ಜೈಲಿನಿಂದ ಹೊರಬಂದು ದರ್ಶನ್ 'KGF'ಗಿಂತ ದೊಡ್ಡ ಚಿತ್ರ ಮಾಡ್ತಾರೆ; ಬಹುಭಾಷಾ ನಟಿ ಸವಾಲ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಸ್ಯಾಂಡಲ್‌ವುಡ್ ತಾರೆಯರು ಹಲವರು ಮಾತನಾಡಿದ್ದಾರೆ. ಕೆಲವರು ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲಿ ಎನ್ನುತ್ತಿದ್ದಾರೆ. ಮತ್ತೆ ಕೆಲವರು ದರ್ಶನ್ ಸರ್ ಯಾವುದೇ ತಪ್ಪು ಮಾಡಿಲ್ಲ, ಅವ್ರು ಆದಷ್ಟು ಬೇಗ ಸಂಕಷ್ಟದಿಂದ ಪಾರಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಪ್ರಕರಣದಲ್ಲಿ ನಟ ದರ್ಶನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನಟಿ ಸಂಜನಾ ಈ ಬಗ್ಗೆ ಮಾತನಾಡಿದ್ದಾರೆ. ಪೊಲೀಸರು ನಟ ದರ್ಶನ್ ಅವರನ್ನು ವಶಕ್ಕೆ ಪಡೆದಾಗ ಮೊದಲು ಪ್ರತಿಕ್ರಿಯಿಸಿದ್ದು ಸಂಜನಾ ಗರ್ಲಾನಿ. ಅಂದೇ ವೀಡಿಯೋ ಮಾಡಿ ನಟ ದರ್ಶನ್ ಯಾವುದೇ ತಪ್ಪು ಮಾಡಿರಲ್ಲ. ಅವ್ರು ಆದಷ್ಟು ಬೇಗ ಸಂಕಷ್ಟದಿಂದ ಪಾರಾಗಲಿ ಎಂದಿದ್ದರು.

ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವನ ಹೇಗಿರುತ್ತದೆ. ಅದು ನರಕ. ಯಾರಿಗೂ ಆ ನರಕ ಬೇಡ ಎಂದು ಸಂಜನಾ ಹೇಳಿದ್ದಾರೆ. ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಬಂಧನವಾಗಿತ್ತು. ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಇತ್ತೀಚೆಗೆ ಪ್ರಕರಣದಲ್ಲಿ ಆಕೆಗೆ ಬಿಗ್ ರಿಲೀಫ್ ಸಿಕ್ಕಿತ್ತು. ಸುದ್ದಿ ಮನೆ ಯೂಟ್ಯೂಬ್ ಚಾನಲ್‌ನಲ್ಲಿ ದರ್ಶನ್ ಬಂಧನದ ಬಗ್ಗೆ ಸಂಜನಾ ಮಾತನಾಡಿದ್ದಾರೆ.
"ಜೀವನದಲ್ಲಿ ಯಾರಿಗೂ ಜೈಲು ಶಿಕ್ಷೆ ಬೇಡ. ಅದು ಬಹಳ ಕೆಟ್ಟ ಜಾಗ. ಅಲ್ಲಿರುವುದು ಕಷ್ಟ. ಅಲ್ಲಿ ಹಣ ಕೊಟ್ಟರೆ 5 ರೂಪಾಯಿಗೆ ಹನಿ ಕೇಕ್, 10 ರೂಪಾಯಿಗೆ ಚಿಪ್ಸ್ ಪ್ಯಾಕೇಟ್ ಸಿಗುತ್ತದೆ. ಅದು ಬಿಟ್ಟು ಬೇರೆ ಏನು ಸಿಗಲ್ಲ. ಅಲ್ಲಿ ಕೊಡುವ ಊಟ ತಿನ್ನೋಕೆ ಆಗೊಲ್ಲ. ತಿನ್ನೋದು ಕಷ್ಟ. ಚಿಪ್ಸ್ ಇದ್ರೆ ಸ್ವಲ್ಪ ಊಟ ಮಾಡಬಹುದು ಅಷ್ಟೇ" ಎಂದಿದ್ದಾರೆ.

"ದೇವರ ದಯೆಯಿಂದ ದರ್ಶನ್ ಅವರನ್ನು ಇನ್ನು ಆರೋಪಿ ಎನ್ನುತ್ತಿದ್ದಾರೆ. ನಮ್ಮ ಪ್ರಕರಣದಲ್ಲಿ ವಿಚಾರಣೆ ವೇಳೆಯೇ ಅಪರಾಧಿ ಎಂದು ಬಿಟ್ಟಿದ್ದರು. ದರ್ಶನ್ ಸರ್ ಆದಷ್ಟು ಬೇಗ ಜೈಲಿನಿಂದ ಬಿಡುಗಡೆ ಆಗಿ ಹೊರ ಬರಬೇಕು. ದರ್ಶನ್ ಅವ್ರು ಚಿಕ್ಕ ಪರಿವಾರದ ವ್ಯಕ್ತಿ ಮೇಲೆ ಕೈ ಮಾಡುವವರಲ್ಲ. ಅಂತಹ ಚರಿತ್ರೆ ಇಲ್ಲ. ಅಭಿಮಾನಿಗಳೇ ನನ್ನ ಸೆಲೆಬ್ರಿಟೀಸ್ ಎಂದು ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ಜನರನ್ನು ಬಹಳ ಪ್ರೀತಿಸುತ್ತಾರೆ, ಬಹಳ ತಾಳ್ಮೆ ಇದೆ. ಜನರಿಗೆ ಸಹಯ ಮಾಡ್ತಾರೆ."
"ಮನುಷ್ಯನ ಕೆಟ್ಟ ಸಮಯದಲ್ಲಿ ಕೆಟ್ಟದಾಗಿ ಮಾತನಾಡಬೇಡಿ. ಅವರ ಒಳ್ಳೆ ಕೆಲಸಗಳ ಬಗ್ಗೆ ಮಾತನಾಡಿ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ 'ಕೆಜಿಎಫ್'ಗಿಂತ ದೊಡ್ಡ ಸಿನಿಮಾ ಮಾಡ್ತಾರೆ. ಅವರು ಕೆಲಸವನ್ನು ಪೂಜಿಸ್ತಾರೆ. ಬರೀ ಕರ್ನಾಟಕ, ಸೌತ್ ಇಂಡಿಯಾ ಅಲ್ಲ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್‌ನಲ್ಲಿ ಬಹಳ ದೊಡ್ಡ ಸ್ಟಾರ್ ಆಗ್ತಾರೆ. ಕೆಟ್ಟ ನ್ಯೂಸ್ ಬರೆದವರು ಅಷ್ಟೇ ಒಳ್ಳೆ ನ್ಯೂಸ್ ಬರೀತ್ತೀರಾ ನೋಡಿ, ನಾನೇ ಚಾಲೆಂಜ್ ಮಾಡ್ತೀನಿ" ಎಂದಿದ್ದಾರೆ.
4 ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ಸೇರಿ ಹಲವರ ಬಂಧನ ಆಗಿತ್ತು. 3 ತಿಂಗಳ ಬಳಿಕ ಜಾಮೀನು ಪಡೆದು ಸಂಜನಾ ಹೊರ ಬಂದಿದ್ದರು. ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸಂಜನಾ ಗಲ್ರಾನಿ ಹಾಗೂ ಶಿವಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.ಜೂನ್ 24 ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಎಫ್‌ಐಆರ್ ರದ್ದುಗೊಳಿಸಿ ಆದೇಶ ಹೊರಡಿಸಿತ್ತು.


Click it and Unblock the Notifications











