twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಶ್‌ ಸಾವಿನಲ್ಲೂ ಕೆಲವರು ಅಸಹ್ಯದ ರಾಜಕೀಯ ಮಾಡಿದರು: ಡಾ.ರವೀಂದ್ರ

    |

    ಅಂಬರೀಶ್ ಬಗ್ಗೆ ಬರೆದಷ್ಟೂ ಕತೆಗಳಿವೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಅಂಬರೀಶ್ ವ್ಯಕ್ತಿತ್ವ ಧಕ್ಕಿದೆ. ಒಬ್ಬರಿಗೆ ಗೆಳೆಯ, ಒಬ್ಬರಿಗೆ ಸಿಡುಕ, ಒಬ್ಬರಿಗೆ ಕೇಳಿದ್ದೆಲ್ಲ ಕೊಡುವ ಕರ್ಣ, ಒಬ್ಬರಿಗೆ ಆಡಳಿತಗಾರ, ಒಬ್ಬರಿಗೆ ಅದ್ಭುತ ನಟ, ಒಬ್ಬರಿಗೆ ರಾಜಕಾರಣಿ, ಒಬ್ಬರಿಗೆ ಲೀಡರ್, ಒಬ್ಬರಿಗೆ ಬಡವರ ಬಂಧು ಹೀಗೆ ಅಂಬರೀಶ್‌ ವ್ಯಕ್ತಿತ್ವಕ್ಕೆ ಹಲವು ಮುಖಗಳು.

    Recommended Video

    ಬೊ* ಮಗ ಅಂತ ಬೈದ್ರೆ ಕೆಲವರಿಗೆ ಖುಷಿ ಆಗ್ತಾ ಇದ್ದಿದ್ದನ್ನ ನಾನು ನೋಡಿದ್ದೀನಿ

    ರೆಬಲ್ ಸ್ಟಾರ್ ಅಂಬರೀಶ್ ನಿಜವಾಗಿಯೂ ರೆಬಲ್ ಆಗಿಯೇ ಬಾಳಿ ಬದುಕಿದವರು. ರಾಜಕಾರಣದಲ್ಲಂತೂ ಅವರ ರೆಬೆಲ್‌ನೆಸ್ ಹೆಚ್ಚು ಕಾಣುತ್ತಿತ್ತು. ಕಾವೇರಿ ವಿವಾದವಾದಾಗ ರಾಜೀನಾಮೆ ಒಗೆದು ಬಂದಿದ್ದು. ಸ್ವಂತ ಪಕ್ಷವೇ ತಮ್ಮನ್ನು ಕಡೆಗಣಿಸುತ್ತಿದೆ ಎನಿಸಿದಾಗ ಬಿಡು ಬೀಸಾಗಿ ಮಾತನಾಡಿದ್ದು, ಆಪ್ತ ಸಿದ್ದರಾಮಯ್ಯ (ಆಗ ಸಿಎಂ) ಅನ್ನು ಸಹ ಅಳುಕಿಲ್ಲದೆ ಮಾತಿನಲ್ಲಿ ತಿವಿದಿದ್ದು ಹೀಗೆ. ಅಂಬರೀಶ್ ರಾಜ್ಯದ ಸಾಂಸ್ಕೃತಿಕ ರಾಯಭಾರಿ ಆಗಿದ್ದ ಜೊತೆಗೆ ಮಂಡ್ಯದ ರಾಜಕೀಯ ಕೇಂದ್ರಬಿಂದುವಾಗಿದ್ದರು.

    ಆದರೆ ಅಂಬರೀಶ್ ಮರಣಾನಂತರ ಮಂಡ್ಯವನ್ನು ಅಂಬರೀಶ್ ನೆರಳಿನಿಂದ ಬಿಡಿಸಲು ಬಹಳ ದೊಡ್ಡ ಮಟ್ಟದ ಪ್ರಯತ್ನಗಳಾದವು. ಏನೇನೋ ರಾಜಕೀಯ ಹೈ ಡ್ರಾಮಾ ನಡೆದು ಕೊನೆಗೆ ಸುಮಲತಾ ಅಂಬರೀಶ್ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದು ಬಂದು, ಅಂಬರೀಶ್‌ ದೈಹಿಕವಾಗಿ ಇಲ್ಲದಿದ್ದರೂ ಮಂಡ್ಯದ ಜನರ ಮನಸ್ಸಿನಲ್ಲಿ ಅಂಬಿ ಶಾಶ್ವತವಾಗಿದ್ದಾರೆಂದು ಸಾರಿ ಹೇಳಿದರು. ಆದರೆ ಹೀಗೆ ಒಮ್ಮೆಗೆ ರಾಜ್ಯದ ಎರಡು ಪ್ರಭಲ ರಾಜಕೀಯ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಅನ್ನು ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ಆಪ್ತರು ಎದುರು ಹಾಕಿಕೊಳ್ಳಲು ಕಾರಣವಾದ ಅಂಶಗಳು ಏನು? ಈ ಬಗ್ಗೆ ಅಂಬರೀಶ್‌ಗೆ ಆಪ್ತರಾಗಿದ್ದ ಡಾ.ರವೀಂದ್ರ ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯಲ್ಲಿ ಅಭ್ಯರ್ಥಿ ಇರಲಿಲ್ಲವೇ: ರವೀಂದ್ರ ಪ್ರಶ್ನೆ

