ಗೆದ್ದ ಕೃಷ್ಣ.. ಗಣಪ ಮನೆಗೆ ಐಷಾರಾಮಿ ಕಾರ್ ಬಂತು; ಕಾರಿನ ಬೆಲೆ ರಿವೀಲ್

ಗೋಲ್ಡನ್ ಸ್ಟಾರ್ ಗಣೇಶ್ ಗೆಲುವಿನ ಲಯಕ್ಕೆ ಮರಳಿದ್ದಾರೆ. ಶ್ರೀನಿವಾಸ್ ರಾಜು ನಿರ್ದೇಶನದ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಸೂಪರ್ ಹಿಟ್ ಆಗಿದೆ. ವರ್ಷದ ಬಹುದೊಡ್ಡ ಹಿಟ್ ಸಿನಿಮಾ ಆಗಿ ಹೊರ ಹೊಮ್ಮಿದೆ. ಇದೇ ಸಂಭ್ರಮದಲ್ಲಿ ಗಣಪ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ.

ಹೌದು ನಟ ಗಣೇಶ್ ಮನೆಗೆ ಹೊಸದೊಂದಯ ಐಷಾರಾಮಿ ಕಾರ್ ಎಂಟ್ರಿ ಕೊಟ್ಟಿದೆ. ಶೋ ರೂಂ ಸಿಬ್ಬಂದಿ ಗೋಲ್ಡನ್ ಸ್ಟಾರ್ ಮನೆಗೆ ಕಾರ್ ಡೆಲಿವರಿ ಕೊಟ್ಟಿದ್ದಾರೆ. ಮಗ ವಿಹಾನ್‌ಗೆ ಪೇಟಾ ತೊಡಿಸಿ ಸತ್ಕರಿಸಿದ್ದು ಫ್ಯಾಮಿಲಿ ಸಮೇತ ಗಣೇಶ್ ಕಾರ್ ಬರಮಾಡಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗುತ್ತಿದೆ.

After Krishnam Pranaya sakhi success actor Ganesh buys range rover vogue car

ಮಡದಿ ಮಕ್ಕಳ ಜೊತೆ ಹೊಸ ಕಾರ್ ಏರಿ ಗಣಿ ಒಂದು ರೌಂಡ್ ಹಾಕಿದ್ದಾರೆ. ಆಪ್ತರ ಜೊತೆ ಕೇಕ್ ಕತ್ತರಿಸಿ ಗೋಲ್ಡನ್ ಸ್ಟಾರ್ ಸಿಹಿ ಹಂಚಿದ್ದಾರೆ. ನೆಚ್ಚಿನ ನಟನ ಮನೆಯಲ್ಲಿ ದುಬಾರಿ ಬೆಲೆಯ ಕಾರ್ ಫ್ಯಾನ್ಸ್ ಖುಷಿಯಾಗಿ ಶುಭ ಹಾರೈಸುತ್ತಿದ್ದಾರೆ.

ಈ ಐಷಾರಾಮಿ ಕಾರಿನ ಬೆಲೆ ಎಷ್ಟು ಎಂದು ಕೆಲವರು ತಡಕಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೀತಿದೆ. ಕಪ್ಪು ಬಣ್ಣದ ರೇಂಜ್ ರೋವರ್ ವೋಗ್ ಕಾರನ್ನು ನಟ ಗಣೇಶ್ ಖರೀದಿಸಿದ್ದಾರೆ. ಈ ಕಾರ್ ಆನ್ ರೋಡ್ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ ಇದೆ. ಟಾಪ್ ಹ್ಯಾಂಡ್ ಪ್ರೀಮಿಯಂ ವೈಶಿಷ್ಟ್ಯಗಳು ಹಾಗೂ ಆರಾಮದಾಯಕ ಪ್ರಯಾಣಕ್ಕೆ ಈ ಕಾರ್ ಹೇಳಿಮಾಡಿಸಿದಂತಿದೆ. ಟೈರ್, ಇಂಜಿನ್ ಸೌಂಡ್ ಫಿಲ್ಟರ್‌ ಜೊತೆಗೆ ಹೆಡ್ ಆಫ್ ಡಿಸ್ಪ್ಲೇ, ಮಲ್ಟಿ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಸಾಕಷ್ಟು ವೈಶಿಷ್ಟ್ಯಗಳು ಈ ಕಾರ್‌ನಲ್ಲಿದೆ.

