ಕುರುಕ್ಷೇತ್ರ-ಮದಕರಿ ನಂತರ ಡಿ-ಬಾಸ್ ಕೈಯಲ್ಲಿದೆ ಬಹುದೊಡ್ಡ ಪ್ರಾಜೆಕ್ಟ್.!

Recommended Video

Kurukshetra Movie: ಕುರುಕ್ಷೇತ್ರ-ಮದಕರಿ ನಂತರ ಡಿ-ಬಾಸ್ ಕೈಯಲ್ಲಿದೆ ಬಹುದೊಡ್ಡ ಪ್ರಾಜೆಕ್ಟ್.!

ಕುರುಕ್ಷೇತ್ರ ಮುಗಿತು. ಗಂಡುಗಲಿ ಮದಕರಿ ನಾಯಕ ಆರಂಭವಾಗುತ್ತೆ. ಈ ಚಿತ್ರದ ನಂತರ ಮತ್ತೊಂದು ಮೆಗಾ ಪ್ರಾಜೆಕ್ಟ್ ಆರಂಭಿಸಲಿದ್ದಾರಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇಂತಹದೊಂದು ಸುದ್ದಿ ಈಗ ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ.

ಸಂಗೊಳ್ಳಿ ರಾಯಣ್ಣ, ದುರ್ಯೋಧನ, ಮದಕರಿ ನಾಯಕ ಮುಂದೆ ಯಾವ ಪಾತ್ರ ಇರಬಹುದು ಎಂಬ ಕುತೂಹಲ ಈಗ ಹೆಚ್ಚಾಗುತ್ತಿದೆ. ಈ ಮೆಗಾ ಸಿನಿಮಾದ ಬಗ್ಗೆ ದರ್ಶನ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಟರೊಬ್ಬರು ಬಹಿರಂಗಪಡಿಸಿದ್ದು, ಯಾವುದು ಆ ಸಿನಿಮಾ ಎಂಬುದು ಈಗ ಟಾಕ್ ಆಫ್ ದಿ ಟೌನ್ ಆಗಿದೆ.

ಅಷ್ಟಕ್ಕೂ, ಈ ಸುದ್ದಿ ಕೊಟ್ಟಿದ್ದು ಯಾರು? ದರ್ಶನ್ ಅವರ ಮುಂದಿನ ಟಾರ್ಗೆಟ್ ಯಾರಿರಬಹುದು? ಯಾವ ಚಿತ್ರದ ಕಡೆ ಡಿ ಬಾಸ್ ಒಲವು ತೋರಿದ್ದಾರೆ? ಮುಂದೆ ಓದಿ.....

ಮೆಗಾ ಪ್ರಾಜೆಕ್ಟ್ ನಲ್ಲಿ ಡಿ ಬಾಸ್

ಮೆಗಾ ಪ್ರಾಜೆಕ್ಟ್ ನಲ್ಲಿ ಡಿ ಬಾಸ್

ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳನ್ನ ಪಕ್ಕಕ್ಕಿಟ್ಟು ಈಗ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳ ಕಡೆ ಹೆಚ್ಚು ಗಮನ ಹರಿಸುತ್ತಿರುವ ಡಿ ಬಾಸ್, ಮತ್ತೊಂದು ಮೆಗಾ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರಂತೆ. ಆದ್ರೆ, ಅದು ಯಾವ ರೀತಿ ಸಿನಿಮಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಐತಿಹಾಸಿಕ ಅಥವಾ ಪೌರಾಣಿಕ.!

ಐತಿಹಾಸಿಕ ಅಥವಾ ಪೌರಾಣಿಕ.!

ಐತಿಹಾಸಿಕ ಅಥವಾ ಪೌರಾಣಿಕ ಚಿತ್ರಗಳಿಗೆ ಮೊದಲ ಆಧ್ಯತೆ ನೀಡುವುದಾಗಿ ದರ್ಶನ್ ಆಹ್ವಾನ ನೀಡಿದ್ದರು. ಬಹುಶಃ ಅದನ್ನ ಗಮನದಲ್ಲಿಟ್ಟುಕೊಂಡು ಕೆಲವು ಡಿ ಬಾಸ್ ಗಾಗಿ ಐತಿಹಾಸಿಕ ಅಥವಾ ಪೌರಾಣಿಕ ಕತೆಗಳನ್ನ ಮಾಡಿರಹುದಾ ಎಂಬ ನಿರೀಕ್ಷೆ ಇದೆ.

ರವಿಚೇತನ್ ಕೊಟ್ಟ ಸುಳಿವು

ರವಿಚೇತನ್ ಕೊಟ್ಟ ಸುಳಿವು

ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ದುರ್ಯೋಧನನ ಪಾತ್ರ ಮಾಡಿದ್ದರೆ, ರವಿ ಚೇತನ್ ದುರ್ಯೋಧನನ ಸಹೋದರರ ದುಶ್ಯಾಸನನ ಪಾತ್ರ ನಿಭಾಯಿಸಿದ್ದಾರೆ. ಸಿನಿಮಾ ರಿಲೀಸ್ ಬಗ್ಗೆ ಸಂತಸ ವ್ಯಕ್ತಪಡಿಸಿದ ರವಿಚೇತನ್ ''ಕುರುಕ್ಷೇತ್ರ, ಮದಕರಿ ನಂತರ ದರ್ಶನ್ ಇನ್ನೊಂದು ದೊಡ್ಡ ಸಿನಿಮಾ ಮಾಡಲಿದ್ದಾರೆ. ಅದರಲ್ಲಿ ನನಗೊಂದು ಪಾತ್ರ ಸಿಗಬಹುದು ಎಂಬ ನಿರೀಕ್ಷೆ'' ಎಂದು ಹೇಳುವ ಮೂಲಕ ದೊಡ್ಡ ಪ್ರಾಜೆಕ್ಟ್ ಬಗ್ಗೆ ಸುಳಿವು ನೀಡಿದ್ದಾರೆ.

ದರ್ಶನ್ ಬಳಿ ಇದೆ ರಾವಣನ ಕಥೆ

ದರ್ಶನ್ ಬಳಿ ಇದೆ ರಾವಣನ ಕಥೆ

ಕನ್ನಡದ ಹಿರಿಯ ನಟರೊಬ್ಬರು ಡಿ ಬಾಸ್ ಗೆ ರಾವಣನ ಸ್ಕ್ರಿಪ್ಟ್ ನೀಡಿದ್ದರಂತೆ. ಆ ಸುದ್ದಿಗೂ ಈಗ ರವಿಚೇತನ್ ಹೇಳಿರುವ ಸುದ್ದಿಗೂ ಲಿಂಕ್ ಇರುವ ಹಾಗೆ ಕಾಣುತ್ತಿದೆ. ಒಂದು ವೇಳೆ ಇದೇ ನಿಜವಾದರೇ ದರ್ಶನ್ ಅವರ ರಾವಣನಾಗೋದ್ರಲ್ಲಿ ಯಾವುದೇ ಅಚ್ಚರಿ ಇಲ್ಲ. ಬಟ್, ಅಧಿಕೃತವಾಗುವವರೆಗೂ ಕಾದು ನೋಡಬೇಕಿದೆ.

More from Filmibeat

English summary
After kurukshetra movie challenging star darshan will starts another big project said actor ravi chethan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X