ಇವತ್ತಿನಿಂದ ಚಿತ್ರಮಂದಿರಗಳು ರೀ-ಓಪನ್: ಸಿನಿಮಾ ಪ್ರದರ್ಶನಕ್ಕೆ ಸಜ್ಜಾದ ಥಿಯೇಟರ್ ಗಳು

ಕೊರೊನಾ ಲಾಕ್ ಡೌನ್ ಬಳಿಕ ಚಿತ್ರಮಂದಿಗಳು ಮತ್ತೆ ಓಪನ್ ಆಗಿವೆ. ಸುಮಾರು 7 ತಿಂಗಳ ಬಳಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಇಂದು ದೇಶದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ತೆರೆಯಲಿವೆ.

ಈಗಾಗಲೇ ಎಲ್ಲಾ ಚಿತ್ರಮಂದಿರಗಳನ್ನು ಸ್ವಚ್ಛಗೊಳಿಸಿ ಸಿದ್ಧತೆ ಮಾಡಲಾಗಿದೆ. ಸುಮಾರು 15ದಿನಗಳಿಂದ ಚಿತ್ರಮಂದಿರಗಳ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಮುನ್ನೆಚ್ಚರಿಕೆಯ ಕ್ರಮಗಳೊಂದಿಗೆ ಸಿನಿಮಾ ಪ್ರದರ್ಶನ ಮಾಡುವ ಜವಾಬ್ದಾರಿ ಚಿತ್ರಮಂದಿರಗಳಮೇಲಿದೆ.

ಅರ್ಧದಷ್ಟು ಚಿತ್ರಮಂದಿರಗಳು ಮಾತ್ರ ಭರ್ತಿಯಾಗಬೇಕು, ಕನಿಷ್ಟ 6 ಅಡಿ ಅಂತರವಿರಬೇಕು, ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು, ಚಿತ್ರಮಂದಿರಗಳಲ್ಲಿ ಉಗುಳುವ ಹಾಗಿಲ್ಲ, ಕಂಟೈನ್ಮೆಂಟ್ ವಯಲಗಳಲ್ಲಿ ಚಿತ್ರಮಂದಿರಗಳನ್ನು ತೆರೆಯುವಂತಿಲ್ಲ ಹೀಗೆ ಹಲವು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.

After 7 Months Cenema theatre Reopen From Today

ಇಂದಿನಿಂದ ಚಿತ್ರಮಂದಿರಗಳು ಓಪನ್ ಆಗಿವೆ ನಾಳೆಯಿಂದ ಸಿನಿಮಾ ಪ್ರದರ್ಶನವಾಗಲಿದೆ. ಮಲ್ಟಿಫ್ಲೆಕ್ಸ್ ಗಳಲ್ಲೂ ಇದೇ ನಿಯಮ ಅನ್ವಯ ಆಗಲಿದ್ದು, ನಾಳೆಯಿಂದ ಸಿನಿಮಾ ಪ್ರದರ್ಶನವಾಗಲಿದೆ. ಮೊದಲು ರಿಲೀಸ್ ಆದ ಸಿನಿಮಾಗಳನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಸಾಕಷ್ಟು ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ.

ಕನ್ನಡದಲ್ಲಿ ಲವ್ ಮಾಕ್ಟೇಲ್, ದಿಯಾ, ಮಾಯಾಬಜಾರ್, ಶಿವಾಜಿ ಸೂರತ್ಕಲ್, ಶಿವಾರ್ಜುನ ಸೇರಿದಂತೆ ಸಾಕಷ್ಟು ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಮಲ್ಟಿ ಫ್ಲೆಕ್ಸ್ ಗಳಲ್ಲಿ ಈಗಾಗಲೇ ಸಿನಿಮಾ ಬುಕಿಂಗ್ ಪ್ರಾರಂಭವಾಗಿದೆ.

ಸದ್ಯ ರಿಲೀಸ್ ಆದ ಸಿನಿಮಾಗಳು ಮಾತ್ರ ಮತ್ತೆ ಚಿತ್ರಮಂದಿರದ ಅಂಗಳಕ್ಕೆ ಬಂದಿವೆ. ಆದರೆ ಹೊಸ ಸಿನಿಮಾಗಳ ರಿಲೀಸ್ ಆಗುತ್ತಿಲ್ಲ. ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ಹೊಸ ಸಿನಿಮಾಗಳ ರಿಲೀಸ್ ಗೆ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಈ ವರ್ಷ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು ಚಿತ್ರಮಂದಿರದ ಅಂಗಳಕ್ಕೆ ಬರುವುದು ಅನುಮಾನ ಎಂದು ಹೇಳಲಾಗುತ್ತಿದೆ. ಸದ್ಯ ರೀ ಓಪನ್ ಆಗಿರುವ ಚಿತ್ರಮಂದಿರಗಳಿಗೆ ಜನ ಬರ್ತಾರಾ ಎಂದು ಕಾದುನೋಡಬೇಕು.

Recommended Video

ಪ್ರೇಮ್, ರಚಿತಾ ರಾಮ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಾಣಾ | Filmibeat Kannada

More from Filmibeat

English summary
After 7 months cenema theatre reopen from today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X