ಮದುವೆಗೆ ಮುನ್ನ ಭಾವಿ ಪತ್ನಿ ಮೇಘನಾಗೆ ಚಿರು ಹೇಳಿದ ಮಾತಿದು
ಸ್ಯಾಂಡಲ್ ವುಡ್ ಅಂಗಳದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಮೇ 2 ರಂದು ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಹಾಗೂ ಸುಂದರ್ ರಾಜ್ ಪುತ್ರಿ ಮೇಘನಾ ರಾಜ್ ಕಲ್ಯಾಣ ನಡೆಯುತ್ತಿದೆ. ಈಗಾಗಲೇ ಮದುವೆಗೆ ಸಖಲ ತಯಾರಿ ನಡೆದಿದ್ದು ಮದುವೆಗೂ ಮುನ್ನ ತನ್ನ ಭಾವಿ ಪತ್ನಿ ಮೇಘನಾ ರಾಜ್ ಅವರ ಬಳಿ ಒಂದು ವಿಚಾರವನ್ನ ಮಾತನಾಡಿದ್ದಾರೆ. ಈ ವಿಷ್ಯ ಮೇಘನಾಗೆ ಮಾತ್ರವಲ್ಲದೆ ಅವರ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.
ಏನಪ್ಪಾ ಅಂತ ವಿಚಾರ ಅಂತೀರಾ, ಮದುವೆ ಆದ ಮೇಲೆ ಸಾಮಾನ್ಯವಾಗಿ ನಾಯಕಿಯರು ಸಿನಿಮಾರಂಗ ಬಿಟ್ಟು ಮನೆ ಮಕ್ಕಳು ಅಂತ ಬ್ಯುಸಿ ಆಗಿ ಬಿಡುತ್ತಾರೆ. ಇನ್ನು ದೊಡ್ಡ ಕುಟುಂಬಕ್ಕೆ ಮದುವೆ ಆದರು ಅಂದ್ರೆ ಮುಗಿತು ಅವರದ್ದೇ ಆದ ಜವಾಬ್ದಾರಿಗಳು ಇರುತ್ತೆ. ಆದರೆ ಚಿರಂಜೀವಿ ಸರ್ಜಾ ಮಾತ್ರ ಈ ವಿಚಾರದಲ್ಲಿ ತುಂಬಾ ಸ್ಪೆಷಲ್.

ಮದುವೆಯ ನಂತರ ನೀನು ಅಭಿನಯಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮದುವೆ ಆದ ಮೇಲೆ ಯಾವುದೇ ರೀತಿಯ ಬದಲಾವಣೆಗಳಿಲ್ಲ. ನಿನ್ನ ವೃತ್ತಿಯನ್ನು ಹೀಗೆ ಮುಂದುವರಿಸು ಎಂದಿದ್ದಾರೆ. ಈ ವಿಚಾರ ಮೇಘನಾ ಫ್ಯಾಮಿಲಿ ಹಾಗೂ ಅಭಿಮಾನಿಗಳಿಗೂ ತುಂಬಾ ಖುಷಿ ತಂದಿದ್ಯಂತೆ.

ಸದ್ಯ ಮದುವೆ ಖುಷಿಯಲ್ಲಿರುವ ಮೇಘನಾ ರಾಜ್ ಮುಂದಿನ ದಿನಗಳಲ್ಲೂ ಅಭಿಮಾನಿಗಳನ್ನ ತನ್ನ ಅಭಿನಯದ ಮೂಲಕ ರಂಜಿಸಲಿದ್ದಾರೆ. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಮಾಲಿವುಡ್, ಕಾಲಿವುಡ್ ನಲ್ಲಿ ಮೇಘನಾ ಎಂದಿನಂತೆ ಆಕ್ಟ್ ಮಾಡಲಿದ್ದಾರೆ.


Click it and Unblock the Notifications











