'KGF 2' ಸಾವಿರ ಕೋಟಿ, 'ವಿಕ್ರಾಂತ್ ರೋಣ'ನತ್ತ ಎಲ್ಲರ ಚಿತ್ತ!

ಕನ್ನಡದ 'ಕೆಜಿಎಫ್ 2' ಚಿತ್ರದ ಬಗ್ಗೆ ಕರುನಾಡಿನಲ್ಲಿ ಮಾತ್ರ ಅಲ್ಲ, ಎಲ್ಲೆಲ್ಲೂ ಇದೇ ಚಿತ್ರದ ಬಗ್ಗೆ ಮಾತುಕತೆ. ಚಿತ್ರ ರಿಲೀಸ್ ಆಗಿ ತಿಂಗಳುಗಳು ಕಳೆಯುತ್ತಾ ಬಂತು. ಆದರೆ ಚಿತ್ರದ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಬಾಲಿವುಡ್ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರದ ಬಗ್ಗೆ, ಗಳಿಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ.

'ಕೆಜಿಎಫ್' ಮುಗೀತು, ಚಿತ್ರ ರಿಲೀಸ್ ಆಗಿ ಅಬ್ಬರಿಸಿದ್ದು ಆಗಿದೆ. ಹಾಗಾಗಿ ಈಗ ಎಲ್ಲರ ಚಿತ್ತ ಕನ್ನಡದ ಮುಂದಿನ ಪ್ಯಾನ್ ಇಂಡಿಯಾ ಚಿತ್ರದ ಮೇಲೆ ಇದೆ. ಬಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲರೂ ಕನ್ನಡದ ಮುಂದಿನ ಚಿತ್ರದ ಬಗ್ಗೆ ಮಾತನಾಡುವಂತೆ ಆಗಿದೆ.

ಸದ್ಯ ರಿಲೀಸ್ ರೆಡಿ ಇರುವ ಮುಂದಿನ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ ಅಂದರೆ ಅದು ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ'. ಈ ಸಿನಿಮಾ ಕೂಡ ಕನ್ನಡದ ಬಹುದೊಡ್ಡ ಸಿನಿಮಾ. ಇದು ಕೂಡ ವರ್ಲ್ಡ್ ಕ್ಲಾಸ್ ಸಿನಿಮಾ ಆಗುವ ಸೂಚನೆ ಸಿಕ್ಕಿದೆ. ಹಾಗಾಗಿ ಈ ಚಿತ್ರದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

'ಕೆಜಿಎಫ್‌'ಗಿಂತಲೂ 'ವಿಕ್ರಾಂತ್ ರೋಣ' ಮುಂದೆ!

'ಕೆಜಿಎಫ್‌'ಗಿಂತಲೂ 'ವಿಕ್ರಾಂತ್ ರೋಣ' ಮುಂದೆ!

'ವಿಕ್ರಾಂತ್ ರೋಣ' ಚಿತ್ರ ಸಾಕಷ್ಟು ನಿರೀಕ್ಷೆಯ ಜೊತೆಗೆ ರಿಲೀಸ್‌ಗೆ ರೆಡಿಯಾಗಿದೆ. 'ಕೆಜಿಎಫ್ 2' ಮಾದರಿಯಲ್ಲೇ ತೆರೆಗೆ ಅಪ್ಪಳಿಸಲಿದೆ ಎಂದರೆ ತಪ್ಪಾಗಲಾರದು. ಒಂದು ಹೆಜ್ಜೆ ಮುಂದೆ ಹೋದ 'ವಿಕ್ರಾಂತ್ ರೋಣ' 7 ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಇದು ಕೂಡ ಚಿತ್ರದ ಮತ್ತೊಂದು ಹೊಸ ಪ್ರಯತ್ನ.

'ವಿಕ್ರಾಂತ್ ರೋಣ' ಫಸ್ಟ್ ಡೇ ಕಲೆಕ್ಷನ್ ಮೇಲೆ ಕಣ್ಣು

'ವಿಕ್ರಾಂತ್ ರೋಣ' ಫಸ್ಟ್ ಡೇ ಕಲೆಕ್ಷನ್ ಮೇಲೆ ಕಣ್ಣು

ಭಾರತದಾತ್ಯಂತ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ರಿಲೀಸ್ ಆಗಿದೆ. ಹಾಗಾಗಿ ಓಪನಿಂಗ್ ದಿನವೇ ದೊಡ್ಡ ಮಟ್ಟದ ದಾಖಲೆ ಮಾಡುವಲ್ಲಿ ಈ ಚಿತ್ರಕ್ಕೆ ಸಾಧ್ಯವಾಗಿದೆ. 'ವಿಕ್ರಾಂತ್ ರೋಣ'ನ ಎದುರು ಈ ಸವಾಲು ಇದೆ. ಚಿತ್ರ ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತದೆ ಮತ್ತು ಮೊದಲ ದಿನ ಹೇಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿದೆ ಎನ್ನುವುದು ಮುಖ್ಯವಾಗುತ್ತದೆ.

