'ದಿಯಾ' ಸಿನಿಮಾ ಬಳಿಕ ಪೃಥ್ವಿ ಅಂಬರ್ ಹೊಸ ಸಿನಿಮಾ ಅನೌನ್ಸ್: ಡಾಲಿ ಧನಂಜಯ್ ಸಾಥ್

"ಲೈಫ್ ಈಸ್ ಫುಲ್ ಆಫ್ ಮಿರಾಕಲ್ ಅಂಡ್ ಸರ್ಪ್ರೈಸ್" ಎನ್ನುತ್ತಿದ್ದ ದಿಯಾ ಸಿನಿಮಾದ ನಾಯಕ ಪೃಥ್ವಿ ಅಂಬರ್ ಈಗ 'ಲೈಫ್ ಈಸ್ ಬ್ಯೂಟಿಫುಲ್' ಎನ್ನುತ್ತಿದ್ದಾರೆ. ಹೌದು, ದಿಯಾ ಸಿನಿಮಾದ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯಗೆದ್ದಿದ್ದ ನಟ ಪೃಥ್ವಿ ಅಂಬರ್ ಕಡೆಯಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕಿದೆ.

Recommended Video

Brahma ಚಿತ್ರದ ಅದ್ದೂರಿ ತೆರೆ ಹಿಂದಿನ ದೃಶ್ಯಗಳು | Behind the scenes | Filmibeat Kannada

ದಿಯಾ ಸಿನಿಮಾ ಬಳಿಕ ಪೃಥ್ವಿ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಪೃಥ್ವಿ ಹೊಸ ಸಿನಿಮಾ ಅನೌನ್ಸ್ ಆಗಿದೆ. ಚಿತ್ರಕ್ಕೆ 'ಲೈಫ್ ಈಸ್ ಬ್ಯೂಟಿಫುಲ್' ಎಂದು ಹೆಸರಿಡಲಾಗಿದೆ. ವಿಶೇಷ ಅಂದರೆ ಪೃಥ್ವಿಗೆ ನಟ ಡಾಲಿ ಧನಂಜಯ್ ಸಾಥ್ ನೀಡಿದ್ದಾರೆ. ಅಂದರೆ ಪೃಥ್ವಿ ಹೊಸ ಸಿನಿಮಾದ ಪೋಸ್ಟರ್ ಅನ್ನು ಧನಂಜಯ್ ರಿಲೀಸ್ ಮಾಡಿದ್ದಾರೆ. ಮುಂದೆ ಓದಿ...

ಮೆಚ್ಚುಗೆ ವ್ಯಕ್ತಪಡಿಸಿದ ಧನಂಜಯ್

ಮೆಚ್ಚುಗೆ ವ್ಯಕ್ತಪಡಿಸಿದ ಧನಂಜಯ್

ನಟ ಧನಂಜಯ್, ಪೃಥ್ವಿ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ "ಲೈಫ್ ಈಸ್ ಫುಲ್ ಆಫ್ ಮಿರಾಕಲ್ ಅಂಡ್ ಸರ್ಪ್ರೈಸ್. ನೀವು ಎಲ್ಲರೂ ಕಾಯುತ್ತಿದ್ದ ಸರ್ಪ್ರೈಸ್ ಇಲ್ಲಿದೆ. ಪೃಥ್ವಿ ಹೊಸ ಸಿನಿಮಾದ ಟೈಟಲ್ ರಿಲೀಸ್ ಮಾಡಲು ಸಂತೋಷವಾಗುತ್ತಿದೆ. ಟೈಟಲ್ ಹಾಗೂ ಟೀಂ ಭರವಸೆ ಮೂಡಿಸುವಂತಿದೆ." ಎಂದು ಟ್ವೀಟ್ ಮಾಡಿದ್ದಾರೆ.

ಖಾಲಿ ರಸ್ತೆಯಲ್ಲಿ ಹೊರರುವ ಪೃಥ್ವಿ

ಖಾಲಿ ರಸ್ತೆಯಲ್ಲಿ ಹೊರರುವ ಪೃಥ್ವಿ

ಈ ಪೋಸ್ಟರ್ ನಲ್ಲಿ ನಟ ಪೃಥ್ವಿ ಅಂಬರ್ ಖಾಲಿ ರಸ್ತೆಯಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದಾರೆ. ಸೂರ್ಯ ಮತ್ತು ಪ್ರಕೃತಿಯ ನಡುವೆ ಪೃಥ್ವಿ ಪಯಣಿಸುತ್ತಿರುವ ಪೋಸ್ಟರ್ ಕುತೂಹಲ ಹೆಚ್ಚಿಸುತ್ತಿದೆ. ಪೋಸ್ಟರ್ ನಲ್ಲಿ ನಾಯಕನ ಮುಖ ಬಹಿರಂಗವಾಗಿಲ್ಲ.

