ಬಾನಿಗೊಂದು ಎಲ್ಲೆ ಎಲ್ಲಿದೆ; ಜಾಲಿ ಮೂಡ್‌ನಲ್ಲಿ ಯುವ ರಾಜ್‌ಕುಮಾರ್
ನಟ ಯುವ ರಾಜ್‌ಕುಮಾರ್ 'ಎಕ್ಕ' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಜುಲೈ 18ಕ್ಕೆ ತೆರೆಗೆ ಬಂದಿದ್ದ ಸಿನಿಮಾ 3ನೇ ವಾರದತ್ತ ಮುನ್ನುಗ್ಗುತ್ತಿದೆ. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರೋಹಿತ್ ಪದಕಿ ನಿರ್ದೇಶನದ ಸಿನಿಮಾ ಮಾಸ್ ಮಾತ್ರವಲ್ಲ ಫ್ಯಾಮಿಲಿ ಆಡಿಯನ್ಸ್ ಗಮನ ಸೆಳೆದಿದೆ.
2ನೇ ವೀಕೆಂಡ್ ಕೂಡ 'ಎಕ್ಕ' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. 'ಸು ಫ್ರಂ ಸೋ', 'ಸಯ್ಯಾರ', 'ಮಹಾವತಾರ್ ನರಸಿಂಹ', 'ಹರಿಹರ ವೀರಮಲ್ಲು' ಹಾಗೂ 'ತಲೈವಾ ತಲೈವಿ' ಚಿತ್ರಗಳ ಆರ್ಭಟದ ನಡುವೆಯೂ 'ಎಕ್ಕ' ಸಿನಿಮಾ ಜಗ್ಗದೇ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಯುವ ರಾಜ್‌ಕುಮಾರ್ ನಟಿಸಲಿದ್ದಾರೆ.

ಮುಂದಿನ ತಿಂಗಳು ತಮ್ಮ 3ನೇ ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ. ಆದಷ್ಟು ಬೇಗ ಆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಇನ್ನು 'ಎಕ್ಕ' ಸಕ್ಸಸ್ ಹಾಗೂ ಹೊಸ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ಒಂದಷ್ಟು ಸಮಯದ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಹೋದರ ವಿನಯ್ ಹಾಗೂ ವಂದಿತಾ ಜೊತೆ ಸುತ್ತಾಡುತ್ತಿದ್ದಾರೆ. ಜಾಲಿ ಮೂಡ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
ನಟ ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ ನಡುವಿನ ಸಂಘರ್ಷದ ಬಗ್ಗೆ ವಿನಯ್ ಹಾಗೂ ಶಿವಣ್ಣ ಪ್ರತಿಕ್ರಿಯಿಸಿದ್ದರು. ರಮ್ಯಾಗೆ ಕಿಡಿಗೇಡಿಗಳು ಕೆಟ್ಟದಾಗಿ ಮೆಸೇಜ್ ಮಾಡಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆಕೆಯ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಟಾಂಗ್ ಕೊಟ್ಟು ಪೋಸ್ಟ್ ಮಾಡಿದ್ದರು. ಆದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಯುವ, ವಿನಯ್ ಆರಾಮಾಗಿ ಇದ್ದಾರೆ.

ಅಭಿಮಾನಿಗಳು ಕೂಡ ದೊಡ್ಮನೆ ಪರ ನಿಂತಿದ್ದಾರೆ. ಕೌಟುಂಬಿಕ ಭಿನ್ನಾಭಿಪ್ರಾಯವನ್ನು ಅವರು ಸರಿಪಡಿಸಿಕೊಳ್ಳುತ್ತಾರೆ. ಸುಖಾಸುಮ್ಮನೆ ಈಗ ನಡೆಯುತ್ತಿರುವ ಬೆಳವಣಿಗೆಯಲ್ಲಿ ಯುವ ವೈಯಕ್ತಿಕ ಜೀವನ ವಿಚಾರ ಎಳೆದು ತರುವ ಅವಶ್ಯಕತೆ ಇಲ್ಲ. ನಾವು ರಮ್ಯಾ ಅವರ ಪರ ನಿಂತಿದ್ದೇವೆ. ವೈಯಕ್ತಿಕ ವಿಚಾರಕ್ಕೂ ಮತ್ತೊಬ್ಬರ ತೇಜೋವದೆ ಮಾಡುವದಕ್ಕೂ ವ್ಯತ್ಯಾಸವಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳಿಗೆ ತಿರುಗೇಟು ಕೊಡುತ್ತಿದ್ದಾರೆ.
'ಯುವ' ಚಿತ್ರದ ಮೂಲಕ ರಾಘಣ್ಣ ಕಿರಿಮಗ ಕಳೆದ ವರ್ಷ ಚಿತ್ರರಂಗ ಪ್ರವೇಶಿಸಿದ್ದರು. ಇದೀಗ 'ಎಕ್ಕ' ಸಿನಿಮಾ ಮಾಡಿ ಮತ್ತೆ ಸಕ್ಸಸ್ ಕಂಡಿದ್ದಾರೆ. ಮುಂದಿನ ವರ್ಷ ಹ್ಯಾಟ್ರಿಕ್ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸುವ ಲೆಕ್ಕಾಚಾರದಲ್ಲಿದ್ದಾರೆ. 'ಎಕ್ಕ' ಸಿನಿಮಾ ಚಿತ್ರೀಕರಣ ಮಾತ್ರವಲ್ಲ ಪ್ರಚಾರಕ್ಕಾಗಿ ಯುವ ಸಾಕಷ್ಟು ಸಮಯ ವ್ಯಯಿಸಿದ್ದರು. ಹಾಗಾಗಿ ಈಗ ರಿಲ್ಯಾಕ್ಸ್ ಮಾಡುತ್ತಿದ್ದಾರೆ.
ದುನಿಯಾ ವಿಜಯ್ ಸೋಲಿನ ಸುಳಿಗೆ ಸಿಲುಕಿದ್ದಾರೆ. ಹಾಗಾಗಿ ಭರ್ಜರಿ ಕಂಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. 'ಎಕ್ಕ' ಚಿತ್ರವನ್ನು ನಿರ್ಮಿಸಿದ್ದ ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸಂಸ್ಥೆಗಳು ಒಟ್ಟಾಗಿ ಯುವ ನಟನೆಯ 3ನೇ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ದುನಿಯಾ ವಿಜಯ್ ಪುತ್ರಿ ರಿತನ್ಯಾ ಈ ಚಿತ್ರದಲ್ಲಿ ಯುವ ರಾಜ್‌ಕುಮಾರ್ ಜೋಡಿಯಾಗಿ ನಟಿಸುತ್ತಿದ್ದಾರೆ.
ಈಗಾಗಲೇ ಯುವ ನಟನೆಯ 3ನೇ ಸಿನಿಮಾ ಸೆಟ್ಟೇರಿದೆ. ಇದೊಂದು ಲವ್ ಸ್ಟೋರಿ ಆಗಿದ್ದು ಬಹಳ ವಿಭಿನ್ನವಾಗಿ ಸೂರಿ ಕಥೆಯನ್ನು ತೆರೆಗೆ ತರುವ ಲೆಕ್ಕಾಚಾರದಲ್ಲಿದ್ದಾರೆ. ಯುವ- ರಿತನ್ಯಾ ಕಾಂಬಿನೇಷನ್ ಕೂಡ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ.


Click it and Unblock the Notifications











