twitter
    For Quick Alerts
    ALLOW NOTIFICATIONS  
    For Daily Alerts

    ವಿವಾದದ ಬಳಿಕ ಹಂಸಲೇಖರಿಂದ ಬೃಹತ್ ಸಂವಿಧಾನದ ಪಾಠ: ಯಾಕೀ 'ಬಡವರ ಗೀತೆ'?

    |

    ನಾದಬ್ರಹ್ಮ ಹಂಸಲೇಖ ಹಲವು ದಿನಗಳಿಂದ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ದಿವಂಗತ ಪೇಜಾವರ ಶ್ರೀಗಳ ವಿರುದ್ಧ ನೀಡಿದ ಹೇಳಿಕೆ ನಾದಬ್ರಹ್ಮನನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಕೆಲವರ ಕೆಂಗಣ್ಣಿಗೂ ಗುರಿಯಾಗಿತ್ತು. ಹಂಸಲೇಖ ಹೇಳಿಕೆಯನ್ನು ಖಂಡಿಸಿ ದಿವಂಗತ ಪೇಜಾವರ ಶ್ರೀ ಭಕ್ತ ಸಮೂಹ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿತ್ತು. ಹೀಗಾಗಿ ನಾದ ಬ್ರಹ್ಮ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಬೇಕಾದ ಅನಿವಾರ್ಯತೆ ಎದುರಾಗಿತ್ತು.

    ಹಂಸಲೇಖ ವಿರುದ್ಧ ಧ್ವನಿ ಎತ್ತುವವರು ಒಂದು ಕಡೆ. ಹಂಸಲೇಖ ಪರ ಬೆಂಬಲಕ್ಕೆ ನಿಂತವರು ಮತ್ತೊಂದು ಕಡೆ. ಹೀಗಾಗಿ ಇಬ್ಬರ ನಡುವೆ ವಾದ-ವಿವಾದಗಳು, ಪ್ರತಿಭಟನೆಗೆ ಹಂಸಲೇಖ ಕಾರಣರಾಗಿದ್ದರು. ಇಷ್ಟೆಲ್ಲಾ ನಡೆದ ಬಳಿಕ ಸೈಲೆಂಟ್ ಆಗಿದ್ದ ಹಂಸಲೇಖ ಸಂವಿಧಾನದ ಪಾಠ ಮಾಡಿದ್ದಾರೆ. ಬಡವರ ಗೀತೆಯೊಂದರ ಬಗ್ಗೆ ಸವಿಸ್ತಾರವಾದ ಗೀತೆಯೊಂದನ್ನು ರಚಿಸಿದ್ದಾರೆ. ಈ ಗೀತೆಯೀಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬಡವರ ಗೀತೆ ಸಂವಿಧಾನವೆಂದ ನಾದಬ್ರಹ್ಮ

    ಬಡವರ ಗೀತೆ ಸಂವಿಧಾನವೆಂದ ನಾದಬ್ರಹ್ಮ

    ಹಂಸಲೇಖ ವಿವಾದ ಇನ್ನೂ ತಣ್ಣಗಾಗಿಲ್ಲ. ಅಲ್ಲಲ್ಲಿ ಹಂಸಲೇಖ ವಿರುದ್ಧ ಕಿಡಿ ಹೊತ್ತಿ ಉರಿಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹಂಸಲೇಖ ವಿರುದ್ಧ ಸಾರಿದ ಸಮರ ಇನ್ನೂ ನಿಂತಿಲ್ಲ. ಅದೇ ಮತ್ತೊಂದು ಹಂಸಲೇಖ ಬೆಂಬಲಕ್ಕೆ ನಿಂತು ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಂಸಲೇಖ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲವೆಂದು ಪ್ರತಿಭಟನಾಕಾರರು ಬೆಂಬಲಕ್ಕೆ ನಿಂತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಹಂಸಲೇಖ ಸಂವಿಧಾನದ ಪಾಠ ಮಾಡಿದ್ದಾರೆ. ಬೃಹತ್ ಭಾರತದ ಬೃಹತ್ ಸಂವಿಧಾನ ಎಂದು ಗೀತೆಯೊಂದನ್ನು ರಚಿಸಿದ್ದಾರೆ.

    ಬಡವರ ಸಂವಿಧಾನ ಗೀತೆಯಲ್ಲೇನಿದೆ?

    ಬಡವರ ಸಂವಿಧಾನ ಗೀತೆಯಲ್ಲೇನಿದೆ?

