For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2' ಬಳಿಕ ಹೊಸ ಸಾಹಸಕ್ಕೆ ಕೈಹಾಕಿದ ರಾಕಿಂಗ್ ಸ್ಟಾರ್ ಯಶ್

  By ಫಿಲ್ಮ್ ಡೆಸ್ಕ್
  |

  ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್-2 ಟೀಸರ್ ಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯ ಖುಷಿಯಲ್ಲಿದ್ದಾರೆ. ರಾಕಿ ಭಾಯ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಸಿಕ್ಕಿದೆ.

  ಇದೀಗ ಎಲ್ಲಾ ಕಡೆ ಕೆಜಿಎಫ್-2 ಸಿನಿಮಾದ ಟೀಸರ್ ದೆ ಹವಾ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಟೀಸರ್ ಕನ್ನಡಿಗರಿಂದ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೀಸರ್ ಮೂಲಕ ಹವಾ ಎಬ್ಬಿಸಿರುವ ಕೆಜಿಎಫ್-2 ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಯಶ್ ಕಡೆಯಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ.

  ಕೆಜಿಎಫ್ 2 ಟೀಸರ್ ಸಕ್ಸಸ್ ಹಿಂದಿದೆ ಮಾಸ್ಟರ್ ಪ್ಲಾನ್, ಆ ಕಾರಣದಿಂದಲೇ ಈ ದಾಖಲೆ ಆಗಿದ್ದು!

  ಕೆಜಿಎಫ್-2 ಬಳಿಕ ನಿರ್ಮಾಣ ಕ್ಷೇತ್ರಕ್ಕೆ ಯಶ್ ಎಂಟ್ರಿ

  ಕೆಜಿಎಫ್-2 ಬಳಿಕ ನಿರ್ಮಾಣ ಕ್ಷೇತ್ರಕ್ಕೆ ಯಶ್ ಎಂಟ್ರಿ

  ಕೆಜಿಎಫ್-2 ಸಿನಿಮಾ ಬಳಿಕ ಯಶ್ ನಿರ್ಮಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ಸದ್ದು ಮಾಡುತ್ತಿದೆ. ಕೆಜಿಎಫ್-2 ಬಳಿಕ ಯಶ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ, ಯಾವ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಚರ್ಚೆಯ ನಡುವೆ ನಿರ್ಮಾಪರಾಗುತ್ತಾರೆ ಎನ್ನುವುದು ಅಚ್ಚರಿ ಮೂಡಿಸಿದೆ.

  ಯಶ್ ನಿರ್ಮಾಣದಲ್ಲಿ ಮೂಡಿಬರಲಿದೆ ಮುಂದಿನ ಸಿನಿಮಾ

  ಯಶ್ ನಿರ್ಮಾಣದಲ್ಲಿ ಮೂಡಿಬರಲಿದೆ ಮುಂದಿನ ಸಿನಿಮಾ

  ವಿಶೇಷ ಎಂದರೆ ಯಶ್ ಅವರೆ ನಟಿಸುವ ಮುಂದಿನ ಸಿನಿಮಾಗೆ ಅವರೇ ಬಂಡವಾಳ ಹೂಡಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ಸಿನಿಮಾಗೆ ಯಶ್ ಅವರೇ ಬಂಡವಾಳ ಹೂಡುವಂತೆ ಆಪ್ತ ವಲಯದವರು ಹೇಳುತ್ತಿದ್ದಾರಂತೆ. ಹಾಗಾಗಿ ಮುಂದಿನ ಸಿನಿಮಾವನ್ನು ತನ್ನ ಬ್ಯಾನರ್ ನಲ್ಲೇ ನಿರ್ಮಾಣ ಮಾಡುವ ಯೋಜನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

  ಕೆಜಿಎಫ್ ಆದ್ಮೇಲೆ ಯಶ್ ಮುಂದಿನ ಸಿನಿಮಾ ಯಾವುದು? ಡೈರೆಕ್ಟರ್ ಅವರೇನಾ?

  ಯಶ್ ಮುಂದಿನ ಸಿನಿಮಾ ಯಾವುದು?

  ಯಶ್ ಮುಂದಿನ ಸಿನಿಮಾ ಯಾವುದು?

  ಇನ್ನು ಯಶ್ ಮುಂದಿನ ಸಿನಿಮಾಗೆ ಮಫ್ತಿ ನಿರ್ದೇಶಕ ನರ್ತನ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಈಗಾಗಲೇ ಮಾತುಕತೆ ನಡೆದಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿಯಿದೆ. ಇನ್ನು ಯಶ್ ಬಳಿ ರಾಣಾ ಮತ್ತು ಕಿರಾತಕ-2 ಸಿನಿಮಾಗಳು ಸಹ ಇವೆ. ಹಾಗಾಗಿ ಕೆಜಿಎಫ್-2 ಬಳಿಕ ಯಶ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಕೆಜಿಎಫ್-2 ಎಲ್ಲಿಯವರೆಗೆ ಬಂದಿದೆ

  ಕೆಜಿಎಫ್-2 ಎಲ್ಲಿಯವರೆಗೆ ಬಂದಿದೆ

  ಕೆಜಿಎಫ್-2 ಕೊನೆಯ ಹಂತದ ಚಿತ್ರೀಕರಣದಲ್ಲಿ ಯಶ್ ನಿರತರಾಗಿದ್ದಾರೆ. ಈಗಾಗಲೇ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸಂಜಯ್ ಮತ್ತು ಯಶ್ ನಡುವಿನ ಕ್ಲೈಮ್ಯಾಕ್ಸ್ ದೃಶ್ಯ ಈಗಾಗಲೇ ಸೆರೆಹಿಡಿಯಲಾಗಿದೆ. ಸಂಜಯ್ ದತ್ ಭಾಗದ ಚಿತ್ರೀಕರಣ ಮುಗಿದು ಅನೇಕ ದಿನಗಳಾಗಿದೆ. ಸದ್ಯದಲ್ಲೇ ಕೆಜಿಎಫ್-2 ಚಿತ್ರೀಕರಣ ಮುಗಿಸಿ ಸಿನಿಮಾತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಲಿದೆ.

  English summary
  After KGF-2 Rocking star Yash to make his debut as a producer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X