''ಇನ್ನು ಮುಂದೆ ದುಡ್ಡು ಮಾಡಿ ತೋರಿಸುತ್ತೇನೆ'' - ರವಿಚಂದ್ರನ್

Recommended Video

ಇನ್ನು ಮುಂದೆ ದುಡ್ಡು ಮಾಡಿ ತೋರಿಸುತ್ತೇನೆ'' - ರವಿಚಂದ್ರನ್

''ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು..'' ಎನ್ನುವ ಮಾತಿದೆ. ಒಂದು ಮದುವೆ, ಒಬ್ಬ ವ್ಯಕ್ತಿ ಯೋಚನೆ ಮಾಡುವ ಶೈಲಿಯನ್ನೇ ಬದಲು ಮಾಡುವ ಶಕ್ತಿ ಹೊಂದಿದೆ. ಅದೇ ರೀತಿ ಮಗಳ ಮದುವೆ ಕ್ರೇಜಿ ಸ್ಟಾರ್ ರವಿಚಂದ್ರನ್ ಬದುಕಿನಲ್ಲಿ ಬದಲಾವಣೆ ತಂದಿದೆ.

ಅದರ ಪ್ರಭಾವದಲ್ಲಿ ಇತ್ತೀಚಿಗೆ 'ಬಯಲಾಟದ ಬೀಮಣ್ಣ' ಎಂಬ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿರುವ ರವಿಚಂದ್ರನ್ ''ಇನ್ನು ಮುಂದೆ ದುಡ್ಡು ಮಾಡಿ ತೋರಿಸುತ್ತೇನೆ'' ಎಂದು ಹೇಳಿದ್ದಾರೆ.

ರವಿಚಂದ್ರನ್ ಸಿನಿಮಾವನ್ನು ದುಡ್ಡಿಗಾಗಿ ಮಾಡುವುದಿಲ್ಲ. ತಮ್ಮ ಕನಸು ತೆರೆ ಮೇಲೆ ಬಂದರೆ ಅದೇ ಗೆಲುವು ಎಂದುಕೊಂಡಿದ್ದಾರೆ. ಬರೀ ಕಲೆಕ್ಷನ್ ಆಧಾರದ ಮೇಲೆ ಒಂದು ಸಿನಿಮಾದ ಸೋಲು ಗೆಲುವಿನ ನಿರ್ಧಾರ ಮಾಡುವುದು ರವಿಚಂದ್ರನ್ ರಿಗೆ ಇಷ್ಟ ಆಗುವುದಿಲ್ಲವಂತೆ.

After My Daughter Marriage I Know The Importance Of Money Says Ravichandran

ಈ ರೀತಿ ಯೋಚನೆ ಮಾಡುತ್ತಿದ್ದ ರವಿಚಂದ್ರನ್ ರಿಗೆ ಈಗ ಹಣದ ಅಗತ್ಯ ಕೂಡ ತಿಳಿದಿದೆ. ''ಮಗಳ ಮದುವೆ ಮಾಡಿದ ಮೇಲೆ ನನಗೆ ದುಡ್ಡಿನ ಮಹತ್ವ ತಿಳಿದಿದೆ. ಅದಕ್ಕೆ ಇನ್ನು ಮುಂದೆ ದುಡ್ಡು ಮಾಡಿ ತೋರಿಸುತ್ತೇನೆ'' ಎಂದು ಹೇಳಿದ್ದಾರೆ.

ಮಗಳ ಮದುವೆಯ ನಂತರ ರವಿಚಂದ್ರನ್ ಯೋಚನಾ ಕ್ರಮ ಕೊಂಚ ಬದಲಾಗಿದೆ. ತಮ್ಮ ಕನಸನ್ನು ತೆರೆ ಮೇಲೆ ತರುವುದರ ಜೊತೆಗೆ ಕಲೆಕ್ಷನ್ ಮೇಲೆಯೂ ಕ್ರೇಜಿ ಸ್ಟಾರ್ ಕಣ್ಣು ಇಡಲಿದ್ದಾರೆ.

More from Filmibeat

English summary
Kannada actor Ravichandran says after his daughter marriage he know the importance of money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X