'ನಾಗರಹಾವು' ನಂತ್ರ ಮತ್ತೆ ಸೃಷ್ಟಿ ಆಗಲಿದೆ 'ಪ್ರೇಮಲೋಕ'

By Pavithra

Recommended Video

ನಾಗರಹಾವು ನಂತರ ಈ ಸಿನಿಮಾಗಳನ್ನು ನೋಡೋಕೆ ರೆಡಿಯಾಗಿ..!| Filmibeat Kannada

ನಾಲ್ಕು ದಶಕದ ಹಿಂದೆ ಬಿಡುಗಡೆ ಆದ 'ನಾಗರಹಾವು' ಸಿನಿಮಾಗೆ ಹೊಸ ತಂತ್ರಜ್ಞಾನ ಅಳವಡಿಸಿ ಬಿಡುಗಡೆ ಮಾಡಿದ ನಟ, ನಿರ್ಮಾಪಕ ಬಾಲಾಜಿ ಕನ್ನಡ ಸಿನಿಮಾ ಪ್ರೇಮಿಗಳಿಗಾಗಿ ಸಿಹಿ ಸುದ್ದಿಯನ್ನು ನೀಡುತ್ತಿದ್ದಾರೆ.

ರೀ ರಿಲೀಸ್ ಆದ 'ನಾಗರಹಾವು' ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸಿದ ಪ್ರೇಕ್ಷಕರಿಗಾಗಿ ಕನ್ನಡ ಸಿನಿಮಾರಂಗದಲ್ಲಿ ಇತಿಹಾಸ ಸೃಷ್ಟಿ ಮಾಡಿರುವ ಚಿತ್ರಗಳನ್ನು ಮತ್ತೆ ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾರಂತೆ.

After Nagarahaavu, Balaji sets his eyes on Kula Gaurava, Naa Ninna Mareyalare And PremaLoka

ಸದ್ಯ ಬಾಲಾಜಿ ಈಶ್ವರಿ ಪ್ರೊಡಕ್ಷನ್ಸ್ ನ ಮೊಟ್ಟಮೊದಲ ಚಿತ್ರವಾದ 'ಕುಲಗೌರವ' ವನ್ನು ಮತ್ತೆ ಅಭಿಮಾನಿಗಳಿಗೆ ಹೊಸ ತಂತ್ರಜ್ಞಾನದಲ್ಲಿ ತೋರಿಸಬೇಕೆನ್ನುವ ಆಸೆಯನ್ನು ಹೊಂದಿದ್ದಾರಂತೆ. ಅಷ್ಟೇ ಅಲ್ಲದೆ ಡಾ ರಾಜ್ ಕುಮಾರ್ ಅಭಿನಯದ 'ನಾ ನಿನ್ನ ಮರೆಯಲಾರೆ' ಚಿತ್ರವನ್ನು ಮತ್ತೆ ತೆರೆಗೆ ತರುವ ಆಲೋಚನೆ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

After Nagarahaavu, Balaji sets his eyes on Kula Gaurava, Naa Ninna Mareyalare And PremaLoka

ಇನ್ನು ವಿಶೇಷ ಎಂದರೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ಪ್ರೇಮಲೋಕ' ಸಿನಿಮಾವನ್ನು ರೀ ರಿಲೀಸ್ ಮಾಡಬೇಕು ಎನ್ನುವ ಆಸೆಯೂ ಇದ್ಯಂತೆ. ಒಟ್ಟಾರೆ 'ನಾಗರಹಾವು' ಸಿನಿಮಾವನ್ನು ಹೊಸ ತಂತ್ರಜ್ಞಾನದಲ್ಲಿ ನೋಡಿ ಸಂತಸ ಪಡಿಸುತ್ತಿರುವ ಪ್ರೇಕ್ಷಕರಿಗೆ ಇನ್ನು ಮುಂದೆ ಕ್ಲಾಸಿಕ್ ಎನ್ನಿಸುವ ಚಿತ್ರಗಳನ್ನು ನೋಡುವ ಅವಕಾಶ ಮತ್ತೆ ಮತ್ತೆ ಸಿಗಲಿದೆ.

More from Filmibeat

English summary
After Nagarahaavu, Ravichandra's brother Balaji sets his eyes on Rajkumar's Kula Gaurava (1st movie of Eshwari Productions) and Naa Ninna Mareyalare. And the plans are in place to digitize Ravichandran's PremaLoka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X