ಲೋಹಿತ್ ನಿರ್ಮಾಣ, ಚಿತ್ರಕ್ಕೆ ಇಬ್ಬರು ನಿರ್ದೇಶಕರು

ಲೋಹಿತ್ ನಿರ್ಮಾಣ, ಚಿತ್ರಕ್ಕೆ ಇಬ್ಬರು ನಿರ್ದೇಶಕರು

'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾ 'ಮಮ್ಮಿ' ಮತ್ತು ದೇವಕಿ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಲೋಹಿತ್ ಎಚ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಚಿತ್ರಕ್ಕೆ ಕಿಶೋರ್ ನರಸಿಂಹಯ್ಯ ಬಂಡವಾಳ ಹೂಡುತ್ತಿದ್ದಾರೆ. ವಿಶೇಷ ಅಂದರೆ ಅರುಣ್ ಕುಮಾರ್ ಮತ್ತು ಸಾಬು ಅಲೋಶಿಯಸ್ ಜೊತೆಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಜಾಹೀರಾತು ಪ್ರಪಂಚದಲ್ಲಿ ಸುಮಾರು 20 ವರ್ಷಗಳಿಂದ ಕೆಲಸ ಮಾಡಿರುವ ಅನುಭವ ಇರುವ ಇಬ್ಬರೂ ಈಗ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ.

ಚಿತ್ರದ ಬಗ್ಗೆ ಲೋಹಿತ್ ಹೇಳಿದ್ದೇನು?

ಚಿತ್ರದ ಬಗ್ಗೆ ಲೋಹಿತ್ ಹೇಳಿದ್ದೇನು?

ಈ ಸಿನಿಮಾ ರಿಮೇಕ್ ಅನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಈಗಾಗಲೆ 'ಲೈಫ್ ಈಸ್ ಬ್ಯೂಟಿಫುಲ್' ಹೆಸರಿನ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ಇದೆ. ಆದರೆ ಈ ವಿಚಾರವನ್ನು ನಿರ್ಮಾಪಕ ಲೋಹಿತ್ ತಳ್ಳಿಹಾಕಿದ್ದಾರೆ. 'ಫಿಲ್ಮಿ ಬೀಟ್ ಕನ್ನಡ'ದ ಜೊತೆ ಮಾತನಾಡಿದ ಲೋಹಿತ್, " ದಿಯಾ ಬಳಿಕ ಪೃಥ್ವಿ ಅಂಬರ್ ಮಾಡುತ್ತಿರುವ ಸಿನಿಮಾವಿದು. ಸದ್ಯ ಟೈಟಲ್ ಪೋಸ್ಟರ್ ಮಾತ್ರ ರಿವೀಲ್ ಮಾಡಿದ್ದೀವಿ. ಸದ್ಯದಲ್ಲೇ ಸಿನಿಮಾದ ಫಸ್ಟ ಲುಕ್ ಮತ್ತು ಹೆಚ್ಚಿನ ಮಾಹಿತಿ ರಿವೀಲ್ ಮಾಡುತ್ತೇವೆ. ಎಮೋಷನ್ ಮತ್ತು ರಿಲೇಷನ್ ಶಿಪ್ ಬಗ್ಗೆ ಇರುವ ಸಿನಿಮಾ. ಇದು ಯಾವುದೇ ಸಿನಿಮಾದ ರಿಮೇಕ್ ಅಲ್ಲ." ಎಂದಿದ್ದಾರೆ.

ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ

ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ

ಸದ್ಯ ಬಹುತೇಕ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ಸಿನಿಮಾತಂಡ ಮುಂದಿನ ತಿಂಗಳು ಚಿತ್ರೀಕರಣಕ್ಕೆ ಹೊರಡಲು ಸಿದ್ಧವಾಗಿದೆ. 'ದಿಯಾ' ಸಿನಿಮಾದಲ್ಲಿ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದ ಪೃಥ್ವಿ, 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದಲ್ಲಿ ಹೇಗಿರಲಿದೆ ಪಾತ್ರ, ಪೃಥ್ವಿಗೆ ಜೋಡಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

More from Filmibeat

English summary
After a Dia movie Success Actor Pruthvi Ambar Announces new film, title Life is beautiful.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X