ನನ್ನ ಎದೆಯಲ್ಲಿದ್ದಾರೆ ನನ್ನ ಸೆಲೆಬ್ರೆಟೀಸ್‌ ಎಂದ ದರ್ಶನ್‌: ನಮ್ಮ ಎದೆಯಲ್ಲಿ ನಮ್ಮ ದೇವ್ರು ಎಂದ ಫ್ಯಾನ್ಸ್!

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಎದೆಮೇಲೆ ಟ್ಯಾಟೂ ಹಾಕಿಸಿಕೊಂಡು ನನ್ನ ಅಭಿಮಾನಿಗಳು ನನ್ನ ಎದೆಯಲ್ಲಿ ಇದ್ದಾರೆ ಎಂದು ಸಾರಿ ಹೇಳಿದ್ದರು. ಇದೀಗ ಅಭಿಮಾನಿಗಳು ನಮ್ಮ ಆರಾಧ್ಯ ದೈವ ನಮ್ಮ ಎದೆಯಲ್ಲಿದ್ದಾರೆ ನೋಡಿ ಎನ್ನುತ್ತಿದ್ದಾರೆ. ತಮ್ಮ ಎದೆ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ.

ನಟ ದರ್ಶನ್ ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟೀಸ್ ಎಂದು ಕರೆಯುತ್ತಾರೆ. ದರ್ಶನ್ ಅಭಿಮಾನಿ ಬಳಗ ಎಷ್ಟು ದೊಡ್ಡದು ಎನ್ನುವುದು ಗೊತ್ತೇಯಿದೆ. ಇತ್ತೀಚೆಗೆ 'ಕ್ರಾಂತಿ' ಸಿನಿಮಾಗೆ ದರ್ಶನ್ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. ಚಾಲೆಂಜಿಂಗ್ ಸ್ಟಾರ್ ಕೂಡ ನಮ್ಮ ಸೆಲೆಬ್ರೆಟೀಸ್ ಋಣ ತೀರಿಸೋಕೆ ಸಾಧ್ಯವೇ ಇಲ್ಲ ಎಂದಿದ್ದರು. ತಮ್ಮ ಚರ್ಮ ಕಿತ್ತು ಅಭಿಮಾನಿಗಳಿಗೆ ಚಪ್ಪಲಿ ಹೊಲೆದು ಕೊಟ್ಟರೂ ಕಮ್ಮಿನೇ ಎಂದು ಪದೇ ಪದೇ ಹೇಳುತ್ತಿರುತ್ತಾರೆ.

ಇತ್ತೀಚೆಗೆ ನಟ ದರ್ಶನ್ ತಮ್ಮ ಎದೆಯನಲ್ಲಿ 'ನನ್ನ ಪ್ರೀತಿಯ ಸೆಲೆಬ್ರೆಟೀಸ್' ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನನ್ನನ್ನು ಇಷ್ಟು ಪ್ರೀತಿಸುವ ಅಭಿಮಾನಿಗಳಿಗೆ ಇದಕ್ಕಿಂತ ಹೆಚ್ಚು ಏನು ಮಾಡಲು ಸಾಧ್ಯ. ಅವರು ಇಷ್ಟೆಲ್ಲಾ ಮಾಡುತ್ತಿದ್ದಾರೆ, ನಾನು ಮಾಡಲಿಲ್ಲ ಅಂದ್ರೆ ಹೇಗೆ ಎಂದಿದ್ದರು.

ಫ್ಯಾನ್ಸ್ ಎದೆ ಮೇಲೆ ಟ್ಯಾಟೂ

ಫ್ಯಾನ್ಸ್ ಎದೆ ಮೇಲೆ ಟ್ಯಾಟೂ

ದರ್ಶನ್ ಹೀಗೆ ತಮ್ಮ ಎದೆ ಮೇಲೆ ಅಭಿಮಾನಿಗಳ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಂತೆ. ಅಭಿಮಾನಿಗಳು ಕೂಡ ಟ್ಯಾಟೂ ಶಾಪ್‌ಗಳಿಗೆ ಮುಗಿಬಿದ್ದಿದ್ದಾರೆ. ತಮ್ಮ ಎದೆಯ ಮೇಲೆ ತಮ್ಮ ಆರಾಧ್ಯ ದೈವರ ಟ್ಯಾಟು ಹಾಕಿಸಿಕೊಳ್ಳಲು ಶುರು ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಬಹಳ ಹಿಂದಿನಿಂದಲೂ ಅಭಿಮಾನಿಗಳು ಈ ರೀತಿ ನೆಚ್ಚಿನ ನಟನ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೆ ಹಾಕಿಸಿಕೊಳ್ಳುತ್ತಿದ್ದಾರೆ.

