Tatsama Tadbhava: ಮೇಘನಾರಾಜ್ ಕಮ್‌ಬ್ಯಾಕ್ ಸಿನಿಮಾದಲ್ಲಿ ಸುಮನಳಾಗಿ ಶ್ರುತಿ

By ಫಿಲ್ಮಿಬೀಟ್ ಡೆಸ್ಕ್

ನಟಿ ಮೇಘನಾರಾಜ್ ಚಿತ್ರರಂಗಕ್ಕೆ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ. ದ್ವಿಭಾಷೆಯಲ್ಲಿ ರಿಲೀಸ್ ಆಗಲಿರೋ ಸಿನಿಮಾದ ಮೂಲಕವೇ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಆ ಸಿನಿಮಾವೇ 'ತತ್ಸಮ ತದ್ಬವ'. ಈ ಸಿನಿಮಾ ಬಗ್ಗೆ, ಮೇಘನಾ ರಾಜ್ ಪಾತ್ರದ ಬಗ್ಗೆ ಈಗಾಗಲೇ ಕುತೂಹಲ ಮೂಡಿದೆ.

ಪನ್ನಗಾಭರಣ ನಿರ್ಮಾಣ ಮಾಡುತ್ತಿರುವ ಈ 'ತತ್ಸಮ ತದ್ಬವ' ಸಿನಿಮಾ ನಿರೀಕ್ಷೆಗಳನ್ನು ಹೆಚ್ಚು ಮಾಡುತ್ತಿದೆ. ಸಿನಿಮಾದಲ್ಲಿ ನಟಿಸಿರೋ ಒಂದೊಂದೇ ಪಾತ್ರವನ್ನು ರಿವೀಲ್ ಮಾಡುವು ಮೂಲಕ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಸಿನಿಮಾದ ಮತ್ತೊಂದು ಪಾತ್ರವನ್ನು ರಿವೀಲ್ ಮಾಡಿದೆ ಚಿತ್ರತಂಡ.

ಕೆಲವು ದಿನಗ ಹಿಂದಷ್ಟೇ ಮೇಘನಾರಾಜ್ ಜೊತೆ ಕಾಣಿಸಿಕೊಳ್ಳಲಿರುವ ಮತ್ತೆರಡು ಪ್ರಮುಖ ಪಾತ್ರಗಳನ್ನು ರಿವೀಲ್ ಮಾಡಲಾಗಿತ್ತು. 'ಕಿರಿಕ್ ಪಾರ್ಟಿ', 'ಭೀಮಸೇನಾ ನಳಮಹಾರಾಜ' ಸಿನಿಮಾ ಖ್ಯಾತಿಯ ಅರವಿಂದ್ ಅಯ್ಯರ್, 'ಗಟ್ಟಿಮೇಳ' ಖ್ಯಾತಿಯ ಮಹತಿ ವೈಷ್ಣವಿ ಭಟ್ ಪಾತ್ರಗಳನ್ನು ರಿವೀಲ್ ಮಾಡಲಾಗಿತ್ತು.

ಈಗ ಇದೇ 'ತತ್ಸಮ ತದ್ಬವ' ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶ್ರುತಿ ಕೃಷ್ಣ ಕೂಡ ನಟಿಸಿದ್ದಾರೆ. ಕನ್ನಡದ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿರೋ ಶ್ರುತಿ ಸುಮನಾ ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

After Aravind Iyer, Vaishnavi Actress Shruti Role Revealed In Meghana Rajs Tatsama Tadbhava

ಸದ್ಯದಲ್ಲೇ ರಿಲೀಸ್ ಆಗಲಿರುವ ʻತತ್ಸಮ ತದ್ಭವʼ ಸಿನಿಮಾದಲ್ಲಿ 'ಸುಮನ್‌' ಪಾತ್ರದ ಮೂಲಕ ಮತ್ತೆ ತೆರೆಮೇಲೆ ಕಾಣಿಸಿಕೊಂಡಿರೋ ಶ್ರುತಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ನಾನು ಈ ಚಿತ್ರದಲ್ಲಿ ಅಭಿನಯಿಸಲು ಮುಖ್ಯ ಕಾರಣ ಮೇಘನಾ ರಾಜ್. ಈ ಚಿತ್ರದ ನನ್ನ ಪಾತ್ರ ಕೇಕ್‌ ಮೇಲಿನ ಚೆರಿಯಷ್ಟೇ ನನಗೆ ಪ್ರಿಯ." ಎಂದು ಶ್ರುತಿ ಹೇಳಿಕೊಂಡಿದ್ದಾರೆ. ಹೀಗಾಗಿ 'ತತ್ಸಮ ತದ್ಬವ' ಸಿನಿಮಾ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

More from Filmibeat

English summary
After Aravind Iyer,Mahati Vaishnavi Senior Actress Shruti Role Revealed In Meghana Raj Movie Tatsama Tadbhava, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X