6 ವರ್ಷದ ಬಳಿಕ ಬಾಲಿವುಡ್‌ನಲ್ಲಿ ಕನ್ನಡದ 'ರಂಗಿತರಂಗ'!

ಕನ್ನಡದಲ್ಲಿ ತೆರೆ ಕಂಡು ಸೂಪರ್‌ ಹಿಟ್‌ ಆದ ಸಿನಿಮಾ ರಂಗಿತರಂಗ ಮತ್ತೆ ಸದ್ದು ಮಾಡುತ್ತಿದೆ. ರಂಗಿತರಂಗ ಸಿನಿಮಾ ಕನ್ನಡ ಸಿನಿಮಾರಂಗದಲ್ಲೇ ಹೊಸ ಪ್ರಯತ್ನ ಎನಿಸಿಕೊಂಡಿತ್ತು. ಜೊತೆಗೆ ಬೇರೆ ಚಿತ್ರರಂಗದವರು ತಿರುಗಿ ನೋಡುವಂತೆ ಮಾಡಿತ್ತು.

ರಂಗಿತರಂಗ ಸಿನಿಮಾ ವಿಭಿನ್ನ ಜಾನರ್ ಸಿನಿಮಾ ಆದ ಕಾರಣ ಪರಭಾಷೆಗಳಿಂದ 'ರಂಗಿತರಂಗ' ಚಿತ್ರಕ್ಕೆ ಸಾಕಷ್ಟು ಬೇಡಿಕೆ ಬಂತು. ಕನ್ನಡದ ಈ ಸಿನಿಮಾ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಮಾಡಿದ ಸಿನಿಮಾ.

ಈಗ ರಂಗಿತರಂಗ ಸದ್ಯ ಬಾಲಿವುಡ್‌ಗೆ ರಿಮೇಕ್‌ ಆಗುತ್ತಿದೆ. ಈಗಾಗಲೇ 'ರಂಗಿತರಂಗ' ಚಿತ್ರದ ಹಿಂದಿ ರಿಮೇಕ್‌ ಹಕ್ಕು ಮಾರಾಟ ಆಗಿದೆ. ಸದ್ಯ ಸಿನಿಮಾ ಆರಂಭಿಸಲು ಚಿತ್ರ ತಂಡ ಯೋಜನೆ ರೂಪಿಸಿದೆ.

ಬಾಲಿವುಡ್‌ನಲ್ಲಿ ಕನ್ನಡದ 'ರಂಗಿತರಂಗ'!

ಬಾಲಿವುಡ್‌ನಲ್ಲಿ ಕನ್ನಡದ 'ರಂಗಿತರಂಗ'!

ಈ ಹಿಂದೆ ಹಿಂದಿಯಲ್ಲಿ 'ಒನ್ ವೇ ಟಿಕೆಟ್' ಮತ್ತು 'ಬೈಸಿಕಲ್ ಬಾಯ್ಸ್' ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕಿ ಮತ್ತು ನಟಿ ಕೋಮಲ್ ಉನವಾನೆ ಅವರು ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ 'ರಂಗಿತರಂಗ'ದ ಅಧಿಕೃತ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.

ರಂಗಿತರಂಗ ರೀಮೇಕ್ ಬಗ್ಗೆ ಅವರು ಮಾತನಾಡಿದ್ದಾರೆ. ಸಂದರ್ಶನ ಒಂದರಲ್ಲಿ ಈ ಕುರಿತು ಕೋಮಲ್‌ ಹೇಳಿಕೊಂಡಿದ್ದಾರೆ. "ನನಗೆ ದಕ್ಷಿಣದ ಚಿತ್ರಗಳು ತುಂಬಾ ಇಷ್ಟ ಮತ್ತು ಬರಹಗಾರ, ನಿರ್ದೇಶಕ ಲಕ್ಕಿ ಹಂಸರಾಜ್ ನನಗೆ ಕಥೆಯನ್ನು ಹೇಳಿದಾಗ, ನಾನು ಅದನ್ನು ತಕ್ಷಣ ಇಷ್ಟಪಟ್ಟೆ. ಇದು ಭಯಾನಕ, ಮಿಸ್ಟರಿ ಕಥೆ ಆಗಿರುವುದರಿಂದ ಟ್ರೆಂಡ್ ಚೇಂಜರ್ ಆಗಿತ್ತದೆ" ಎಂದಿದ್ದಾರೆ.

'ರಂಗಿತರಂಗ' ರಿಮೇಕ್‌ನಲ್ಲಿ ಬಾಲಿವುಡ್‌ನ ಹೆಸರಾಂತ ಕಲಾವಿದರು!

'ರಂಗಿತರಂಗ' ರಿಮೇಕ್‌ನಲ್ಲಿ ಬಾಲಿವುಡ್‌ನ ಹೆಸರಾಂತ ಕಲಾವಿದರು!

