ಅಮಿತಾಬ್ ಬಚ್ಚನ್ ನಂತರ ಕಿಚ್ಚ ಸುದೀಪ್.!
Recommended Video

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್ ಅವರ ಮಧ್ಯೆ ಕೆಲವೊಂದು ವಿಚಾರದಲ್ಲಿ ಸಾಮ್ಯತೆ ಇದೆ. ಹೈಟ್ ಅಂದ್ರೆ ಅಮಿತಾಬ್ ಬಚ್ಚನ್ ಎನ್ನುವ ಕಾಲವೊಂದಿತ್ತು. ಆದ್ರೀಗ, ಅಮಿತಾಬ್ ಅವರಂತೆ ಅನೇಕ ನಟರು ಎತ್ತರವಾಗಿದ್ದಾರೆ. ಇವರಲ್ಲಿ ಸುದೀಪ್ ಕೂಡ ಒಬ್ಬರು.
ಇನ್ನು ಅಮಿತಾಬ್ ಅವರ ಕಂಠಕ್ಕೆ ಹೆಚ್ಚು ಅಭಿಮಾನಿಗಳಿದ್ದಾರೆ. ಬಹುಶಃ ಅವರ ರೀತಿಯ ಧ್ವನಿ ಯಾರಿಗೂ ಇಲ್ಲ. ಆದ್ರೆ, ಅವರ ನಂತರ ಸುದೀಪ್ ಆ ರೀತಿ ಧ್ವನಿ ಹೊಂದಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯ.

ಇತ್ತೀಚಿಗಷ್ಟೆ ತಮಿಳು ಅಭಿಮಾನಿಯೊಬ್ಬ ಸುದೀಪ್ ಸಿನಿಮಾಗಳನ್ನ ನೋಡಲು ಕನ್ನಡ ಕಲಿಯುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡಿದ್ದರು. ಇದೀಗ, ಇನ್ನೊಬ್ಬ ತಮಿಳು ಅಭಿಮಾನಿ ''ಭಾರತೀಯ ಸಿನಿಮಾರಂಗದಲ್ಲಿ ಅಮಿತಾಬ್ ಬಚ್ಚನ್ ಅವರ ನಂತರ ಸುದೀಪ್ ಅವರಿಗೆ ಅತ್ಯುತ್ತಮ ಧ್ವನಿ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೇ ''ಕಾಲಿವುಡ್ ನಲ್ಲಿ ನಿಮ್ಮ ಧ್ವನಿ ಕೇಳಲು ನಾನು ಕಾಯುತ್ತಿದ್ದೇನೆ. ದಯವಿಟ್ಟು ನಿಮ್ಮ ನೈಜ ಧ್ವನಿಯಲ್ಲೇ ಸಿನಿಮಾ ಮಾಡಿ. ನಿಮ್ಮ ಅಭಿನಯಕ್ಕೆ ಬೇರೆಯವರು ಧ್ವನಿ ನೀಡಿದ್ರೆ ಅದು ಚೆನ್ನಾಗಿರಲ್ಲ''ಎಂದು ಸಲಹ ನೀಡಿದ್ದಾರೆ.
ಅಂದ್ಹಾಗೆ, ಅಮಿತಾಬ್ ಬಚ್ಚನ್ ಮತ್ತು ಸುದೀಪ್ ಒಟ್ಟಿಗೆ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2010ರಲ್ಲಿ ತೆರೆಕಂಡಿದ್ದ 'ರಣ್' ಚಿತ್ರದಲ್ಲಿ ಇಬ್ಬರು ತೆರೆಹಂಚಿಕೊಂಡಿದ್ದಾರೆ.


Click it and Unblock the Notifications











