ ಕುಟುಂಬ ಮುರಳಿರನ್ನು ಖುಷಿಯಿಂದ ಸ್ವಾಗತ ಮಾಡಿದೆ. ಮಾನ್ಯ ತಾಯಿಯ ಆರೋಗ್ಯ ವಿಚಾರಿಸಿದ ಮುರಳಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಾನ್ಯ ಮಗಳ ಜೊತೆಗೆ ಆಟ ಆಡಿದ್ದಾರೆ. ಮಾನ್ಯ ಕುಟುಂಬ ಶ್ರೀಮುರಳಿಗಾಗಿ ವಿಶೇಷ ಸಂತೋಷ ಕೂಟ ಏರ್ಪಾಡು ಮಾಡಿತ್ತು.

'ಶಂಭು' ಸಿನಿಮಾದಲ್ಲಿ ಒಟ್ಟಿಗೆ ನಟನೆ

'ಶಂಭು' ಸಿನಿಮಾದಲ್ಲಿ ಒಟ್ಟಿಗೆ ನಟನೆ

2005 ರಲ್ಲಿ ತೆರೆಕಂಡ ಡಾ.ವಿಷ್ಣುವರ್ಧನ್ ಅಭಿನಯದ 'ವರ್ಷ' ಚಿತ್ರದ ಮೂಲಕ ಮಾನ್ಯ ಚಿತ್ರರಂಗಕ್ಕೆ ಬಂದರು. ಆ ನಂತರ ದರ್ಶನ್ ಅಭಿನಯದ 'ಶಾಸ್ತ್ರಿ', 'ಬೆಳ್ಳಿ ಬೆಟ್ಟ', 'ಅಂಬಿ', 'ಈ ಪ್ರೀತಿ ಒಂಥರಾ' ಸಿನಿಮಾಗಳಲ್ಲಿ ನಟಿಸಿದರು. 'ಶಂಭು' ಚಿತ್ರಗಳಲ್ಲಿ ಶ್ರೀಮುರಳಿ ಹಾಗೂ ಮಾನ್ಯ ಒಟ್ಟಿಗೆ ನಟಿಸಿದ್ದಾರೆ. ತಮಿಳು, ತೆಲುಗು ಹಾಗೂ ಮಲೆಯಾಳಂನಲ್ಲಿಯೂ ಮಾನ್ಯ ಅಭಿನಯಿಸಿದ್ದರು.

More from Filmibeat

English summary
After 15 years actor Srimurali met his best friend, actress Manya in New York.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X