ಬಾಲಿವುಡ್‌ ರಿಮೇಕ್ ಚಿತ್ರದ ಚಿತ್ರೀಕರಣಕ್ಕೆ ಅದಾಗಲೇ ಮುಹೂರ್ತ ನಿಗದಿಯಾಗಿದೆ. ಈಗಾಗಲೇ ಚಿತ್ರ ತಂಡ ಚಿತ್ರದ ಪೂರ್ವ ನಿರ್ಮಾಣದ ಕಾರ್ಯಗಳನ್ನು ಆರಂಭಿಸಿದೆ. ಇನ್ನೂ ಹಾಲಿವುಡ್‌ನ ಹಲವು ಹೆಸರಾಂತ ಕಲಾವಿದರು ಸಿನಿಮಾದಲ್ಲಿ ಭಾಗಿ ಆಗಲಿದ್ದಾರಂತೆ. ಶೀಘ್ರದಲ್ಲೇ ಚಿತ್ರದ ಪಾತ್ರ ವರ್ಗವನ್ನು ಸದ್ಯದಲ್ಲೇ ಘೋಷಿಸಲಿದೆ ಚಿತ್ರತಂಡ.

ಚಿತ್ರದ ಶೂಟಿಂಗ್ ಆದಷ್ಟು ಬೇಗ ಮುಗಿಸಿ, ಮುಂದಿನ ವರ್ಷದ ಅಂತ್ಯದೊಳಗೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ಹಾಗಾಗಿ ಆದಷ್ಟು ಬೇಗ ಸಿನಿಮಾದ ಕೆಲಸಗಳನ್ನು ಮಾಡಿ ಮುಗಿಸಲು ಮುಂದಾಗಿದೆ.

2015ರಲ್ಲಿ ಕನ್ನಡದಲ್ಲಿ ತೆರೆಕಂಡಿದ್ದ 'ರಂಗಿತರಂಗ'!

2015ರಲ್ಲಿ ಕನ್ನಡದಲ್ಲಿ ತೆರೆಕಂಡಿದ್ದ 'ರಂಗಿತರಂಗ'!

'ರಂಗಿತರಂಗ' ಅನುಪ್ ಭಂಡಾರಿ ಅವರ ಚೊಚ್ಚಲ ಚಿತ್ರ. ರಾಧಿಕಾ ನಾರಾಯಣ್ ಮತ್ತು ಆವಂತಿಕಾ ಶೆಟ್ಟಿ ಜೊತೆಗೆ ಅನುಪ್ ಭಂಡಾರಿ ಸಹೋದರ ನಿರೂಪ್ ಭಂಡಾರಿ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ರಂಗಿತರಂಗ ಆರಂಭದಲ್ಲಿ ಅಷ್ಟಾಗಿ ಸದ್ದು ಮಾಡದೇ ಇದ್ದರೂ, ದಿನ ಕಳೆದಂತೆ ಸಿನಿಮಾ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತು.

ನಂತರ ರಂಗಿತರಂಗ ಮಾಡಿದ್ದೆಲ್ಲಾ ದಾಖಲೆ. ಕಮರ್ಷಿಯಲ್‌ ಆಗಿಯೂ ರಂಗಿತರಂಗ ಗೆಲುವಿನ ನಗೆ ಬೀರಿತು. ಅಷ್ಟೇ ಅಲ್ಲ ಕನ್ನಡ ಚಿತ್ರೋದ್ಯಮಕ್ಕೆ ಒಂದಷ್ಟು ಬದಲಾವಣೆಯ ಪಾಠ ಕಲಿಸಿದ್ದು ಇದೆ.

ಬಾಲಿವುಡ್‌ನಲ್ಲೂ ಜಾದು ಮಾಡುತ್ತಾ ರಂಗಿತರಂಗ?

ಬಾಲಿವುಡ್‌ನಲ್ಲೂ ಜಾದು ಮಾಡುತ್ತಾ ರಂಗಿತರಂಗ?

ಕನ್ನಡದಲ್ಲಿ ಸೂಪರ್‌ ಹಿಟ್ ಎನಿಸಿಕೊಂಡ ರಂಗಿತರಂಗ ಬಾಲಿವುಡ್‌ ಸಿನಿಮಾ ಪ್ರೇಕ್ಷಕರನ್ನ ಮೋಡಿ ಮಾಡಲು ಮುಂದಾಗಿದೆ. ಇನ್ನೂ ಈಗಾಗಲೇ ಒಂದಷ್ಟು ಮಂದಿ ಈ ಚಿತ್ರವನ್ನು ಅದಾಗಲೇ ನೋಡಿರುತ್ತಾರೆ. ಜೊತೆಗೆ ಈ ಚಿತ್ರ ಕರ್ನಾಟಕದ ನೇಟಿವಿಟಿಯ ಸುತ್ತ ಹೆಣೆದ ಕಥೆ ಆಗಿತ್ತು. ಆದರೆ ಬಾಲಿವುಡ್ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗಬೇಕು ಅಂದರೆ ಅಲ್ಲಿನ ನೇಟಿವಿಟಿಯನ್ನು ಸೇರಿಸುವುದು ಬಹಳ ಮುಖ್ಯ. ಹಾಗಾಗಿ ಈ ಚಿತ್ರದ ಕಥೆಗೆ ಒಂದಷ್ಟು ಬದಲಾಣೆಗಳನ್ನು ಮಾಡಿ ಕೊಳ್ಳಲು ಚಿತ್ರತಂಡ ಮುಂದಾಗಿದೆ.

More from Filmibeat

English summary
After 6 Years Kannada Movie Rangitaranga Remake In Bollywood And Shooting Begins In Few Days ,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X