ದರ್ಶನ್ ಹಾದಿಯಲ್ಲಿ ಧ್ರುವ ಸರ್ಜಾ: ನಾಟಕದ ಹಳೆ ಫೋಟೊ ಹಂಚಿಕೊಂಡ ಆ್ಯಕ್ಷನ್ ಪ್ರಿನ್ಸ್!
ಸಿನಿಮಾ ಕಲಾವಿದರ ತೆರೆಯ ಮೇಲಿನ ಬದುಕಿನ ಜೊತೆಗೆ ತೆರೆ ಹಿಂದಿನ ಬದುಕಿನ ಬಗ್ಗೆ ಎಲ್ಲರಿಗೂ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ಸ್ಟಾರ್ ನಟರ ತೆರೆಯ ಮರೆಯ ವಿಚಾರಗಳು ಏನಾದ್ರು ಹೊರ ಬಂದರೆ ಎಲ್ಲರೂ ಕಣ್ಣು ಅರಳಿಸಿ ನೋಡುತ್ತಾರೆ, ಕಿವಿ ಅಗಲಿಸಿ ಕೇಳುತ್ತಾರೆ.
ಅಂತೆಯೇ ನಟ ದರ್ಶನ್ ಅಭಿನಯಿಸಿದ್ದ ನಾಟಕದ ಹಳೆ ಭಾವಚಿತ್ರ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರ್ಶನ್ ಅಭಿಮಾನಿಗಳು ಈ ಫೋಟೋವನ್ನು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೊ ಸುಮಾರು 2 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ನಟ ಧ್ರುವ ಸರ್ಜಾ ಕೂಡ ಈ ಸಾಲಿಗೆ ಸೇರಿದ್ದಾರೆ. ಧ್ರುವ ಸರ್ಜಾ ಸಿನಿಮಾರಂಗಕ್ಕೆ ಬರುವ ಮೊದಲು ಅಭಿನಯ ಕಲಿಯುತ್ತಿದ್ದ ಸಮಯದ ಭಾವಚಿತ್ರ ಹಂಚಿಕೊಂಡಿದ್ದಾರೆ. ಈ ಫೋಟೊವನ್ನು ಸ್ವತಃ ಧ್ರುವ ಸರ್ಜಾ ಶೇರ್ ಮಾಡಿದ್ದಾರೆ.

ಅಭಿನಯ ತರಂಗದಲ್ಲಿ ನಟನೆ ಕಲಿತ ಧ್ರುವ ಸರ್ಜಾ!
ನಟ ಧ್ರುವ ಸರ್ಜಾ ಸಿನಿಮಾ ಜರ್ನಿ ಆರಂಭಕ್ಕೂ ಮೊದಲು ಅಭಿನಯ ತರಂಗದಲ್ಲಿ ನಟನಾ ತರಬೇತಿ ಪಡೆದಿದ್ದಾರೆ. ಆಗ ಮಾಡಿದ ನಾಟಕಗಳಲ್ಲಿ 'ಊರುನಾಗ' ನಾಟಕ ಕೂಡ ಒಂದು. ಆ ನಾಟಕದಲ್ಲಿ ಧ್ರುವ ಅಭಿನಯಿಸಿದ್ದಾರೆ. ಈ ಫೊಟೋವನ್ನು ಧ್ರುವ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಧ್ರುವ ಈ ಫೋಟೊಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಹತ್ತು ವರ್ಷದ ಹಳೆ ಫೋಟೊ ಹಂಚಿಕೊಂಡ ಧ್ರುವ ಸರ್ಜಾ!
ನಟ ಧ್ರುವ ಸರ್ಜಾ ಹತ್ತು ವರ್ಷ ಹಳೆಯ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು 2010ರಲ್ಲಿ ನಟ ಧ್ರುವ ಸರ್ಜಾ ಅಭಿನಯ ತರಂಗದಲ್ಲಿ ಮಾಡಿದ ನಾಟಕ. ಈ ಫೊಟೋ ಹಂಚಿಕೊಂಡ ಧ್ರುವ "ಅಭಿನಯ ತರಂಗ, ಊರು ನಾಗ ಡ್ರಾಮ, ಆನ್ ಸ್ಟೇಜ್" ಅಂತ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ನಾಟಕದ ಎರಡು ವರ್ಷಗಳ ಬಳಿಕ ಧ್ರುವ ಸರ್ಜಾ 2012ರಲ್ಲಿ ಅದ್ದೂರಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.

ಅರ್ಜುನ್ ಸರ್ಜಾ-ಅಪ್ಪು ಹಳೆ ಫೋಟೊ ಕೂಡ ವೈರಲ್ ಆಗಿತ್ತು!
ಇನ್ನೂ ಇತ್ತೀಚೆಗೆ ವೈರಲ್ ಆದ ಮತ್ತೊಂದು ಹಳೆ ಫೋಟೊ ಅಂದರೆ ಅದು ಅರ್ಜುನ್ ಸರ್ಜಾ ಹಂಚಿಕೊಂಡ ಫೋಟೊ. ಅರ್ಜುನ್ ಸರ್ಜಾ ಪುನೀತ್ ರಾಜ್‌ಕುಮಾರ್ ಮಗುವಾಗಿದ್ದಾಗ, ಅವರನ್ನು ಎತ್ತಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದ್ದರು. ಜೊತೆಗೆ ಮೈ ಡಿಯರ್ ಅಪ್ಪು ಅಂತ ಬರೆದು ಕೊಂಡಿದ್ದರು. ಆ ಫೋಟೊ ಕೂಡ ವೈರಲ್ ಲಿಸ್ಟ್ ಸೇರಿತ್ತು.

ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾ ಬ್ಯುಸಿ!
ಸದ್ಯ ಧ್ರುವ ಸರ್ಜಾ ಮಾರ್ಟಿನ್ ಚಿತ್ರದಲ್ಲಿ ಬ್ಯುಸಿ ಆಗದ್ದಾರೆ. ಪೊಗರು ಬಳಿಕ ಧ್ರುವ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಎ.ಪಿ ಅರ್ಜುನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಮಾರ್ಟಿನ್ ಚಿತ್ರದ ಪೋಸ್ಟರ್ ಮತ್ತು ಟೀಸರ್‌ಗಳು ರಿಲೀಸ್ ಆಗಿವೆ. ಈಗ ಅದೇ ಸದ್ಯ ಚಿತ್ರೀಕರಣದಲ್ಲಿ ಧ್ರುವ ಬ್ಯುಸಿ ಆಗಿದ್ದು, ಇತ್ತೀಚೆಗೆ ವರ್ಕೌಟ್ ಮಾಡುವ ವಿಡೀಯೋವನ್ನು ಹಂಚಿಕೊಂಡಿದ್ದರು.


Click it and Unblock the Notifications











