17 ವರ್ಷಗಳ ನಂತರ ತೆರೆ ಹಂಚಿಕೊಳ್ಳಲಿರುವ ಶಾರುಖ್ ಖಾನ್, ಅಮಿತಾಬ್ ಬಚ್ಚನ್!

ಹಿಂದಿ ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಶೀಘ್ರದಲ್ಲೇ ಹೊಸ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬರೋಬ್ಬರಿ 17 ವರ್ಷಗಳ ನಂತರ ಇಬ್ಬರು ನಟರು ಒಟ್ಟಿಗೆ ಬೆಳ್ಳಿ ಪರದೆಯ ಮೇಲೆ ಸಿನಿಪ್ರೇಮಿಗಳ ಕಣ್ಣಿಗೆ ಹಬ್ಬ ನೀಡಲಿದ್ದಾರೆ ಎಂಬ ಮಾಹಿತಿಯಿದೆ.

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದಿದ್ದರೂ, ಅಮಿತಾಬ್ ಬಚ್ಚನ್ ಮತ್ತು ಶಾರುಕ್ ಖಾನ್ 17 ವರ್ಷಗಳ ನಂತರ ಒಟ್ಟಿಗೆ ದೊಡ್ಡ ಪರದೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಅಭಿಮಾನಿಗಳಂತೂ ಫುಲ್ ಖುಷಿಯಲ್ಲಿದ್ದಾರೆ. 2006 ರಲ್ಲಿ ಬಿಡುಗಡೆಯಾದ 'ಕಭಿ ಅಲ್ವಿದಾ ನಾ ಕೆಹನಾ'ದಲ್ಲಿ ಇಬ್ಬರು ಕೊನೆಯ ಬಾರಿಗೆ ತೆರೆ ಹಂಚಿಕೊಂಡಿದ್ದರು.

shah-rukh-khan-and-amitabh-bachchan-to-work-together

17 ವರ್ಷಗಳ ಬಳಿಕ ಒಂದಾಗಲಿರುವ ಶಾರುಕ್, ಬಿಗ್ ಬಿ!

2006 ರಲ್ಲಿ ಬಿಡುಗಡೆಯಾಗಿದ್ದ 'ಕಭಿ ಅಲ್ವಿದಾ ನಾ ಕೆಹನಾ' ಸಿನಿಮಾವನ್ನು ಕರಣ್ ಜೋಹರ್ ಬರೆದು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಶಾರುಕ್ ಖಾನ್ ಜೊತೆಗೆ ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಪ್ರೀತಿ ಜಿಂಟಾ ಮತ್ತು ಕಿರಣ್ ಖೇರ್ ಕೂಡ ನಟಿಸಿದ್ದಾರೆ.

ಆಂತರಿಕ ಮೂಲಗಳ ಪ್ರಕಾರ, "ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಮತ್ತೊಮ್ಮೆ ಒಟ್ಟಿಗೆ ಸಿನಿ ಪರದೆಯ ಮೇಲೆ ಕಾಣಿಸಿಕೊಳ್ಳುವುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇವರಿಬ್ಬರು ನಟಿಸಲಿರುವ ಸಿನಿಮಾ ಕುರಿತು ಹೆಚ್ಚಿನ ಸುದ್ದಿಗಳು ಇನ್ನೂ ಹೊರಬಂದಿಲ್ಲ. ಆದರೆ, ಶೀಘ್ರದಲ್ಲೇ ಹೆಚ್ಚಿನ ಅಪ್‌ಡೇಟ್‌ ಮತ್ತು ಸುದ್ದಿ ಹೊರಬರುತ್ತದೆ" ಎಂದಿದೆ.

ಆಗಸ್ಟ್ 26 ರಂದು ಅಭಿಮಾನಿಯೊಬ್ಬರು ಅಮಿತಾಬ್ ಬಚ್ಚನ್ ಬಗ್ಗೆ ಏನಾದರೂ ಹೇಳುವಂತೆ ಶಾರುಕ್ ಖಾನ್ ಅವರನ್ನು ಕೇಳಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಪೋಸ್ಟರ್ ಅನ್ನು ಕೂಡ ಹಂಚಿಕೊಂಡಿದ್ದಾರೆ. ಇದಕ್ಕೆ ನಟ ಶಾರುಖ್ ಖಾನ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

"ಬಹಳ ವರ್ಷಗಳ ನಂತರ ಅಮಿತಾಬ್ ಬಚ್ಚನ್ ಅವರೊಂದಿಗೆ ಕೆಲಸ ಮಾಡುವುದು ತುಂಬಾ ಖುಷಿಯಾಯಿತು. ಶೂಟ್‌ನಿಂದ ಸ್ಫೂರ್ತಿ ಮತ್ತು ಆಶೀರ್ವಾದದಿಂದ ಹಿಂತಿರುಗಿದ್ದೇನೆ. ಇನ್ನೊಂದು ವಿಷಯವೆಂದರೇ ಅವರು ನನ್ನನ್ನು ಓಟದಲ್ಲಿ ಸೋಲಿಸಿದರು" ಎಂದು ಶಾರುಖ್ ಖಾನ್ ಮಾಹಿತಿ ನೀಡಿದ್ದಾರೆ.

shah-rukh-khan-and-amitabh-bachchan-to-work-together

ಇನ್ನು, ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಈ ಹಿಂದೆ 'ಮೊಹಬ್ಬತೇನ್', 'ಕಭಿ ಖುಷಿ ಕಭಿ ಗಮ್' ಮತ್ತು 'ವೀರ್ ಝಾರಾ' ದಂತಹ ಐಕಾನಿಕ್ ಸಿನಿಮಾಗಳಲ್ಲಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇತ್ತೀಚೆಗೆ ತೆರೆಕಂಡ ಬ್ರಹ್ಮಾಸ್ತ್ರ- ಭಾಗ ಒಂದರಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಒಟ್ಟಿಗೆ ತೆರೆ ಹಂಚಿಕೊಂಡಿರಲಿಲ್ಲ.

ಶಾರುಕ್ ಖಾನ್ ಅವರ ಜವಾನ್

ಶಾರುಕ್ ಖಾನ್ ಅವರು ಅಟ್ಲೀ ನಿರ್ದೇಶನದ 'ಜವಾನ್' ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವರ್ಷ ಸೆಪ್ಟೆಂಬರ್ 7 ರಂದು ಚಿತ್ರ ಥಿಯೇಟರ್‌ಗಳಿಗೆ ಬರಲಿದೆ. ಈ ಸಿನಿಮಾದಲ್ಲಿ ಶಾರುಖ್ ಜೊತೆಗೆ ನಯನತಾರ, ವಿಜಯ್ ಸೇತುಪತಿ, ಸಾನ್ಯಾ ಮಲೋತ್ರಾ, ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ.

ಇನ್ನು, ಅಮಿತಾಬ್ ಬಚ್ಚನ್ ಶೀಘ್ರದಲ್ಲೇ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ 'ಪ್ರಾಜೆಕ್ಟ್ ಕೆ' ಚಿತ್ರದಲ್ಲಿ ನಟಿಸಲಿದ್ದಾರೆ. ಅವರು ಟೈಗರ್ ಶ್ರಾಫ್ ಅವರ 'ಗಣಪತ್' ಮತ್ತು 'ದಿ ಇಂಟರ್ನ್' ಹಿಂದಿ ರಿಮೇಕ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Shah Rukh Khan, Amitabh Bachchan to share screen space after 17 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X