ನಮ್ಮ ಎದೆಯಲ್ಲಿ ನಮ್ಮ ದೇವರಿದ್ದಾರೆ

ನಮ್ಮ ಎದೆಯಲ್ಲಿ ನಮ್ಮ ದೇವರಿದ್ದಾರೆ

ದರ್ಶನ್ 'ನನ್ನ ಪ್ರೀತಿಯ ಸೆಲೆಬ್ರೆಟೀಸ್' ಎಂದು ಟ್ಯಾಟೂ ಹಾಕಿಸಿಕೊಂಡರೆ ಅಭಿಮಾನಿಗಳ ತಮ್ಮ ಎದೆಯ ಮೇಲೆ 'ಡಿ ದೇವರು' ಎಂದು ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. "ನಮ್ಮ ಬಾಸ್ ನನ್ನ ಸೆಲೆಬ್ರೆಟಿಗಳು ನನ್ನ ಎದೆಯಲ್ಲಿದ್ದಾರೆ ಎಂದರು. ನಮ್ಮ ಎದೆಯಲ್ಲಿ ನಮ್ಮ ದೇವರು ಇದ್ದಾರೆ ಅನ್ನುವುದನ್ನು ನಾವು ತೋರಿಸುತ್ತಿದ್ದೇವೆ" ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಹಿಂದೆ ಕೆಲ ಅಭಿಮಾನಿಗಳು ತಮ್ಮ ಬೆನ್ನ ಮೇಲೆ ದರ್ಶನ್ ಅವರ ದೊಡ್ಡ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದರು.

ಫೆ.16ಕ್ಕೆ ದರ್ಶನ್ ಹುಟ್ಟುಹಬ್ಬ

ಫೆ.16ಕ್ಕೆ ದರ್ಶನ್ ಹುಟ್ಟುಹಬ್ಬ

ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತಯಾರಿ ನಡೆಸುತ್ತಿದ್ದಾರೆ. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬ. ಅಭಿಮಾನಿಗಳಿಗೆ ಅಂದೇ ದೀಪಾವಳಿ, ಯುಗಾದಿ. ಕಾರಣಾಂತರಗಳಿಂದ 2 ವರ್ಷ ಹುಟ್ಟುಹಬ್ಬದ ದಿನ ಅಭಿಮಾನಿಗಳ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ದರ್ಶನ್ ತಮ್ಮ ನಿವಾಸದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ಶುಭಾಶಯ ಕೋರಬಹುದು. ಇನ್ನು ಅಭಿಮಾನಿಗಳ ಸ್ಪೆಷಲ್ ಸಿಡಿಪಿ ಟ್ರೆಂಡ್ ಕೂಡ ನಡೆಯಲಿದೆ.

ಬರ್ತ್‌ಡೇಗೆ D56 ಟೈಟಲ್ ರಿವೀಲ್

ಬರ್ತ್‌ಡೇಗೆ D56 ಟೈಟಲ್ ರಿವೀಲ್

ತಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ದುಂದು ವೆಚ್ಚ ಬೇಡ ಎಂದು ದರ್ಶನ್ ಹೇಳಿದ್ದಾರೆ. ಅದೇ ಹಣದಲ್ಲಿ ದವಸ ಧಾನ್ಯ ತಂದು ಕೊಡಿ. ಅದನ್ನು ಅಗತ್ಯ ಇರುವವರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ಅಭಿಮಾನಿಗಳು ಅಕ್ಕಿ, ಬೇಳೆ ಸೇರಿದಂತೆ ಸಾಕಷ್ಟು ದವಸ ಧಾನ್ಯವನ್ನು ದರ್ಶನ್ ನಿವಾಸಕ್ಕೆ ತಲುಪಿಸುತ್ತಿದ್ದಾರೆ. ಇನ್ನು ದರ್ಶನ್ ಹುಟ್ಟಹಬ್ಬದ ಸಂಭ್ರಮದಲ್ಲೇ D56 ಟೈಟಲ್ ರಿವೀಲ್ ಆಗಲಿದೆ.

More from Filmibeat

English summary
After Darshan gets tattooed on his chest, now Fans also tattooing Darshan name on chest. Darshan Fans tattoo Craze Continues. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X