'ಜಾಕಿ' ರೀ-ರಿಲೀಸ್ ದಾಖಲೆ; ಪುನೀತ್ ನಟನೆಯ ಆ ಸಿನಿಮಾ ಮತ್ತೆ ತೆರೆಗೆ ತರುವುದಾಗಿ KRG ಘೋಷಣೆ

ಥಿಯೇಟರ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮಾಚರಣೆ ಆರಂಭವಾಗಿದೆ. 'ಜಾಕಿ' ಸಿನಿಮಾ ರೀ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಥಿಯೇಟರ್‌ಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಮೊದಲ ದಿನ ಹಲವು ಶೋಗಳು ಹೌಸ್‌ಫುಲ್ ಆಗಿತ್ತು.

14 ವರ್ಷಗಳ ಹಿಂದೆ ತೆರೆಕಂಡು ಹಿಟ್ ಆಗಿದ್ದ 'ಜಾಕಿ' ಚಿತ್ರವನ್ನು ಈ ವಾರ ರೀ ರಿಲೀಸ್ ಮಾಡಲಾಗಿದೆ. ದೊಡ್ಮನೆ ಜೊತೆ ಸೇರಿ ಕೆಆರ್‌ಜಿ ಸ್ಟುಡಿಯೋ ಈ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ತೆರೆಗೆ ತಂದಿದೆ. ಹೊಸ ಆಡಿಯೋದಲ್ಲಿ ಸಿನಿಮಾ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತಿದೆ. ಅಭಿಮಾನಿಗಳು ಮತ್ತೆ ಕಟೌಟ್‌ ನಿಲ್ಲಿಸಿ, ಹಾರ ಹಾಕಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಿಡುಗಡೆಯಾದ ಚಿತ್ರಕ್ಕೆ ಸಿಗುವಂತಹ ರೆಸ್ಪಾನ್ಸ್ 'ಜಾಕಿ' ಮರುಬಿಡುಗಡೆಗೆ ಸಿಕ್ಕಿದೆ.\

After Jackie Puneeth Rajkumar s this movie to re-release on next birthday

'ಜಾಕಿ' ಚಿತ್ರಕ್ಕೆ ಸದ್ಯ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಖುಷಿಯಾಗಿದೆ. ಮುಂದಿನ ವರ್ಷ ಪುನೀತ್ ರಾಜ್‌ಕುಮಾರ್ ನಟನೆಯ ಮತ್ತೊಂದು ಸೂಪರ್ ಹಿಟ್ ಸಿನಿಮಾ ತೆರೆಗೆ ತರುವುದಾಗಿ ಘೋಷಿಸಿದೆ. 175 ಸ್ಕ್ರೀನ್‌ಗಳಲ್ಲಿ 'ಜಾಕಿ' ಸಿನಿಮಾ ರೀ ರಿಲೀಸ್ ಆಗಿದೆ. ಈ ಹಿಂದೆ ಯಾವುದೇ ಸಿನಿಮಾ ಇಷ್ಟು ದೊಡ್ಟಮಟ್ಟದಲ್ಲಿ ಬಿಡುಗಡೆ ಆಗಿರಲಿಲ್ಲ.

ಪಿಆರ್‌ಕೆ ಜೊತೆ ಸೇರಿ ಕೆಆರ್‌ಜಿ ಸಂಸ್ಥೆ ಈ ವರ್ಷ ಪುನೀತ್ ರಾಜ್‌ಕುಮಾರ್ ಹುಟ್ಟುಹಬಕ್ಕೆ 'ಜಾಕಿ' ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ಮಾಡಿದೆ. ಅದಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ 100 ಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡು ದಾಖಲೆ ಬರೆದಿದೆ. ಈ ವರ್ಷ ಹಲವು ಸಿನಿಮಾಗಳು ತೆರೆಕಂಡಿವೆ. ಆದರೆ ಮೊದಲ ದಿನವೇ 1 ಕೋಟಿ ರೂ. ಗಳಿಕೆ ಯಾವುದೇ ಸಿನಿಮಾ ಕಂಡಿಲ್ಲ.

