For Quick Alerts
  ALLOW NOTIFICATIONS  
  For Daily Alerts

  50 ದಿನ ಪೂರೈಸಿದ 'ಮದಗಜ', 2023ಕ್ಕೆ ಇದೇ ಟೀಮ್‌ನಿಂದ ಮತ್ತೊಂದು ಸಿನಿಮಾ

  |

  ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 'ಮದಗಜ' ಸಿನಿಮಾ ರಿಲೀಸ್ ಆಗಿತ್ತು. ಶ್ರೀಮುರಳಿ ಹಾಗೂ ಮಹೇಶ್ ಕುಮಾರ್ ಕಾಂಬಿನೇಷನ್ ಸಿನಿಮಾವನ್ನು ರಾಬರ್ಟ್ ಚಿತ್ರದ ಸಿನಿಮಾ ಉಮಾಪತಿ ನಿರ್ಮಾಣ ಮಾಡಿದ್ದರು. 2021 ಡಿಸೆಂಬರ್ 03 ರಂದು ರಾಜ್ಯಾದ್ಯಂತ ಈ ಸಿನಿಮಾ ಗ್ರ್ಯಾಂಡ್ ಆಗಿ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಪರಭಾಷೆ ಸಿನಿಮಾಗಳ ನಡುವೆಯೂ 'ಮದಗಜ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತ್ತು.

  Recommended Video

  ಡಬ್ಬಿಂಗ್, ಒಟಿಟಿ ಸಿನಿಮಾ ರಿಲೀಸ್ ಬಗ್ಗೆ ಶ್ರೀ ಮುರುಳಿ ಕಿಡಿ

  'ಮದಗಜ' ಯಶಸ್ಸಿನ ಬೆನ್ನಲ್ಲೇ ರೋರಿಂಗ್ ಸ್ಟಾರ್ ಶ್ರೀಮುರಳಿ, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಿರ್ಮಾಪಕ ಉಮಾಪತಿ ಮೂವರು ಇತ್ತೀಚೆಗೆ ಒಟ್ಟಿಗೆ ಸೇರಿದ್ದಾರೆ. ಅದಕ್ಕೊಂದು ಕಾರಣ 'ಮದಗಜ' ಸಿನಿಮಾ ಇತ್ತೀಚೆಗೆ 50 ದಿನಗಳನ್ನು ಪೂರೈಸಿದೆ. ಇದೇ ಸಂಭ್ರಮದಲ್ಲಿ ಈ ಮೂರು ಒಟ್ಟಿಗೆ ಸೇರಿದ್ದರು. ಆ ಫೋಟೊಗಳು ವೈರಲ್ ಆಗಿದ್ದವು. ಆ ಭೇಟಿಯಲ್ಲಿ ಮೂವರೂ ತೆಗೆದುಕೊಂಡ ಹೊಸ ನಿರ್ಧಾರಗಳ ಬಗ್ಗೆ ನಿರ್ದೇಶಕ ಮಹೇಶ್ ಕುಮಾರ್ ಫಿಲ್ಮಿಬೀಟ್‌ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

  11 ಸೆಂಟರ್‌ಗಳಲ್ಲಿ ಮದಗಜ 50 ದಿನ

  11 ಸೆಂಟರ್‌ಗಳಲ್ಲಿ ಮದಗಜ 50 ದಿನ

  ಶನಿವಾರ (ಜನವರಿ 22) ರಂದು ರೋರಿಂಗ್ ಸ್ಟಾರ್ ಶ್ರೀಮುರಳಿ, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಿರ್ಮಾಪಕ ಉಮಾಪತಿ ಮೂವರು ಒಟ್ಟಿಗೆ ಸಕ್ಸಸ್ ಪಾರ್ಟಿ ಮಾಡಿದ್ದರು. 'ಮದಗಜ' ಸಿನಿಮಾ 50 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿ ಈ ಪಾರ್ಟಿಯನ್ನು ನಿರ್ಮಾಪಕರು ಆಯೋಜನೆ ಮಾಡಿದ್ದರು. "ಡಿಸೆಂಬರ್ 03 ರಂದು ಬಿಡುಗಡೆಯಾಗಿದ್ದ 'ಮದಗಜ' ಕರ್ನಾಟಕದ 11 ಸೆಂಟರ್‌ಗಳಲ್ಲಿ 50 ದಿನಗಳನ್ನು ಪೂರೈಸಿದೆ. ಎರಡನೇ ಸಿನಿಮಾ 50 ದಿನಗಳನ್ನು ಪೂರೈಸಿದ್ದು ಖುಷಿಯಾಗಿದೆ." ಎಂದು ನಿರ್ದೇಶಕ ಮಹೇಶ್ ಕುಮಾರ್ ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ.