    ಮಂಡ್ಯ ಜಿಲ್ಲೆಯಲ್ಲಿ ಅಭ್ಯರ್ಥಿ ಇರಲಿಲ್ಲವೇ: ರವೀಂದ್ರ ಪ್ರಶ್ನೆ

    2020 ರಲ್ಲಿ ಫಿಲ್ಮೀಬೀಟ್‌ ಜೊತೆ ಮಾತನಾಡಿದ್ದ ರವೀಂದ್ರ, ಮಂಡ್ಯ ಜಿಲ್ಲೆಗೆ ನಿಖಿಲ್ ಕುಮಾರಸ್ವಾಮಿಯನ್ನು ಅಭ್ಯರ್ಥಿ ಮಾಡಿದಾಗ ನಮ್ಮಗೆ ಪ್ರಶ್ನೆಯೊಂದು ಎದುರಾಯಿತು. ಮಂಡ್ಯ ಜಿಲ್ಲೆಯಲ್ಲಿ ಸೂಕ್ತವಾದ ಅಭ್ಯರ್ಥಿ ಇಲ್ಲವೇ? ನೀವು ಮೈತ್ರಿ ಮಾಡಿಕೊಂಡೆ ಅಭ್ಯರ್ಥಿ ಹಾಕಿ ಆದರೆ ಮಂಡ್ಯ ಜಿಲ್ಲೆಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ. ಆದರೆ ಯಾವ ಆಧಾರದ ಮೇಲೆ ಕುಮಾರಸ್ವಾಮಿ ಮಗನನ್ನು ಇಲ್ಲಿ ಚುನಾವಣೆಗೆ ನಿಲ್ಲಿಸಿದರಿ ಇದು ನಮ್ಮ ಪ್ರಶ್ನೆಯಾಗಿತ್ತು. ಅಲ್ಲದೆ ಅದು ನಮ್ಮ ಜಿಲ್ಲೆಯ ಅಸ್ಥಿತ್ವದ ಪ್ರಶ್ನೆಯಾಯಿತು' ಎಂದರು ರವೀಂದ್ರ.

    ಸುಮಲತಾ ವ್ಯಕ್ತಿತ್ವ ಗಮನಿಸಿ ಅವರನ್ನು ಆಯ್ಕೆ ಮಾಡಿದೆವು: ರವೀಂದ್ರ

    ಸುಮಲತಾ ವ್ಯಕ್ತಿತ್ವ ಗಮನಿಸಿ ಅವರನ್ನು ಆಯ್ಕೆ ಮಾಡಿದೆವು: ರವೀಂದ್ರ

    ಅಂಬರಿಶ್ ಮೇಲಿದ್ದ ಪ್ರೀತಿ ಮುಖ್ಯ ಕಾರಣ ಎನ್ನುವ ಜೊತೆಗೆ, ಜೆಡಿಎಸ್, ಕಾಂಗ್ರೆಸ್‌ ಜೊತೆಗೆ ಗುದ್ದಾಡಲು ನಮಗೆ ದೊಡ್ಡ ಶಕ್ತಿಯ ಹಾಗೂ ಒಂದೊಳ್ಳೆ ಅಭ್ಯರ್ಥಿಯ ಅವಶ್ಯಕತೆ ಇತ್ತು. ಆಗ ಕಂಡಿದ್ದು ಸುಮಲತಾ. ಅವರ ಮಾತು, ನಡವಳಿಕೆ, ಜ್ಞಾನ, ಸಮಾಜದಲ್ಲಿ ತೊಡಗಿಸಿಕೊಳ್ಳುವಿಕೆ ಇವುಗಳೆಲ್ಲವನ್ನೂ ಪರಿಗಣಿಸಿ ನಾವು ಸುಮಲತಾ ಅವರನ್ನೇ ಅಭ್ಯರ್ಥಿಯನ್ನಾಗಿ ಆರಿಸಿದೆವು. ಅದೇ ಒಂದು ವೇಳೆ ದೇವೇಗೌಡರೊ, ಕುಮಾರಸ್ವಾಮಿಯೋ ಚುನಾವಣೆ ಸ್ಪರ್ಧಿಸಿದ್ದಿದ್ದರೆ ನಮ್ಮ ವಿರೋಧ ಇರುತ್ತಿರಲಿಲ್ಲ' ಎಂದರು ರವೀಂದ್ರ.