'ಜಾಕಿ' ಸಿನಿಮಾ ಮೊದಲ ದಿನವೇ 1 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ಎರಡನೇ ದಿನವೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಕೆಲವೆಡೆ ಶೋಗಳು ಹೌಸ್‌ಫುಲ್ ಆಗುತ್ತಿದೆ. ಇನ್ನು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನವಾದ ನಾಳೆ(ಮಾರ್ಚ್ 17) ಮತ್ತಷ್ಟು ಉತ್ತಮ ಗಳಿಕೆ ನಿರೀಕ್ಷಿಸಲಾಗುತ್ತಿದೆ. 'ಜಾಕಿ' ರೀ ರಿಲೀಸ್‌ಗೆ ಸಿಕ್ಕ ರೆಸ್ಪಾನ್ಸ್ ನೋಡಿ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಖುಷಿಯಾಗಿದೆ.

ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ 'ಜಾಕಿ' ದಾಖಲೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಇದು ಮಾಸ್ ಮತ್ತು ಎಂಗೇಜಿಂಗ್ ಎನ್ನುವ ಕಾರಣಕ್ಕೆ ನಾವು ಈ ವರ್ಷ 'ಜಾಕಿ' ಚಿತ್ರವನ್ನು ರೀ ರಿಲೀಸ್ ಮಾಡಲು ಆಯ್ಕೆ ಮಾಡಿಕೊಂಡಿದ್ದೇವೆ. ಇದು ಅಪ್ಪುವಿನ ಸಂಭ್ರಮಾಚರಣೆಯಾಗಿದೆ. ಹೀಗಾಗಿಯೇ ನಾವು ಪ್ರತಿ ವರ್ಷ ಅವರ ಹುಟ್ಟುಹಬ್ಬದ ಸಮಯದಲ್ಲಿ ಒಂದು ಚಿತ್ರವನ್ನು ಅರ್ಪಿಸಲು ಬಯಸುತ್ತೇವೆ" ಎಂದಿದ್ದಾರೆ.

ಮುಂದಿನ ವರ್ಷ ಮಾರ್ಚ್ 17 ರಂದು ಅಪ್ಪುಗೆ 50 ವರ್ಷ ತುಂಬಲಿದೆ, ಈ ವಿಶೇಷ ಸಂದರ್ಭದಲ್ಲಿ ಕೆಆರ್‌ಜಿ ಸ್ಟುಡಿಯೋಸ್ ಮತ್ತು ಪಿಆರ್‌ಕೆ ಜಂಟಿಯಾಗಿ ಪುನೀತ್ ನಾಯಕರಾಗಿ ನಟಿಸಿದ ಚೊಚ್ಚಲ 'ಅಪ್ಪು' ರೀ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. 'ಅಪ್ಪು' ಚಿತ್ರದ ಕಲರ್‌ ಗ್ರೇಡಿಂಗ್ ಹಾಗೂ ರೀಸ್ಟ್ರೋರೇಷನ್ ಕೆಲಸಗಳು ಮುಂದಿನ ತಿಂಗಳು ಆರಂಭವಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

After Jackie Puneeth Rajkumar s this movie to re-release on next birthday

ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ 'ಅಪ್ಪು' ಸಿನಿಮಾ 2002ರಲ್ಲಿ ತೆರೆಕಂಡಿತ್ತು. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ರಕ್ಷಿತಾ ನಟಿಸಿದ್ದರು. ಗುರುಕಿರಣ್ ಸಂಗೀತದ ಎಲ್ಲಾ ಹಾಡುಗಳು ಹಿಟ್ ಆಗಿ ಚಿತ್ರಕ್ಕೆ ಆನೆಬಲ ತುಂಬಿತ್ತು. ಇನ್ನು ಚೊಚ್ಚಲ ಚಿತ್ರದಲ್ಲಿ ಅಪ್ಪು ಡ್ಯಾನ್ಸ್, ಫೈಟ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಪೂರ್ಣಿಮಾ ಎಂಟರ್‌ಟ್ರೈಸಸ್ ಬ್ಯಾನರ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಈ ಸಿನಿಮಾ ನಿರ್ಮಿಸಿದ್ದರು.

More from Filmibeat

English summary
KRG studios planning re-release Puneeth Rajkumar's hit film on his 50th birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X