ರಾಕಿ ಭಾಯ್ ಜೊತೆ ಆ ತೆಲುಗು ಡೈರೆಕ್ಟರ್ ಸಿನಿಮಾ ಮಾಡೋದು ಪಕ್ಕಾ.!

Recommended Video

ಯಶ್ ಮುಂದಿನ ಸಿನಿಮಾಗೆ ನಿರ್ದೇಶಕ ಯಾರು ಗೊತ್ತಾ..? | Yash | FILMIBEAT KANNADA

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್-2 ನಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಚಿತ್ರದ ನಂತರ ರಾಕಿ ಭಾಯ್ ಹವಾ ಮತ್ತಷ್ಟು ಹೆಚ್ಚಾಗಿ. ಕರ್ನಾಟಕದಲ್ಲಿ ಮಾತ್ರ ಧೂಳ್ ಎಬ್ಬಿಸುತ್ತಿದ್ದ ರಾಕಿ ಕೆಜಿಎಫ್ ನಂತರ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.

ಯಶ್ ಒಂದು ಸಿನಿಮಾ ಮಾಡಬೇಕು ಅಂದ್ರೀಗ ಕನ್ನಡ ನಿರ್ದೇಶಕರು ಮಾತ್ರವಲ್ಲ, ಬೇರೆ ಬೇರೆ ಭಾಷೆಯ ಡೈರೆಕ್ಟರ್ಸ್ ಆಕ್ಷನ್ ಕಟ್ ಹೇಳಲು ಮುಂದೆ ಬರುತ್ತಿದ್ದಾರೆ. ಕೆಜಿಎಫ್ ಚಿತ್ರದ ನಂತರ ಯಶ್ ಸಿನಿಮಾ ಯಾವುದು ಎನ್ನುವುದು ಅಭಿಮಾನಿಗಳಲ್ಲಿ ಕಾಡುತ್ತಿದೆ.

ಯಶ್ ಮುಂದಿನ ಸಿನಿಮಾಗೆ ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಾರೆ ಎಂದು ಹೇಳಲಾಗುತ್ತಿತು. ಆದ್ರೆ ಪೂರಿ ಜಗನ್ನಾಥ್ ವಿಜಯ್ ದೇವರಕೊಂಡ ಜೊತೆ ಸಿನಿಮಾ ಅನೌನ್ಸ್ ಮಾಡಿದ ನಂತರ ರಾಕಿಂಗ್ ಸ್ಟಾರ್ ಚಿತ್ರದಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಮೂಲಗಳ ಪ್ರಕಾರ ಪೂರಿ ಜಗನ್ನಾಥ್ ಯಶ್ ಗೆ ಆಕ್ಷನ್ ಕಟ್ ಹೇಳುವುದು ಪಕ್ಕಾ ಎನ್ನುತ್ತಿದ್ದಾರೆ.

ಯಶ್-ಪೂರಿ ಜಗನ್ನಾಥ್ ಸಿನಿಮಾ ಫಿಕ್ಸ್

ಯಶ್-ಪೂರಿ ಜಗನ್ನಾಥ್ ಸಿನಿಮಾ ಫಿಕ್ಸ್

ಯಶ್ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ 'ಜನಗಣಮನ' ಸಿನಿಮಾ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಪೂರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಸಿನಿಮಾ ಅನೌನ್ಸ್ ಆದ ನಂತರ ಈ ಚರ್ಚೆ ಅಲ್ಲಿಗೆ ನಿಂತು ಹೋಗಿತ್ತು. ಆದ್ರೀಗ ಮೂಲಗಳ ಪ್ರಕಾರ ಪೂರಿ ಮತ್ತು ಯಶ್ ಕಾಂಬಿನೇಷನ್ ನ ಸಿನಿಮಾ ಬರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಈಗಾಗಲೆ ಯಶ್ ಮತ್ತು ಪೂರಿ ಜಗನ್ನಾಥ್ ನಡುವೆ ಎರಡು ಸುತ್ತಿನ ಮಾತುಕತೆ ನಡೆದಿದೆಯಂತೆ. ಕಥೆ ಕೇಳಿ ರಾಕಿಂಗ್ ಸ್ಟಾರ್ ಇಷ್ಟಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ರಾಕಿ ಆಗಲಿ ಪೂರಿ ಆಗಲಿ ತುಟಿಬಿಚ್ಚುತ್ತಿಲ್ಲ.

ವಿಜಯ್ ದೇವರಕೊಂಡ ಜೊತೆ ಬೇರೆ ಸಿನಿಮಾ

ವಿಜಯ್ ದೇವರಕೊಂಡ ಜೊತೆ ಬೇರೆ ಸಿನಿಮಾ

ಪೂರಿ ಜಗನ್ನಾಥ್ ನಟ ವಿಜಯ್ ದೇವರಕೊಂಡ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ ನಂತರ ಯಶ್ 'ಜನ ಗಣ ಮನ' ಸಿನಿಮಾದಿಂದ ಯಶ್ ಹೊರಬಂದಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ವಿಜಯ್ ದೇವರಕೊಂಡಗೆ ನಿರ್ದೇಶನ ಮಾಡುತ್ತಿರುವುದು ಫೈಟರ್ ಎನ್ನುವ ಬೇರೆ ಕಥೆಯಂತೆ. 'ಜನ ಗಣ ಮನ' ಚಿತ್ರ ಯಶ್ ಗಾಗಿಯೆ ಇಟ್ಟಿದ್ದಾರಂತೆ ಪೂರಿ ಜಗನ್ನಾಥ್.

ಪ್ಯಾನ್ ಇಂಡಿಯ ಸಿನಿಮಾವಿದು

ಪ್ಯಾನ್ ಇಂಡಿಯ ಸಿನಿಮಾವಿದು

ಪೂರಿ ಜಗನ್ನಾಥ್ ಮತ್ತು ಯಶ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ಜನ ಗಣ ಮನ' ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆಯಂತೆ. ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಈ ಚಿತ್ರ ತಯಾರಾಗಲಿದೆಯಂತೆ. ಉಳಿದಂತೆ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆಯಂತೆ. ಕೆಜಿಎಫ್ ನಂತರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಿದ್ಧರಾಗುತ್ತಿದ್ದಾರೆ ಯಶ್.

ಕೆಜಿಎಫ್-2 ಚಿತ್ರದಲ್ಲಿ ಯಶ್

ಕೆಜಿಎಫ್-2 ಚಿತ್ರದಲ್ಲಿ ಯಶ್

ಯಶ್ ಸದ್ಯ ಕೆಜಿಎಫ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಭಾಗಕ್ಕಿಂತ ಕೆಜಿಎಫ್ ಎರಡನೆ ಭಾಗ ಮತ್ತಷ್ಟು ರೋಚಕವಾಗಿರಲಿದೆಯಂತೆ. ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಮುಕ್ತಾಯವಾಗುವ ಸಾಧ್ಯತೆ ಇದೆ.

More from Filmibeat

English summary
After KGF chapter-2 Rocking star Yash may hero in director Puri Jagannadh Directorial film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X