For Quick Alerts
  ALLOW NOTIFICATIONS  
  For Daily Alerts

  'ಗಾಳಿಪಟ' ಹಾರಿಸಿದ್ದಾ ಆಯ್ತು: ‘ಮರ್ಡರ್ ಲೈವ್’ನಲ್ಲಿ ಕನ್ನಡತಿ ಶರ್ಮಿಳಾ ಮಾಂಡ್ರೆ!

  |

  ಶರ್ಮಿಳಾ ಮಾಂಡ್ರೆ ಕೆಲವು ವರ್ಷಗಳಿಂದ ಸೈಲೆಂಟಾಗಿದ್ದರು. ಎಲ್ಲಿಗೆ ಹೋದ್ರು ಅನ್ನುವಾಗಲೇ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಅಭಿನಯದ ಸಿನಿಮಾದಲ್ಲಿ 'ಗಾಳಿಪಟ' ಹಾರಿಸೋಕೆ ಬಂದಿದ್ದು ಗೊತ್ತೇ ಇದೆ.

  ಶರ್ಮಿಳಾ ಮಾಂಡ್ರೆ ಸ್ಯಾಂಡಲ್‌ವುಡ್‌ಗೆ ರೀ-ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, 'ಗಾಳಿಪಟ 2' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿ ಬಿಡ್ತು. ಇದೇ ಜೋಷ್‌ನಲ್ಲಿ ಮತ್ತೊಂದು ಸಿನಿಮಾ ಸದ್ದು ಮಾಡೋಕೆ ಶುರುಮಾಡಿದೆ. ಈ ಬಾರಿ ಒಪ್ಪಿಕೊಂಡಿರೋ ಸಿನಿಮಾ ಇನ್ನೂ ಇಂಟ್ರೆಸ್ಟಿಂಗ್ ಆಗಿದೆ.

  ಶರ್ಮಿಳಾ ಮಾಂಡ್ರೆ ಹಲವು ವರ್ಷಗಳ ಹಿಂದೆ 'ಮಿರತ್ತಲ್' ಎಂಬ ತಮಿಳು ಸಿನಿಮಾಗೆ ಹೀರೊಯಿನ್ ಆಗಿದ್ದರು. ಈಗ 10 ವರ್ಷಗಳ ಬಳಿಕ 'ಮರ್ಡರ್ ಲೈವ್' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಹಾಲಿವುಡ್ ಶೈಲಿಯಲ್ಲಿ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ನಿರ್ಮಾಣಗೊಂಡಿದೆ.

  'ಮರ್ಡರ್ ಲೈವ್' ಒಂದು ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಸಿನಿಮಾ. 'ಬ್ಲೈಂಡ್ ಡೇಟ್', 'ಸ್ಕೈ ಹೈ', 'ಗ್ಲಿಚ್' ಮುಂತಾದ ಹಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿಕೋ ಮಾಸ್ತೋರಾಕಿಸ್ ಕಥೆಯನ್ನು ಆಧರಿಸಿ ಕಥೆ ಹೆಣೆಯಲಾಗಿದೆ. ಸೈಕೋ ಕಿಲ್ಲರ್ ಮತ್ತು ನಾಲ್ವರು ಮಹಿಳೆಯರ ಸುತ್ತ ಸುತ್ತುವ ಈ ಕಥೆ ಸುತ್ತಲಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಮನುಷ್ಯರು ಹೇಗೆ ಸಿಡಿದೆದ್ದು ಹೀರೊಗಳಾಗುತ್ತಾರೆ ಅನ್ನೋದೇ ಕಥೆ.

  ಸೈಕೋ ಕಿಲ್ಲರ್ ಒಬ್ಬ ಜಗತ್ತಿನ ಯಾವುದೇ ಕಂಪ್ಯೂಟರ್ ಹ್ಯಾಕ್ ಮಾಡಿ, ಅದರ ಮೂಲಕ ಲೈವ್ ಆಗಿ ಕೊಲೆ ಮಾಡುವ ಕಥೆ. ಹೀಗಾಗಿ ಈ ಸಿನಿಮಾವನ್ನು ಸಂಪೂರ್ಣವಾಗಿ ಇಂಗ್ಲೆಂಡ್‌ನಲ್ಲಿ ಶೂಟ್ ಮಾಡಲಾಗಿದೆ. ಸೂರ್ಯ ಅಭಿನಯದ 'ಇಟಿ' ಹಾಗೂ ಶಿವಕಾರ್ತಿಕೇಯನ್ ಅಭಿನಯದ 'ಡಾಕ್ಟರ್' ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ವಿನಯ್ ರೈ ಈ ಸಿನಿಮಾದಲ್ಲಿ ನೆಗೆಟಿವ್ ರೋಲ್. ವಿನಯ್ ಹಾಗೂ ಶರ್ಮಿಳಾ ಮಾಂಡ್ರೆ ಜೊತೆ ಹಾಲಿವುಡ್ ನಟಿ ನವೋಮಿ ವಿಲ್ಲೋ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  After Gaalipata 2 Sharmila Mandre Will Be Seen In Kannada Tamil Movie Murder Live

  ಮುರುಗೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ದುಬಾರಿ ವೆಚ್ಚದಲ್ಲಿ 'ಮರ್ಡರ್ ಲೈವ್' ನಿರ್ಮಾಣವಾಗಿದೆ. ಈ ಸಿನಿಮಾವನ್ನು ಅತ್ಯುನ್ನತ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗಿದೆ.

  English summary
  After Gaalipata 2 Sharmila Mandre Will Be Seen In Kannada Tamil Movie Murder Live, Know More.
  Saturday, October 1, 2022, 10:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X