ವಿವಾಹದ ಬಳಿಕ ಮೈ ಮುಂದೆ ನಿಂತ ವಸಿಷ್ಠ ಸಿಂಹ: 'ಲವ್‌ಲೀ' ಡಬ್ಬಿಂಗ್

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಇತ್ತೀಚೆಗೆ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದಾರೆ. ಹರಿಪ್ರಿಯಾ ಜೊತೆ ಸಪ್ತಪದಿ ತುಳಿದ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ವಸಿಷ್ಠ ಸಿಂಹ ನಟಿಸುತ್ತಿರುವ ಸಿನಿಮಾ 'ಲವ್‌ಲೀ' ಶೂಟಿಂಗ್ ಬಹುತೇಕ ಮುಗಿದಿದ್ದು, ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

'ಲವ್ ಲೀ' ಸಿನಿಮಾ ಆರಂಭದಿಂದಲೂ ಪ್ರೇಕ್ಷಕರನ್ನು ಒಂದಲ್ಲ ಒಂದು ಕಾರಣಕ್ಕೆ ಸೆಳೆಯುತ್ತಲೇ ಇದೆ. ಅಂದ್ಹಾಗೆ ಈ ಸಿನಿಮಾಗೆ ಚೇತನ್ ಕೇಶವ್ ಆಕ್ಷನ್ ಕಟ್ ಹೇಳಿದ್ದು, ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ. ಸದ್ಯ ಶೂಟಿಂಗ್ ಕಂಪ್ಲೀಟ್ ಮಾಡಿರೋ ಟೀಮ್ ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದೆ.

After Marriage Vasishta Simha Dubbing For His upcoming Movie Love Lee

'ಲವ್‌ಲೀ' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಲಂಡನ್‌ನಲ್ಲಿ ಚಿತ್ರೀಕರಿಸಬೇಕಿರುವ ಹಾಡೊಂದನ್ನು ಹೊರತು ಪಡಿಸಿ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದೆ. 'ಲವ್‌ಲೀ' ಟೀಂ ಕಳೆದ ಏಳು ದಿನದಿಂದ ಡಬ್ಬಿಂಗ್ ಮಾಡುವುದರಲ್ಲಿ ನಿರತರಾಗಿದ್ದು ವಸಿಷ್ಠ ಸಿಂಹ ತಮ್ಮ ದೃಶ್ಯಕ್ಕೆ ಡಬ್ಬಿಂಗ್ ಮಾಡುತ್ತಿದ್ದಾರೆ. ಇವರೊಂದಿಗೆ ಸ್ಟೆಫಿ ಪಟೇಲ್, ದತ್ತಣ್ಣ, ರಂಗಾಯಣ ರಘು, ಅಚ್ಯುತ್ ಕುಮಾರ್, ವಂಶಿಕಾ, ಸೂರಜ್ ಸಿನಿಮಾದ ಡಬ್ಬಿಂಗ್ ಪೋಷನ್ ಅನ್ನು ಕಂಪ್ಲೀಟ್ ಮಾಡಿದ್ದಾರೆ. ಇನ್ನು ಕೆಲವೇ ದಿನಗಳ ಡಬ್ಬಿಂಗ್ ಕೆಲಸ ಮಾತ್ರ ಬಾಕಿ ಉಳಿದಿದೆ.

'ಲವ್ ಲೀ' ನಿರ್ದೇಶಕ ಚೇತನ್ ಕೇಶವ್ ಅವರ ಮೊದಲ ಸಿನಿಮಾ. ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆ ಜೊತೆಗೆ ರೌಡಿಸಂ ಕಥೆಯನ್ನು ಸೇರಿಸಿ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಸಿಷ್ಠ ಸಿಂಹ ಫುಲ್ ಡಿಫ್ರೆಂಟ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಕೆಲವು ತುಣುಕುಗಳು ಸಿನಿಪ್ರಿಯರಿಗೆ ಇಷ್ಟ ಆಗಿವೆ. ಡಬ್ಬಿಂಗ್ ಮುಗಿದ ಬಳಿಕ ಚಿತ್ರತಂಡ ಲಂಡನ್‌ಗೆ ತೆರಳುತ್ತಿದೆ.

After Marriage Vasishta Simha Dubbing For His upcoming Movie Love Lee

ಈ ಸಿನಿಮಾದಲ್ಲಿ 'ಸುಬ್ಬಲಕ್ಷ್ಮಿ ಸಂಸಾರ' ಸೀರಿಯಲ್ ಖ್ಯಾತಿಯ ಸಮೀಕ್ಷಾ, ಸಾಧುಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ವಂಶಿಕಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಒಳಗೊಂಡ ದೊಡ್ಡ ಕಲಾವಿದರ ಬಳಗ 'ಲವ್ ಲೀ' ಸಿನಿಮಾದಲ್ಲಿದೆ. ಈ ಸಿನಿಮಾಗೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
After Marriage Vasishta Simha Dubbing For His upcoming Movie Love Lee, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X