  ಶ್ರೀಮುರಳಿ, ಮಹೇಶ್, ಉಮಾಪತಿ ಬೇರೆ ಚಿತ್ರದಲ್ಲಿ ಬ್ಯುಸಿ

  ಶ್ರೀಮುರಳಿ, ಮಹೇಶ್, ಉಮಾಪತಿ ಬೇರೆ ಚಿತ್ರದಲ್ಲಿ ಬ್ಯುಸಿ

  'ಮದಗಜ' ಸಿನಿಮಾದ ಬಳಿಕ ರೋರಿಂಗ್ ಶ್ರೀಮುರಳಿ 'ಬಘೀರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಡಾ. ಸೂರಿ ನಿರ್ದೇಶನ ಮಾಡಲಿದ್ದಾರೆ. ಸದ್ಯ ಶ್ರೀ ಮುರಳಿ ಈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಮಹೇಶ್ ಕುಮಾರ್ ಮಲ್ಟಿಸ್ಟಾರ್ ಸಿನಿಮಾವೊಂದಕ್ಕೆ ಕಥೆ ಹೆಣೆಯುತ್ತಿದ್ದಾರೆ. ಆದರೆ, ಮುಂದೆ ನಿರ್ದೇಶಿಸಲಿರುವ ಆ ಸ್ಟಾರ್ ಯಾರು? ಅನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಇನ್ನು ನಿರ್ಮಾಪಕ ಉಮಾಪತಿ 'ಉಪಾಧ್ಯಕ್ಷ' ಸಿನಿಮಾದಲ್ಲಿ ಬ್ಯುಸಿ. ಈ ಚಿತ್ರದಲ್ಲಿ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  2023ಗೆ 'ಮದಗಜ' ತಂಡದಿಂದ ಹೊಸ ಸಿನಿಮಾ

  2023ಗೆ 'ಮದಗಜ' ತಂಡದಿಂದ ಹೊಸ ಸಿನಿಮಾ

  'ಮದಗಜ' ಚಿತ್ರದ ಯಶಸ್ಸಿನ ಬೆನ್ನಿನಲ್ಲೇ ಇದೇ ತಂಡ ಮತ್ತೊಂದು ಸಿನಿಮಾಗೆ 2023ರಲ್ಲಿ ಒಂದಾಗಲಿದೆ. "ನಮ್ಮ ನಿರ್ಮಾಪಕರು ಮದಗಜ 50 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸಕ್ಸಸ್ ಪಾರ್ಟಿಯೊಂದನ್ನು ಕೊಟ್ಟಿದ್ದರು. ಈ ವೇಳೆ ಮದಗಜ ತಂಡವೇ ಸೇರಿಕೊಂಡು ಮತ್ತೊಂದು ಸಿನಿಮಾ ನಿರ್ಮಾಣ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಶ್ರೀಮುರಳಿ ಸರ್ ಬಘೀರ್ ಸಿನಿಮಾ ಮುಗಿಯಬೇಕು. ನಾನು ಒಂದು ಮಲ್ಟಿಸ್ಟಾರರ್ ಸಿನಿಮಾಗೆ ಕೆಲಸ ಮಾಡುತ್ತಿದ್ದೇನೆ. ನಿರ್ಮಾಪಕರು ಕೂಡ ಉಪಾಧ್ಯಕ್ಷ ಮಾಡುತ್ತಿದ್ದಾರೆ. ಇವೆಲ್ಲವೂ ಮುಗಿದ ಬಳಿಕ 2023ಕ್ಕೆ ಮತ್ತೆ ಒಟ್ಟಿಗೆ ಸೇರಲಿದ್ದೇವೆ." ಎಂದು ನಿರ್ದೇಶಕ ಮಹೇಶ್ ಕುಮಾರ್ ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

  'ಮದಗಜ' ಸಕ್ಸಸ್ ಮೀಟ್

  'ಮದಗಜ' ಸಕ್ಸಸ್ ಮೀಟ್

  'ಮದಗಜ' 50 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಸಂಭ್ರಮಿಸಲು ತಂಡ ರೆಡಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಕ್ಸಸ್ ಮೀಟ್ ಮಾಡುವುದಾಗಿ ನಿರ್ಮಾಪಕ ಉಮಾಪತಿ ತಂಡಕ್ಕೆ ತಿಳಿಸಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ 'ಮದಗಜ' ಸಕ್ಸಸ್ ಮೀಟ್ ನಡೆಯುತ್ತೆ. 10 ರಿಂದ 15 ದಿನಗಳ ಒಳಗೆ 'ಮದಗಜ' ಸಕ್ಸಸ್ ಮೀಟ್ ನಡೆಯುವ ಸಾಧ್ಯತೆ ಎನ್ನಲಾಗುತ್ತಿದೆ. ಈ ಮಧ್ಯೆ ಶ್ರೀಮುರಳಿ ಅಭಿಮಾನಿಗಳು ಮತ್ತೆ ಕಾಂಬಿನೇಷನ್‌ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳವ ಉತ್ಸಾಹದಲ್ಲಿದ್ದು, ಸಕ್ಸಸ್ ಮೀಟ್‌ನಲ್ಲಿ ಆ ಮಾಹಿತಿ ಸಿಗುವ ಸಾಧ್ಯತೆ ಇದೆ.

  English summary
  After completing 50 days Madagaja team reuniting in 2023. Before that Sri Murali director Mahesh Kumar and Umapathy other projects in pipeline.
  Tuesday, January 25, 2022, 17:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X