ಚಂದನ್ ಶೆಟ್ಟಿ ನೋಡಿದ್ರೆ ಹಾಗೇ ಮಾತನಾಡ್ತಾರೆ, ಇವರು ನೋಡಿದರೆ...!
ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಅದು ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದಕ್ಕೆ ನಿವೇದಿತಾ ಗೌಡ ಅವರ ಹೊಸ ರೀಲ್ಸ್ ಸದ್ಯದ ಉದಾಹರಣೆ.
ಹೌದು, ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ನಿವೇದಿತಾ ಸುಮ್ಮನೆ ಇದ್ದರು. ಸಾಮಾಜಿಕ ಜಾಲತಾಣದಿಂದ ಅಂತರವನ್ನ ಕಾಪಾಡಿಕೊಂಡಿದ್ದರು. ಆದರೆ ಈಗ ನಿವೇದಿತಾ ಗೌಡ ಹೊಸದೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಚರ್ಚೆಗೀಡಾಗಿದ್ದಾರೆ.

ನಿವೇದಿತಾ ಗೌಡ ಅವರು ಹಂಚಿಕೊಂಡ ಈ ಹೊಸ ರೀಲ್ಸ್ ಕಂಡು ಅನೇಕರು ಕೆರಳಿದ್ದಾರೆ. ನಿವೇದಿತಾ ಗೌಡ ಅವರ ಕಾಮೆಂಟ್ ಬಾಕ್ಸ್‌ಗೆ ಬಂದು ಡಿವೋರ್ಸ್ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಚಂದನ್ ಶೆಟ್ಟಿ ಜೀವನವನ್ನ ನೀವು ಹಾಳು ಮಾಡಿದ್ದು ಎನ್ನುತ್ತಿದ್ದಾರೆ. ಈ ರೀಲ್ಸ್ ಮಾಡೋ ಹುಚ್ಚು ಬಿಡೋಕೆ ಆಗಲ್ಲ ಅಂತ ಗಂಡನ್ನ ಬಿಟ್ಟಿದ್ದಾಳೆ ಅಷ್ಟೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಖದಲ್ಲಿ ಸ್ವಲ್ಪ ಕೂಡ ಬೇಸರನೇ ಇಲ್ಲ..ಇವಾಗ ರೀಲ್ಸ್ ಮಾಡ್ಬೇಡ ಅನ್ನೋರು ಯಾರು ಇಲ್ಲ ಅಲ್ವಾ..? ಎಂಬ ಪ್ರಶ್ನೆಯನ್ನೂ ಮಾಡಿದ್ದಾರೆ. ಇದೆಲ್ಲ ಯೌವ್ವನ ಇರುವವರೆಗೂ ಅಷ್ಟೇ ಎಂದು ಒಬ್ಬರು ಹೇಳಿದರೆ, ಇನ್ನೂ ಕೆಲವರು ಡಿವೋರ್ಸ್ ವಿಷಯವನ್ನೇ ಕೆದಕುತ್ತಿದ್ದಾರೆ. ಚಂದನ್ ಶೆಟ್ಟಿ ಅವರಿಗಿಂತ ಒಳ್ಳೇಯ ಗಂಡ ಇನ್ನೂ ಎಲ್ಲಿ ಸಿಗ್ತಾರೆ ಎನ್ನುತ್ತಿದ್ದಾರೆ
ಸದ್ಯಕ್ಕೆ ನಿವೇದಿತಾ ಗೌಡ ಅವರ ಈ ವಿಡಿಯೋವನ್ನ ಕೇವಲ 17 ಘಂಟೆಗಳಲ್ಲಿ 58000ಕ್ಕೂ ಅಧಿಕ ಜನ ಮೆಚ್ಚಿಕೊಂಡಿದ್ದಾರೆ. 867ಕ್ಕೂ ಹೆಚ್ಚು ಜನ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ವಿಡಿಯೋ ಶೇರ್ ಮಾಡಿರುವವರ ಸಂಖ್ಯೆ 5000 ಮೇಲಿದೆ.

ಆದರೆ, ಇದ್ಯಾವುದಕ್ಕೂ ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ಪ್ರಾಯಶಃ ತಲೆ ಕೆಡಿಸಿಕೊಳ್ಳುವುದು ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ನಿವೇದಿತಾ ಗೌಡ ಒಂದಾದ ಮೇಲೊಂದು ವಿಡಿಯೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾನೇ ಬಂದಿದ್ದಾರೆ. ಇಷ್ಟೇ ಯಾಕೆ ಡಿವೋರ್ಸ್ ಆದ ಎರಡು ವಾರದಲ್ಲಿಯೇ ಎರಡು ವಿಡಿಯೋಗಳನ್ನ ನಿವೇದಿತಾ ಗೌಡ ಹಂಚಿಕೊಂಡಿದ್ದಾರೆ. ಈ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಅಂದ್ಹಾಗೇ ಚಂದನ್ ಶೆಟ್ಟಿ ಸ್ಪೀಡ್ ಪ್ಲಸ್ ಜೊತೆ ನೀಡಿದ್ದ ಸಂದರ್ಶನದಲ್ಲಿ ಕಿರಿಕ್ ಕೀರ್ತಿ ಅವರ ಜೊತೆ ಮಾತನಾಡುತ್ತಾ, ಹುಡುಗಿಯರ ಪ್ರೈವೇಟ್ ಪಾರ್ಟ್ ಬಗ್ಗೆ ನೇರವಾಗಿಯೇ ಕಮೆಂಟ್ ಮಾಡ್ತಾರೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದರು. ಸಮಾಜ ಎತ್ತ ಸಾಗುತ್ತಿದೆ ಎಂದು ತಮ್ಮ ಬೇಸರವನ್ನೂ ವ್ಯಕ್ತಪಡಿಸಿದ್ದರು. ಆದರೂ ಕೂಡ ನಿವೇದಿತಾ ಗೌಡ ಅವರ ಈ ವಿಡಿಯೋ ಕೆಟ್ಟಾ ಕೊಳಕು ಕಾಮೆಂಟ್‌ಗಳೂ ಬಂದಿರುವುದು ದುರ್ದೈವ. ಹೀಗಾಗಿಯೇ ಅಲ್ಲಿ ಚಂದನ್ ಶೆಟ್ಟಿ ನೋಡಿದ್ರೆ ಅಸಹ್ಯ, ಅಸಭ್ಯ, ಅಶ್ಲೀಲ ಕಮೆಂಟ್‌ಗಳನ್ನ ಮಾಡೋರಿಗೆ ಛೀಮಾರಿ ಹಾಕ್ತಾರೆ, ಇಲ್ಲಿ ನೋಡಿದ್ರೆ ನಿವೇದಿತಾ ಗೌಡ ಈ ತರಹದ ವಿಡಿಯೋ ಹಾಕ್ತಾರೆ ಎಂಬ ಅಭಿಪ್ರಾಯವನ್ನೂ ಸದ್ಯಕ್ಕೆ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











