33 ವಾರಗಳ ನಂತರ ಅಭಿಮಾನಿಗಳಿಗೆ ಸಂದೇಶ ನೀಡಿದ ದಾಸ, ಅಬ್ಬಾ ದೇವರು ಕೊನೆಗೂ ಮಾತನಾಡಿದ್ರಲ್ಲ ಎಂದ ಫ್ಯಾನ್ಸ್..!

ದರ್ಶನ್ ಅವರಂತಹ ನಂಬರ್ 1 ಹೀರೋ ಸುಮ್ಮನೆ ಕೂತರೆ ಅವರಿಗೆ ಮಾತ್ರ ಅಲ್ಲ ಇಡೀ ಚಿತ್ರರಂಗಕ್ಕೆ ನಷ್ಟ ಗ್ಯಾರೆಂಟಿ. ಯಾಕೆಂದರೆ ವರ್ಷಕ್ಕೆ ಎರಡು ಚಿತ್ರಗಳನ್ನು ಕಡ್ಡಾಯವಾಗಿ ಮಾಡುತ್ತಾ ಬಂದವರು ದರ್ಶನ್. ಆದರೆ ಕಳೆದ ವರ್ಷ ದುರಾದೃಷ್ಟ ಬೆನ್ನು ಹತ್ತಿತ್ತು. ಅ'ಪವಿತ್ರ' ಸಂಬಂಧ ಸೆರೆವಾಸ ಅನುಭವಿಸುವಂತೆ ಮಾಡಿತ್ತು.

ಇಂಥಾ ದರ್ಶನ್ ಸದ್ಯ ಜೈಲಿಂದ ಹೊರ ಬಂದಿದ್ದಾರೆ. ಪತ್ನಿಯ ಜೊತೆ ನೆಮ್ಮದಿಯಿಂದ ತಮ್ಮ ಫಾರ್ಮ್‌ಹೌಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಕಳೆದ ವರ್ಷದ ಕಹಿಯನ್ನೆಲ್ಲ ಮರೆತು ಮೈಕೊಡವಿ ಎದ್ದು ನಿಲ್ಲಲು ಸಿದ್ಧರಾಗಿದ್ಧಾರೆ. ಸಂಕ್ರಾಂತಿ ಹಬ್ಬದಂದೇ ತಮ್ಮ ಅಭಿಮಾನಿಗಳಿಗೆ ಈ ಕುರಿತು ಸೂಚನೆಯನ್ನು ನೀಡಿದ್ದಾರೆ. ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

after-his-release-in-the-renukaswamy-case-darshan-wished-fans-a-happy-sankranti-in-his-first-post

ಹೌದು, ಅಸಲಿಗೆ ಪ್ರತಿ ವರ್ಷ ಸಂಕ್ರಮಣ ದರ್ಶನ್ ಪಾಲಿಗೆ ತುಂಬಾನೇ ವಿಶೇಷ. ಜಗತ್ತಿನ ಯಾವ ಮೂಲೆಯಲ್ಲಿದ್ದರು ಕೂಡ ಈ ದಿನದಂದು ದರ್ಶನ್ ತಮ್ಮ ಫಾರ್ಮ್‌ಹೌಸಿಗೆ ಓಡೋಡಿ ಬರುತ್ತಾರೆ. ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಆಪ್ತರ ಜೊತೆ ಸಂಭ್ರಮ ಪಡುತ್ತಾರೆ. ಇನ್ನು ಹಬ್ಬದಂದು ತಮ್ಮ ಫಾರ್ಮ್‌ಹೌಸ್‌ನಲ್ಲಿರುವ ಹಸು, ಎತ್ತು, ಕುದುರೆ, ಮೇಕೆಗಳಿಗೆ ಸಿಂಗಾರ ಮಾಡುತ್ತಾರೆ. ಪೂಜೆಯನ್ನು ಮಾಡುತ್ತಾರೆ. ತಮ್ಮ ಕೈಯಾರೆ ಪ್ರಾಣಿಗಳಿಗೆ ಆಹಾರವನ್ನು ನೀಡಿ ಕಿಚ್ಚು ಹಾಯಿಸುತ್ತಾರೆ. ಸಂಭ್ರಮ ಪಡುತ್ತಾರೆ.