ಸಾವಿರ ಕೋಟಿ ಗಡಿ ಮುಟ್ಟಿದ 'KGF 2'!

ಸಾವಿರ ಕೋಟಿ ಗಡಿ ಮುಟ್ಟಿದ 'KGF 2'!

'ವಿಕ್ರಾಂತ್ ರೋಣ' ಚಿತ್ರ ಸದ್ಯ ಭರವಸೆಯನ್ನು ಮೂಡಿಸಿದೆ ನಿಜ. ಈ ಚಿತ್ರವನ್ನು ಥಿಯೇಟರ್‌ನಲ್ಲಿ ಜನ ಒಪ್ಪಿಕೊಳ್ಳುವುದು ಕೂಡ ಮುಖ್ಯ. ಆದರೆ ನಿರ್ದೇಶಕ ಅನೂಪ್ ಭಂಡಾರಿ ಮೇಲೆ ನಿರೀಕ್ಷೆ ಇದೆ. ಹಾಗಾಗಿ ಈ ಚಿತ್ರ ಗಲ್ಲಾಪಟ್ಟಿಗೆಯಲ್ಲಿ ಸದ್ದು ಮಾಡಲಿದೆ ಎನ್ನುವ ಭರವಸೆ ಇದೆ. ಕನ್ನಡದ ಪ್ಯಾನ್ ಇಂಡಿಯಾ ಚಿತ್ರ 'ಕೆಜಿಎಫ್ 2' ಸಾವಿರ ಕೋಟಿ ಗಡಿ ಮುಟ್ಟಿದೆ. ಹಾಗಾಗಿ ಈಗ ಎಲ್ಲರ ಚಿತ್ತ 'ವಿಕ್ರಾಂತ್ ರೋಣ' ಚಿತ್ರದತ್ತ ನೆಟ್ಟಿದೆ. ಇದರೊಂದಿಗೆ ಈ ಚಿತ್ರದ ಕಲೆಕ್ಷನ್ ಎಷ್ಟಾಗಬಹುದು ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.

ಬಾಲಿವುಡ್‌ನಲ್ಲಿ ಹೇಗಿರುತ್ತೆ 'ವಿಕ್ರಾಂತ್ ರೋಣ' ಹವಾ?

ಬಾಲಿವುಡ್‌ನಲ್ಲಿ ಹೇಗಿರುತ್ತೆ 'ವಿಕ್ರಾಂತ್ ರೋಣ' ಹವಾ?

ಇನ್ನು ಬಾಲಿವುಡ್‌ನಲ್ಲಿ 'ಕೆಜಿಎಫ್' ಮಾತ್ರವಲ್ಲ ಸೌತ್‌ನ ಬಹುತೇಕ ಚಿತ್ರಗಳು ಅಬ್ಬರಿಸುತ್ತಿವೆ. 'ವಿಕ್ರಾಂತ್ ರೋಣ' ಕೂಡ ಇದೆ ಪ್ಯಾನ್ ಇಂಡಿಯಾ ಸಾಲಿನಲ್ಲಿ ಇದೆ. ಹಾಗಾಗಿ ಈ ಚಿತ್ರದ ಬಾಲಿವುಡ್ ಗಳಿಕೆಯ ಬಗ್ಗೆಯೂ ನಿರೀಕ್ಷೆ ಇದೆ. ಈ ಹಿಂದೆ ಸೌತ್ ಚಿತ್ರಗಳು ಮಾಡಿದ ದಾಖಲೆಗಳನ್ನು ಮುರಿಯಬೇಕು ಎಂದಲ್ಲ. ಆದರೆ 'ವಿಕ್ರಾಂತ್ ರೋಣ' ಮಾತ್ರ ತನ್ನ ವಿಭಿನ್ನ ದಾಟಿಯಲ್ಲಿ, 3D ಅವತಾರದಲ್ಲಿ ಸದ್ದು ಮಾಡಲು ಜುಲೈ 28ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ.

More from Filmibeat

English summary
After Kgf 2 Sudeep Starrer Vikrant Rona Movie Got Many Challenges, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X