    ಅಂತ್ರಕ್ರಿಯೆ ಕುರಿತ ಅಸಹ್ಯದ ಹೇಳಿಕೆಗಳನ್ನು ನೀಡಿದರು: ರವೀಂದ್ರ

    ಅಂತ್ರಕ್ರಿಯೆ ಕುರಿತ ಅಸಹ್ಯದ ಹೇಳಿಕೆಗಳನ್ನು ನೀಡಿದರು: ರವೀಂದ್ರ

    ಅಂಬರೀಶ್ ಅವರ ಅಂತ್ಯಕ್ರಿಯೆ ವಿಷಯದಲ್ಲಿ ನಡೆದ ರಾಜಕೀಯ ನಮಗೆಲ್ಲ ಬಹಳ ಬೇಸರ ತರಿಸಿತ್ತು. ಅಂಬರೀಶ್ ಅವರ ಅಂತ್ಯಕ್ರಿಯೆಯನ್ನೂ ಸಹ ರಾಜಕೀಯಕ್ಕೆ ಬಳಸಿಕೊಳ್ಳುವ ಅಸಹ್ಯದ ಹೇಳಿಕೆಗಳನ್ನು ಕೊಟ್ಟಿದ್ದು ನಮಗೆ ಭಾವನಾತ್ಮಕ್ಕೆ ನೋವು ನೀಡಿತು. ಅಂಬರೀಶ್ ಅಂಥಹಾ ಮೇರು ವ್ಯಕ್ತಿಯ ಸಾವನ್ನು ಸಹ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರಲ್ಲ. ಅವರ ಸಾವನ್ನು ಸಹ ಕೀಳು ಮಟ್ಟದಲ್ಲಿ ನೋಡಿಬಿಟ್ಟರಲ್ಲ ಎಂಬುದು ಬಹಳ ಬೇಸರ ತರಿಸಿತ್ತು. ಇಡೀಯ ಮಂಡ್ಯದ ಜನತೆಗೆ ಇದು ಬಹಳ ಬೇಸರದ ಸಂಗತಿಯಾಯ್ತು' ಹಾಗಾಗಿ ನಾವು ಅವರ ವಿರುದ್ಧ ನಿಲ್ಲುವ ನಿರ್ಣಯವನ್ನು ಗಟ್ಟಿಯಾಗಿ ತೆಗೆದುಕೊಂಡೆವು ಎಂದಿದ್ದಾರೆ ರವೀಂದ್ರ.

    ಸುಮಲತಾಗೆ ಟಿಕೆಟ್ ಕೊಡಲಿಲ್ಲ ಕಾಂಗ್ರೆಸ್

    ಸುಮಲತಾಗೆ ಟಿಕೆಟ್ ಕೊಡಲಿಲ್ಲ ಕಾಂಗ್ರೆಸ್

    ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಸುಮಲತಾ ಟಿಕೆಟ್ ಕೇಳಿದ್ದರು. ಆದರೆ ಕಾಂಗ್ರೆಸ್‌ ಅದನ್ನು ನಿರಾಕರಿಸಿತು. ಮಂಡ್ಯದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿದರು. ಸುಮಲತಾ ಪಕ್ಷೇತರವಾಗಿ ಕಣಕ್ಕೆ ಇಳಿದರು. ಸುಮಲತಾ ಅವರಿಗೆ ದರ್ಶನ್, ಯಶ್, ಡಾ.ರವೀಂದ್ರ, ದರ್ಶನ್ ಪುಟ್ಟಣ್ಣಯ್ಯ, ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ, ರಾಜೇಂದ್ರ ಸಿಂಗ್ ಬಾಬು ಹಾಗು ಹಲವರು ಪ್ರಚಾರ ನಡೆಸಿ ಕೊನೆಗೆ ಸುಮಲತಾ ಭಾರಿ ಅಂತರದ ಗೆಲುವು ಸಾಧಿಸಿದರು.

    English summary
    Dr Ravindra said Mandya people upset because some people did politics in Ambareesh death and cremation ceremony.
    Saturday, May 29, 2021, 16:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X