For Quick Alerts
  ALLOW NOTIFICATIONS  
  For Daily Alerts

  'ಬದುಕು ಮತ್ತೆ ಕೈ ಬೀಸಿ ಕರೆದಾಗ' ಎನ್ನುತ್ತಾ ನಗುತ್ತಾ ವಾಪಸ್ ಆದ ನಟಿ ಚೈತ್ರಾ ಕೋಟೂರ್

  |

  ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಮದುವೆ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಮದುವೆಯಾಗಿ ಕೆಲವೇ ಗಂಟೆಯಲ್ಲೇ ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ನಟಿ ಚೈತ್ರಾ ಕೋಟೂರ್ ದೊಡ್ಡ ವಿವಾದವನ್ನೇ ಮಾಡಿಕೊಂಡಿದ್ದರು.

  ಬದುಕಿನ ಮಹತ್ವ ತಿಳಿಸಿದ ಕ್ರಿಮಿಯ ಬಗ್ಗೆ ಹೇಳಿದ ಚೈತ್ರಾ ಕೋಟೂರ್ | Filmibeat Kannada

  ಮಂಡ್ಯ ಮೂಲಕ ನಾಗಾರ್ಜುನ್ ಜೊತೆ ಬೆಂಗಳೂರಿನ ದೇವಸ್ಥಾನದಲ್ಲಿ ತಾಳಿ ಕಟ್ಟಿಸಿಕೊಂಡಿದ್ದ ಚೈತ್ರಾ ವಿರುದ್ಧ ನಾಗಾರ್ಜುನ್ ಕುಟುಂಬದವರು ಬಲವಂತದ ಮದುವೆ ಎಂದು ಆರೋಪ ಮಾಡಿದ್ದರು. ಬಳಿಕ ಇಬ್ಬರು ಕುಟುಂಬದವರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದರು. ಈ ಎಲ್ಲಾ ಬೆಳವಣಿಗೆ ಬಳಿಕ ನಾಗಾರ್ಜುನ್ ಚೈತ್ರಾ ಬಿಟ್ಟು ತನ್ನ ಕುಟುಂಬದ ಜೊತೆ ತೆರಳಿದ್ದರು.

  ಚೈತ್ರಾ ಕೊಟೂರು ಪತಿ ಹಾಗೂ ಕುಟುಂಬದವರು ನಾಪತ್ತೆಚೈತ್ರಾ ಕೊಟೂರು ಪತಿ ಹಾಗೂ ಕುಟುಂಬದವರು ನಾಪತ್ತೆ

  ಇದರಿಂದ ಮನನೊಂದ ಚೈತ್ರಾ ಆತ್ಮಹತ್ಯೆಗೂ ಯತ್ನಿಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಚೈತ್ರಾ ಈಗ ಮತ್ತೆ ಹೊಸ ಹುರುಪಿನೊಂದಿಗೆ ವಾಪಸ್ ಆಗಿದ್ದಾರೆ. ಇತ್ತೀಚಿಗಷ್ಟೆ ನಾಗಾರ್ಜುನ್ ನಂಬಿ ದೊಡ್ಡ ತಪ್ಪು ಮಾಡಿದೆ ಎಂದು ವಿಡಿಯೋ ಮೂಲಕ ಕಣ್ಣೀರಿಟ್ಟ ಚೈತ್ರಾ ಈಗ ನಗುತ್ತಾ ವಾಪಸ್ ಆಗಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ ಹಾಕುವ ಮೂಲಕ ಬದುಕು ಮತ್ತೆ ಕೈ ಬೀಸಿ ಕರೆದಿದೆ ಎಂದು ಸಂತಸ ಪಟ್ಟಿದ್ದಾರೆ. 'ಬದುಕು ಮತ್ತೆ ಕೈಬೀಸಿ ಕರೆದಾಗ, ಎರಡೆರಡು ಸ್ಯಾನಿಟೈಸರ್ ಬಾಟಲಿಗಳನ್ನು ಹೆಚ್ಚಾಗಿ ಇರಿಸಿಕೊಂಡು ಮುಂದೆ ಸಾಗಿ. ದೇಹ ಸೇರಿ ಸಾವಿನ ದವಡೆಗೆ ನೂಕುವ ಕ್ರಿಮಿಯು, ಬದುಕಿನ ಮಹತ್ವವನ್ನೂ ತಿಳಿಸುವಲ್ಲಿ ಯಶಸ್ವಿಯಾಗುತ್ತದೆ. ನಿಮ್ಮೆಲ್ಲರ ಪ್ರೀತಿ ಕಾಳಜಿಗೆ ಆಭಾರಿ' ಎಂದು ಬರೆದುಕೊಂಡಿದ್ದಾರೆ.

  ನಗುತ್ತಾ ಸಂತಸದಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಚೈತ್ರಾ ಪೋಸ್ಟ್ ಗೆ ನೆಟ್ಟಿಗರು ಧೈರ್ಯದ ಮಾತುಗಳನ್ನು ಹೇಳುತ್ತಿದ್ದಾರೆ. ಅಂದಹಾಗೆ ಚೈತ್ರಾ ಅವರ ಮುಂದಿನ ನಡೆ ಏನು? ಸಿನಿಮಾ ಅಥವಾ ಧಾರಾವಾಹಿ ಯಾವುದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  After marriage controversy Chaitra Kotoor shares happy photo in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X