ಮೀನಾ ತೂಗುದೀಪ ಬಳಿಕ ನಾನು ಇಷ್ಟಪಡುವ ನಿರ್ಮಾಪಕರು ಗೀತಾ ಶಿವರಾಜ್‌ಕುಮಾರ್ ಎಂದ ಪ್ರಥಮ್!
ಒಳ್ಳೆ ಹುಡ್ಗ ಪ್ರಥಮ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಲಿಟ್ಟು ತನ್ನ ಮಾತು ಹಾಗೂ ವಿಭಿನ್ನ ನಡವಳಿಕೆಯಿಂದ ಪ್ರೇಕ್ಷಕರ ಮನಗೆದ್ದು, ಹೆಸರು ಮಾಡಿ ಶ ಆವೃತ್ತಿಯಲ್ಲಿ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಹೆಸರು ಮಾಡಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆದ್ದ ಬೆನ್ನಲ್ಲೇ ಸಿನಿಮಾ ಕ್ಷೇತ್ರಕ್ಕೂ ಸಹ ಎಂಟ್ರಿಕೊಟ್ಟ ಪ್ರಥಮ್ ಹೀರೊ ಸಹ ಆಗಿಬಿಟ್ಟರು.
ಹೀಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವರ್ಷವೇ ಮೂರು ಚಿತ್ರಗಳಲ್ಲಿ ನಟಿಸಿದ್ದ ಪ್ರಥಮ್ ನಂತರದ ನಾಲ್ಕು ವರ್ಷಗಳಲ್ಲಿ ಸೈಲೆಂಟ್ ಆಗಿಬಿಟ್ಟಿದ್ದರು. ಹೀಗೆ ಬೃಹತ್ ಗ್ಯಾಪ್ ತೆಗೆದುಕೊಂಡಿದ್ದ ಪ್ರಥಮ್ ನಟನೆಯ ನಟ ಭಯಂಕರ ಚಿತ್ರ ಈ ವರ್ಷ ಬಿಡುಗಡೆಗೊಂಡಿದ್ದು ಮತ್ತೆ ಸಕ್ರಿಯರಾಗಿದ್ದಾರೆ ಹಾಗೂ ಮತ್ತಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಹೀಗೆ ನಾಲ್ಕು ವರ್ಷಗಳ ಕಾಲ ಪ್ರಥಮ್ ನಟನೆಯ ಯಾವ ಚಿತ್ರ ಬಿಡುಗಡೆಯಾಗದಿದ್ದರೂ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದರ ಮೂಲಕ ಚರ್ಚೆಗಳಲ್ಲಿ ಉಳಿದುಕೊಂಡಿದ್ದರು. ಇನ್ನು ಪ್ರಥಮ್ ಹಾಕುವ ಪೋಸ್ಟ್‌ಗಳು ವಿಭಿನ್ನವಾಗಿರುತ್ತವೆ, ವಿಶೇಷವಾಗಿರುತ್ತವೆ ಹಾಗೂ ಕೆಲವೊಮ್ಮೆ ವಿಚಿತ್ರವಾಗಿಯೂ ಸಹ ಇರುತ್ತವೆ.