ಕೆಲ ಬಾಲಿವುಡ್ ತಾರೆಯರು ಸಹ ಈ ರೇಂಜ್ ರೋವಲ್ ವೋಗ್ ಮಾಡೆಲ್ ಕಾರ್ ಹೊಂದಿದ್ದಾರೆ. 'ಗಾಳಿಪಟ-2' ಬಳಿಕ ಗಣೇಶ್ ನಟಿಸಿದ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ಆಗಸ್ಟ್ 15ಕ್ಕೆ ತೆರೆಗೆ ಬಂದ ರೊಮ್ಯಾಂಟಿಕ್ ಎಂಟರ್‌ಟೈನರ್ 'ಕೃಷ್ಣ ಪ್ರಣಯ ಸಖಿ' ಸೂಪರ್ ಹಿಟ್ ಆಗಿತ್ತು. ಯಶಸ್ವಿಯಾಗಿ 50 ದಿನ ಪ್ರದರ್ಶನ ಕಂಡು ಗೆದ್ದಿದೆ. ಇದು ಸಹಜವಾಗಿಯೇ ಗಣಿಗೆ ಸಂತಸ ತಂದಿದೆ.

ಸಿಂಪಲ್ ಲವ್‌ಸ್ಟೋರಿಯನ್ನು ಶ್ರೀನಿವಾಸ್ ರಾಜು ಬಹಳ ಸೊಗಸಾಗಿ ತೆರೆಗೆ ತಂದಿದ್ದಾರೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. 'ಕೃಷ್ಣ ಪ್ರಣಯ ಸಖಿ' ತೆರೆಗೆ ಬಂದು ಒಂದೂವರೆ ತಿಂಗಳು ಕಳೆದರೂ ಇನ್ನು ಓಟಿಟಿಗೆ ಬಂದಿಲ್ಲ. ಶೀಘ್ರದಲ್ಲೇ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.

ದೇಶವಿದೇಶಗಳಲ್ಲಿ ಚಿತ್ರೀಕರಿಸಿದ್ದ 'ಕೃಷ್ಣ ಪ್ರಣಯ ಸಖಿ' ಭರ್ಜರಿ ಕಲೆಕ್ಷನ್ ಮಾಡಿತ್ತು. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಮುಖ್ಯವಾಗಿ 'ದ್ವಾಪರ' ಸಾಂಗ್ ಸೂಪರ್ ಆಗಿ ಚಿತ್ರಕ್ಕೆ ಬಲ ತುಂಬಿತ್ತು. ಚಿತ್ರ 25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ ಅಂದಾಜಿದೆ.

ಸದ್ಯ 'Your's sincerely ರಾಮ್' ಎನ್ನುವ ಹೊಸ ಚಿತ್ರದಲ್ಲಿ ನಟ ಗಣೇಶ್ ಬಣ್ಣ ಹಚ್ಚಿದ್ದಾರೆ. ರಮೇಶ್ ಅರವಿಂದ್ ಕೂಡ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸತ್ಯ ರಾಯಲ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ವಿಖ್ಯಾತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.

'ಪುಷ್ಪಕ ವಿಮಾನ', 'ಇನ್ಸ್‌ಪೆಕ್ಟರ್ ವಿಕ್ರಂ' ಹಾಗೂ 'ಮಾನ್ಸೂನ್ ರಾಗ' ಚಿತ್ರಗಳನ್ನು ವಿಖ್ಯಾತ್ ನಿರ್ಮಿಸಿದ್ದರು. 'Your's sincerely ರಾಮ್' ಚಿತ್ರದ ಮೂಲಕ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಸಕ್ಸಸ್ ಬಳಿಕ ಮತ್ತಷ್ಟು ಕಥೆಗಳನ್ನು ಗಣಿ ಕೇಳುತ್ತಿದ್ದು ಬಹಳ ವಿಭಿನ್ನವಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.

More from Filmibeat

English summary
Kannada Actor Ganesh adds a new luxury car to his collection;
Read more about: ganesh sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X