ಆದರೆ, ಈ ವರ್ಷ.. ದರ್ಶನ್ ಅವರಿಂದ ಕಿಚ್ಚು ಹಾಯಿಸಲು ಸಾಧ್ಯ ಇಲ್ಲ. ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಅವರಿಗೆ ಬೆನ್ನು ನೋವು ಇದೆ. ನಡೆಯಲಾಗದ ಪರಿಸ್ಥಿತಿ ಇದೆ. ಹೀಗಾಗಿಯೇ ತಮ್ಮ ನೆಚ್ಚಿನ ಕುದುರೆಯ ಜೊತೆ ಇರುವ ಫೋಟೊವೊಂದನ್ನು ಮಾತ್ರ ಹಂಚಿಕೊಂಡಿರುವ ದರ್ಶನ್ 08 ತಿಂಗಳ ನಂತರ ಮೌನ ಮುರಿದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಸಂಕ್ರಾಂತಿಯ ಶುಭಾಶಯಗಳನ್ನು ಕೋರಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ದರ್ಶನ್ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.

ಸಹಜವಾಗಿ ದರ್ಶನ್ ಅವರ ಈ ಸಂದೇಶವನ್ನು ಓದಿ ದರ್ಶನ್ ಅವರ ಬಳಗದ ಹಬ್ಬದ ಸಂಭ್ರಮ ಹೆಚ್ಚಾಗಿದೆ. ಹೀಗಾಗಿ ತಮಗಾದ ಖುಷಿಯನ್ನು ಕಾಮೆಂಟ್ ಮಾಡುವ ವ್ಯಕ್ತಪಡಿಸುತ್ತಿರುವ ಅನೇಕರು ಹೊಸ ಅಧ್ಯಾಯ ಶುರು ಆಗಿದೆ, ಕುಗ್ಗದೆ ಮುನ್ನುಗಿ ಬಾಸ್ ಎಂದಿದ್ದಾರೆ. ನಿಮ್ಮ ಜೊತೆ ನಾವು ಸದಾ ಇರ್ತಿವಿ ಎಂದು ಹೇಳಿದ್ದಾರೆ. ಪರಿಸ್ಥಿತಿ ಹೇಗೆ ಇರಲಿ ನಾವು ಯಾವತ್ತು ನಿಮ್ಮನ್ನು ಪ್ರೀತಿಸುತ್ತೇವೆ ಎನ್ನುವ ಮೂಲಕ ತಮ್ಮ ಅಭಿಮಾನದ ಪ್ರದರ್ಶನ ಮಾಡುತ್ತಿದ್ಧಾರೆ. ಇದೊಂದು ದಿನಕ್ಕೆ ಎಷ್ಟು ದಿನದಿಂದ ನಾವೆಲ್ಲ ಕಾಯ್ತಾ ಇದ್ವಿ ಗೊತ್ತಾ ಬಾಸ್ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ದರ್ಶನ್ ಅವರಿಗೆ ಕೂಡ ಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ.

ಅಂದ್ಹಾಗೇ ಇಂದು ಬೆಳಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಫಾರ್ಮ್‌ ಹೌಸ್‌ದಿಂದ ಫೋಟೊವೊಂದನ್ನು ಹಂಚಿಕೊಂಡಿದ್ದರು. ಪತಿ ದರ್ಶನ್‌ ಜೊತೆಗೆ ಸಾಕುಪ್ರಾಣಿಗಳನ್ನು ನೋಡುತ್ತಿರುವ ಹಿಂಬದಿಯ ಫೋಟೋವನ್ನು ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಕೈಯಲ್ಲಿ ಒಂದು ನಾಯಿಮರಿಕಯನ್ನು ಹಿಡಿದು ಸಂತೋಷದಿಂದ ಪತಿಯ ಜೊತೆ ಕಾಲ ಕಳೆಯುವ ಫೋಟೊ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದರು. ಆ ಸಂಭ್ರಮವನ್ನು ದರ್ಶನ್ ಈಗ ಹಬ್ಬದ ಶುಭಾಶಯ ಹೇಳುವ ಮೂಲಕ ಇನ್ನು ಹೆಚ್ಚಿಸಿದ್ಧಾರೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X