ಈ ಮೂಲಕ ಪ್ರಥಮ್ ಹಾಕುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವೊಮ್ಮೆ ವಿವಾದಗಳನ್ನೂ ಸಹ ಮಾಡಿಕೊಂಡಿವೆ. ಸದ್ಯ ಪ್ರಥಮ್ ಹಾಕಿರುವ ಪೋಸ್ಟ್ ಒಂದು ವೈರಲ್ ಆಗಿದ್ದು, ಇದರಲ್ಲಿ ಪ್ರಥಮ್ ಕನ್ನಡ ಚಲನಚಿತ್ರರಂಗದ ಕಿಂಗ್ ಎಂದೇ ಖ್ಯಾತಿಯನ್ನು ಪಡೆದಿರುವ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶಿವ ರಾಜ್‌ಕುಮಾರ್ ಹಾಗೂ ಗೀತಾ ಶಿವ ರಾಜ್‌ಕುಮಾರ್ ಜತೆಗಿನ ಫೋಟೊವೊಂದನ್ನು ಹಂಚಿಕೊಂಡಿರುವ ಪ್ರಥಮ್ 'ಪಾರ್ವತಮ್ಮ ರಾಜ್‌ಕುಮಾರ್, ಮೀನಾ ತೂಗದೀಪ ಶ್ರೀನೀವಾಸ್ ನಂತರ ವ್ಯಕ್ತಿತ್ವದಲ್ಲಿ ನಾನು ಬಹಳ ಇಷ್ಟಪಡುವ, ಗೌರವಿಸುವ ನಿರ್ಮಾಪಕರು ಅಂದ್ರೆ ಅದು ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಶುಭಾಶಯಗಳು, ನೂರ್ಕಾಲ ಚೆನ್ನಾಗಿರಿ" ಎಂದು ಬರೆದುಕೊಂಡಿದ್ದಾರೆ.
ಇನ್ನು ಪ್ರಥಮ್ ಮದುವೆ ಸಹ ಫಿಕ್ಸ್ ಅಗಿದ್ದು, ಈ ವಿಚಾರವಾಗಿಯೂ ಸಹ ಪ್ರಥಮ್ ಮಾತನಾಡಿ ವೈರಲ್ ಆಗಿದ್ದರು. ಜೂನ್ 12ರ ಭಾನುವಾರ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹೌದು, ಒಳ್ಳೆ ಹುಡ್ಗ ಪ್ರಥಮ್ ಯಾವುದೇ ಸುಳಿವು ನೀಡದೇ ಭಾನುಶ್ರೀ ಎಂಬ ಯುವತಿ ಜತೆ ಉಂಗುರ ಬದಲಾಯಿಸಿಕೊಂಡು ಆ ಸುದ್ದಿಯನ್ನು ತಿಳಿಸಿ ಸರ್‌ಪ್ರೈಸ್ ನೀಡಿದ್ದರು.
ಹೀಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಪ್ರಥಮ್ ಆ ಬಳಿಕ ಮಾಧ್ಯಮಗಳ ಮುಂದೆ ಬಂದು ಮಾತನಾಡಿ ತಾವು ಯಾಕೆ ಯಾವುದೇ ಮಾಹಿತಿಯನ್ನು ನೀಡದೇ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡೆ ಎಂಬುದಕ್ಕೆ ಉತ್ತರವನ್ನೂ ಸಹ ನೀಡಿದರು.
ಮೊದಲಿಗೆ ತಾವು ಕೈ ಹಿಡಿಯಲಿರುವ ಹುಡುಗಿ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಥಮ್ ಆಕೆ ಪದವಿ ಮುಗಿಸಿದ್ದು, ಸದ್ಯ ಮಾಸ್ಟರ್ ಡಿಗ್ರಿ ಮಾಡುತ್ತಿದ್ದಾರೆ ಎಂದು ಹೇಳಿಕೊಂಡರು. ಅಲ್ಲದೇ ಆಕೆ ಇನ್ನೂ ಸಹ ಮೊಬೈಲ್ ಬಳಸುವುದಿಲ್ಲ, ಮನೆಯವರೇ ನೋಡಿದ ಹುಡುಗಿ, ಸಿದ್ದರಾಮಯ್ಯ ಹಾಗೂ ರವಿಚಂದ್ರನ್ ಅವರ ಪತ್ನಿಯರ ಹಾಗೆ ತಾನು ಕೈ ಹಿಡಿಯಲಿರುವ ಹುಡುಗಿಯೂ ಸಹ ಸಾಮಾಜಿಕ ಜಾಲತಾಣದಿಂದ ದೂರ ಹಾಗೂ ಸರಳ ಎಂದು ತಿಳಿಸಿದ್ದರು.


Click it and Unblock the Notifications











