ಮತ್ತೆ ಡಾಕ್ಟರ್ ಆಗಿ ಬರ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

ನಟ ಗೋಲ್ಡನ್ ಸ್ಟಾರ್ ಗಣೇಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಗಣೇಶ್ 'ಗೀತಾ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಈ ನಡುವೆ ಗಣೇಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಐದಾರು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ಗಣಿ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ.

Recommended Video

ಮಲೇಷಿಯಾದಲ್ಲಿ Brahma ಚಿತ್ರದ ರೊಮ್ಯಾಂಟಿಕ್ ಹಾಡು ತಯಾರಾಗಿದ್ದು ಹೀಗೆ | Romantic Scenes | Filmibeat Kannada

ಹೆಚ್ಚಾಗಿ ರೊಮ್ಯಾಂಟಿಕ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಗಣೇಶ್ ಈಗ ಮತ್ತೆ ಡಾಕ್ಟರ್ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಹೌದು, ಗಣೇಶ್ ಸದ್ಯ ಸಹಿ ಮಾಡಿರುವ ಹೊಸ ಸಿನಿಮಾದಲ್ಲಿ ಗಣೇಶ್ ನ್ಯೂರೋಸರ್ಜನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷ ಅಂದರೆ ಈ ಸಿನಿಮಾಗೆ ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿರುವುದು ಸಹ ವೈದ್ಯರು. ಡಾ.ಶಶಿಕಲಾ ಪಿ ನಿರ್ದೇಶನ ಮಾಡುತ್ತಿದ್ದಾರೆ. ಡಾ. ಶೈಲೇಶ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ.

After Chamak Golden Star Ganesh To Play Doctor Role His Next Movie

ವೈದ್ಯರಾಗಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಿರ್ದೇಶಕರು ಮತ್ತು ನಿರ್ಮಾಪಕರ ಅನುಭವಗಳನ್ನು ತೆರೆಮೇಲೆ ತರುತ್ತಿದ್ದಾರಂತೆ. ವೈದ್ಯರ ಭಾವನಾತ್ಮಕ ಬದುಕಿನ ಕುರಿತ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. ಗಣೇಶ್ ಅವರನ್ನೇ ಗಮನದಲ್ಲಿ ಇಟ್ಟುಕೊಂಡು ಈ ಕಥೆ ಸಿದ್ಧಪಡಿಸಿದ್ದಾರಂತೆ.

ನಟ ಗಣೇಶ್ ಕಥೆ ಕೇಳಿ ಇಂಪ್ರೆಸ್ ಆಗಿದ್ದಾರಂತೆ. ನಿರ್ದೇಶಕಿ ಶಶಿಕಲಾ ಅವರು ಕಥೆ ನಿರೂಪಿಸಲು ಪ್ರಾರಂಭಿಸಿ 20 ನಿಮಿಷದಲ್ಲೇ ಗಣೇಶ್ ಒಪ್ಪಿಕೊಂಡರಂತೆ. ಗಣೇಶ್ ಡಾಕ್ಟರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಸಿಂಪಲ್ ಸುನಿ ನಿರ್ದೇಶನದ ಚಮಕ್ ಸಿನಿಮಾದಲ್ಲಿ ಗಣೇಶ್ ಸ್ತ್ರೀರೋಗ ತಜ್ಞನ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಮತ್ತೆ ಡಾಕ್ಟರ್ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಸಿನಿಮಾದ ಕಥೆಯ ಜೊತೆಗೆ ಸುಂದರವಾದ ಸಂಗೀತ ಚಿತ್ರಪ್ರೇಕ್ಷಕರ ಗಮನಸೆಳೆಯಲಿದೆಯಂತೆ. ಸದ್ಯ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ. ಗಣೇಶ್ ಬಳಿ ಸದ್ಯ ಗಾಳಿಪಟ-2, ಸಖತ್, ತ್ರಿಬಲ್ ರೈಡ್ ಸಿನಿಮಾಗಳು ಸೇರಿದ್ದಂತೆ ಸಾಕಷ್ಟು ಸಿನಿಮಾಗಳಿವೆ.

More from Filmibeat

English summary
After Chamak Movie Golden star Ganesh to play Doctor role in his next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X