    ಹಂಸಲೇಖ ಸಂವಿಧಾನ ಗೀತೆಯನ್ನು ರಚಿಸಿ, ಸಂವಿಧಾನದ ಮಹತ್ವವನ್ನು ಸಾರಿ ಹೇಳಿದ್ದಾರೆ. ಸಂವಿಧಾನದ ಬಗ್ಗೆ ಹಂಸಲೇಖ ಬರೆದ ಸಾಲುಗಳು ಹೀಗಿವೆ.
    " ನಾನು:
    ನೀನು:
    ನಮಗಾಗಿರೋದೇ ಕಾನೂನು,
    ನಾವು:
    ನೀವು:
    ಎಲ್ಲರೂ ಇದರಲ್ಲಿ ಕೂಡೆವು,
    ಕೂಡೆವು:
    ಬಾಳೆವು:
    ಬಂಧುತ್ವವನು ಕಟ್ಟೇವು
    ಜೀವನ ವಿಧಾನ ಯಾನ:
    ವಿದ್ಯಾ ಪ್ರಧಾನ ಗಾನ:
    ಬೃಹತ್ ಭಾರತದ ಬೃಹತ್ ಸಂವಿಧಾನ!
    ಓ ಬಡವರ ಗೀತೆ,
    ನೀ ಬಹುಜನ ಜಾತೆ!
    ಅಕ್ಷರ ರೂಪದ
    ಶಾಂತಿಯ ಧನಿಯ :
    ಪ್ರಜಾಪ್ರಭುತ್ವದ institution
    ವಂದೇ ಇಂಡಿಯನ್ constitution"

    ಸಂವಿಧಾನ 'ಬಡವರ ಗೀತೆ' ಎಂದಿದ್ದೇಕೆ?

    ಸಂವಿಧಾನ 'ಬಡವರ ಗೀತೆ' ಎಂದಿದ್ದೇಕೆ?

    ಹಂಸಲೇಖ ಸಂವಿಧಾನದ ಬಗ್ಗೆ ಬರೆದ ಈ ಸಾಲುಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಾವೇ ಧ್ವನಿ ನೀಡಿ ಶೇರ್ ಮಾಡಿಕೊಂಡಿದ್ದಾರೆ. ಈ ಸಾಲುಗಳು ಈಗ ವೈರಲ್ ಆಗುತ್ತಿದ್ದು, ಎರಡು ದಿನಗಳ ಹಿಂದೆ ರಚಿಸಿದ ಈ ಗೀತೆಯ ಬಗ್ಗೆ ಚರ್ಚೆಯಾಗುತ್ತಿದೆ. ನವೆಂಬರ್ 26ರಂದು 'ಸಂವಿಧಾನ ದಿವಸ'ವನ್ನು ಆಚರಿಸಲಾಗಿದೆ. ಇದರ ನೆನಪಿಗಾಗಿ ಹಂಸಲೇಖ ಅವರು ಭಾರತದ ಬೃಹತ್ ಸಂವಿಧಾನದ ಬಗ್ಗೆ ಗೀತೆ ರಚಿಸಿದ್ದಾರೆ ಎನ್ನಲಾಗಿದೆ. ಇದೇ ಗೀತೆಯೀಗ ಹಂಸಲೇಖ ಬೆಂಬಲಿಗರ ಮೆಚ್ಚುಗೆ ಗಳಿಸುತ್ತಿದೆ.

    ಹಂಸಲೇಖ ವಿರುದ್ಧ ದೂರು, ತನಿಖೆ ಚುರುಕು

    ಹಂಸಲೇಖ ವಿರುದ್ಧ ದೂರು, ತನಿಖೆ ಚುರುಕು

    ದಿವಂಗತ ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿದ ಹಂಸಲೇಖ ವಿರುದ್ಧ ದೂರು ದಾಖಲಾಗಿದ್ದು, ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ಮೂಲಕ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ. ತಮಗೆ ಬೇಕಿರುವ ಪ್ರಶ್ನೆಗಳನ್ನು ಕೇಳಿ ಹಂಸಲೇಖರಿಂದ ಉತ್ತರ ಪಡೆದಿದ್ದಾರೆ. ಅಗತ್ಯಬಿದ್ದರೆ ಮತ್ತೆ ಕರೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಈ ತನಿಖೆ ಯಾವಾಗ ಮುಗಿಯುತ್ತೆ? ಈ ವಿವಾದದ ಅಂತ್ಯ ಹೇಗಾಗುತ್ತೆ? ಅನ್ನುವ ಕುತೂಹಲವಿದೆ.

    English summary
    After controvercial statement against late Peejawara seer, Hamsalekha wrote constitution poem which is going viral.
    Monday, November 29, 2021, 13:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X