'ಉಸಿರೇ ಉಸಿರೇ' ಸಿನಿಮಾ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್ ಭಾಗಿ: ವೈರಲ್ ಆಯ್ತು ವಿಡಿಯೋ

By ಫಿಲ್ಮಿಬೀಟ್ ಡೆಸ್ಕ್

ಕಿಚ್ಚ ಸುದೀಪ್ ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆ ಎಂದಾಗಲೇ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಮತ್ತೆ ಕೆಲವರು ಕಿಚ್ಚನಿಗೆ ಬೆಂಬಲವನ್ನೂ ಸೂಚಿಸಿದ್ದಾರೆ. ಈ ಹೇಳಿಕೆ ನೀಡುವುದಕ್ಕೂ ಮುನ್ನ ಸುದೀಪ್ ಬೆದರಿಕೆ ಪತ್ರ ಬಂದಿತ್ತು. ಈ ಪತ್ರದಲ್ಲಿ ಖಾಸಗಿ ವಿಡಿಯೋವನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಲಾಗಿತ್ತು.

ಕಿಚ್ಚ ಸುದೀಪ್ ಪ್ರಚಾರಕ್ಕೆ ಮುಂದಾಗಿತ್ತಿದ್ದಂತೆ ಪ್ರಖಾಶ್ ರೈ ಅಖಾಡಕ್ಕೆ ಇಳಿದಿದ್ದರು. ಕಿಚ್ಚನ ವಿರುದ್ಧ ಒಂದರ ಹಿಂದೊಂದು ಟ್ವೀಟ್ ಮಾಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಕಿಚ್ಚ ಸುದೀಪ್ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ.

After Campaign Controversy Kichcha Sudeep participated In Usire Usire Movie

ಇಷ್ಟೆಲ್ಲ ಟೀಕೆ ಟಿಪ್ಪಣಿಗಳ ಮಧ್ಯೆನೇ ಕಿಚ್ಚ ಸುದೀಪ್ ಏನು ಮಾಡುತ್ತಿದ್ದಾರೆ? ಎಲ್ಲಿದ್ದಾರೆ? ಯಾಕೆ ಸುಮ್ಮನಿದ್ದಾರೆ ಅಂತ ಫ್ಯಾನ್ಸ್ ತಡೆಕೆಡಿಸಿಕೊಡು ಕೂತಿದ್ದರು. ಇದೇ ಗೊಂದಲದಲ್ಲಿ ಇರುವಾಗಲೇ ಕಿಚ್ಚ ಸುದೀಪ್ ವಿಡಿಯೋವೊಂದು ಬೆಳಗ್ಗೆಯಿಂದಾನೂ ಅಭಿಮಾನಿಗಳನ್ನು ಡಿಸ್ಟರ್ಬ್ ಮಾಡುವುದಕ್ಕೆ ಶುರು ಮಾಡಿತ್ತು. ಆ ವಿಡಿಯೋ ಕಿಚ್ಚನನ್ನು ಕಂಡು ಅಭಿಮಾನಿಗಳು ಕಕ್ಕಾಬಿಕ್ಕಿಯಾಗಿದ್ದರು.

ಟೀಕೆಗಳಿಗೆ ಕಿವಿಗೊಡದ ಕಿಚ್ಚ ಕಂಡಿದ್ದು ಎಲ್ಲಿ?

ಕಿಚ್ಚ ಸುದೀಪ್ ಯಾವಾಗ ಹೇಗೆ ಮಾತಾಡಬೇಕು? ಯಾವ ಸಂದರ್ಭದಲ್ಲಿ ಹೇಗಿರಬೇಕು? ಅನ್ನೋದು ಚೆನ್ನಾಗಿಯೇ ಗೊತ್ತಿದೆ. ಅದು ಎಂತಹದ್ದೇ ಸಂದರ್ಭವಿದ್ದರೂ, ಸುದೀಪ್ ಚೆನ್ನಾಗಿಯೇ ಹ್ಯಾಂಡಲ್ ಮಾಡುತ್ತಾರೆ. ಆದರೆ, ಸಿಎಂ ಬಸವರಾಜ ಬೊಮ್ಮಾಯಿಗೆ ಬೆಂಬಲ ಸೂಚಿಸುವಾಗ ಮಾತ್ರ ಸ್ವಲ್ಪ ತಡಬಡಾಯಿಸಿದಂತೆ ಇತ್ತು. ಆದ್ರೂ, ಸುದ್ದಿಗೋಷ್ಠಿ ಬಳಿಕ ಮತ್ತೆ ಈ ಬಗ್ಗೆ ಎಲ್ಲೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ.

ಹಾಗಿದ್ರೆ, ಸುದೀಪ್ ಈಗ ಏನು ಮಾಡುತ್ತಿದ್ದಾರೆ? ಅವರ ನಿಲುವು ಏನು? ಅಂತ ಫ್ಯಾನ್ಸ್ ತಲೆಕೆಡಿಸಿ ಕೊತಿರುವಾಗಲೇ ವಿಡಿಯೋ ಒಂದು ವೈರಲ್ ಆಗಿತ್ತು. ರಸ್ತೆಯಲ್ಲಿ ಅಪಘಾತವಾಗಿದ್ದ ರಸ್ತೆ ಮಧ್ಯೆ ಒದ್ದಾಡುತ್ತಿದ್ದ ಯುವಕನಿಗೆ ಸುದೀಪ್ ನೀರು ಕುಡಿಸುವ ದೃಶ್ಯವದು. ಇದನ್ನು ಅಭಿಮಾನಿಗಳು ಕಕ್ಕಾಬಿಕ್ಕಿಯಾಗಿದ್ದರು. ಈ ಘಟನೆ ಎಲ್ಲಿ ನಡೆದಿದ್ದು ಎಲ್ಲಿ ಅಂತ ಹುಡುಕಾಡುತ್ತಿದ್ದರು. ಬಳಿಕ ಇದು ರಿಯಲ್ ಅಲ್ಲ. ಶೂಟಿಂಗ್ ವಿಡಿಯೋ ಅನ್ನೋದು ರಿವೀಲ್ ಆಗಿತ್ತು.

After Campaign Controversy Kichcha Sudeep participated In Usire Usire Movie

'ಉಸಿರೇ ಉಸಿರೇ' ಶೂಟಿಂಗ್‌ನಲ್ಲಿ ಕಿಚ್ಚ

ನಟಿ ಹಾಗೂ ಕರ್ನಾಟಕ ಬುಲ್ಡೋಜರ್ ತಂಡದ ಆಟಗಾರ ರಾಜೀವ್ ನಟಿಸುತ್ತಿರುವ ಸಿನಿಮಾ 'ಉಸಿರೇ ಉಸಿರೇ'. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿದ್ದು ಈಗ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ಪ್ರಮುಖ ದೃಶ್ಯವೊಂದರಲ್ಲಿ ಸುದೀಪ್ ನಟಿಸುತ್ತಿದ್ದಾರೆ.

'ಬಿಗ್ ಬಾಸ್' ಖ್ಯಾತಿಯ ರಾಜೀವ್ ಈ ಸಿನಿಮಾ ಹೀರೊ. ರಾಜೀವ್‌ಗೆ ಶ್ರೀಜಿತ ಹೀರೊಯಿನ್. ಇವರೊಂದಿಗೆ ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿ.ಎಂ.ವಿಜಯ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಶೂಟಿಂಗ್ ವೇಳೆ ಯಾರೋ ತೆಗೆದ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಒಮ್ಮೆ ಭಾವುಕರಾಗಿದ್ದಂತೂ ನಿಜ. ಕಿಚ್ಚ ಸುದೀಪ್ ಟೀಕೆಗಳಿಗೆ ಕಿವಿಗೊಡದೆ ತಮ್ಮಷ್ಟ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಸಮಯ ನಿಗದಿಯಾಗುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ಸೂಚಿಸಿದವರ ಪರ ಪ್ರಚಾರ ಮಾಡಲಿದ್ದಾರೆ. ಅಲ್ಲದೆ, ಈಗಾಗಲೇ ಮೂರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಶೀಘ್ರದಲ್ಲಿಯೇ ಸಿನಿಮಾ ಅನೌನ್ಸ್ ಮಾಡಲಿದ್ದಾರೆ.

More from Filmibeat

English summary
After Campaign Controversy Kichcha Sudeep participated In Usire Usire Movie, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X