'ನಯನತಾರಾ', 'ಕಿಯಾರಾ' ನಂತರ 'ಯಶ್' ಅಭಿನಯದ 'ಟಾಕ್ಸಿಕ್' ಅಡ್ಡೆಗೆ ಬಂದ 'ಮಹಾರಾಣಿ'..!

ಕೆಲ ಸಿನಿಮಾಗಳೇ ಹಾಗೆ. ಆರಂಭದಿಂದ್ಲೇ ಕುತೂಹಲ ಹುಟ್ಟಿಸಿ ಬಿಡುತ್ತವೆ. ಯಶ್ ಅಭಿನಯದ ಟಾಕ್ಸಿಕ್ ಇದೇ ಸಾಲಿಗೆ ಸೇರುವಂತಹ ಸಿನಿಮಾ. ಕಳೆದ ಡಿಸೆಂಬರ್‌ನಲ್ಲಿ ಅಧಿಕೃತವಾಗಿ ಘೋಷಿಸಲಾದ ಈ ಸಿನಿಮಾ ಕೆ.ಜಿ.ಎಫ್ ಚಿತ್ರವನ್ನೂ ಮೀರಿಸುತ್ತೆ ಅನ್ನುವುದು ರಾಕಿಂಗ್ ಭಕ್ತಗಣದ ನಂಬಿಕೆ. ಇದಕ್ಕೆ ಪೂರಕವಾಗಿ ಯಶ್ ತಮ್ಮ ತಂಡದ ಜೊತೆ ಕೆಲಸ ಮಾಡುತ್ತಿದ್ದಾರೆ ಕೂಡ.

ಇನ್ನೂ ಚಿತ್ರದ ನಾಯಕಿಯ ವಿಚಾರಕ್ಕೆ ಬಂದರೆ ಮೊದಲಿಂದ ಹಲವಾರು ಹೆಸರು ಕೇಳಿ ಬರ್ತಾನೆ ಇವೆ. ಆ ಪೈಕಿ ಬಾಲಿವುಡ್‌ನ ಬೆಡಗಿ ಕಿಯಾರಾ ಅಡ್ವಾಣಿ ಹೆಸರು ಮುಂಚೂಣಿಯಲ್ಲಿದೆ. ಚಿತ್ರದ ನಾಯಕಿ ಬೇರೆ ಯಾರು ಅಲ್ಲ ಬದಲಿಗೆ ಕಿಯಾರಾ ಅನ್ನುವ ಮಾತು ಇದೆ. ಈ ಮಾತು ನಿಜಾ ಕೂಡ ಆಗಿದೆ. ಕಿಯಾರಾ ಈಗಾಗಲೇ ಟಾಕ್ಸಿಕ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

After Nayanthara and Kiara Advani Bollywood actress Huma Qureshi joins the cast of Yash s Toxic

ನಿಜಾ.. ಚಿತ್ರತಂಡವಾಗಲಿ ಯಶ್ ಆಗಲಿ ಈ ಸುದ್ದಿಯ ಮೇಲೆ ಅಧಿಕೃತ ಮುದ್ರೆ ಇನ್ನೂ ಒತ್ತಿಲ್ಲವಾದರೂ, ಕಿಯಾರಾ ಟಾಕ್ಸಿಕ್‌ ಚಿತ್ರದ ನಾಯಕಿ ಎನ್ನುವ ವಿಚಾರವನ್ನು ಕೆಲ ವೈರಲ್ ಆದ ವಿಡಿಯೋಗಳು ಈಗಾಗಲೇ ಜಗಜ್ಜಾಹೀರು ಮಾಡಿವೆ. ವೈರಲ್ ಕೂಡ ಆಗಿವೆ.

ಇನ್ನೂ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ಟಾಕ್ಸಿಕ್ ಚಿತ್ರದಲ್ಲಿರುವುದು ಕೂಡ ಖಚಿತವಾಗಿದೆ. ನಯನತಾರಾ ರಾಕಿಂಗ್ ಸ್ಟಾರ್ ಯಶ್ ಅವರ ಸಹೋದರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಮಾತು ಇದೆ. ಇದರ ನಡುವೆ ಈಗ ಟಾಕ್ಸಿಕ್ ಅಂಗಳಕ್ಕೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ಪ್ರವೇಶಿಸಿದ್ದಾರೆ. ಅವರು ಬೇರೆ ಯಾರು ಅಲ್ಲ ಬದಲಿಗೆ ಹುಮಾ ಖುರೇಷಿ ಅನ್ನುವುದು ಈ ಕ್ಷಣದ ವಿಶೇಷ

after-nayanthara-and-kiara-advani-bollywood-actress-huma-qureshi-joins-the-cast-of-yashs-toxic

ಹೌದು, ಅಸಲಿಗೆ ಟಾಕ್ಸಿಕ್ ಚಿತ್ರದ ಚಿತ್ರೀಕರಣಕ್ಕೆ ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿ ಯಶ್ ಬಿಡಾರ ಹೂಡಿದ್ದಾರೆ. ಕಿಯಾರಾ ಅಡ್ವಾಣಿ ಕೂಡ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಪಾಪರಾಜಿಗಳ ಕಣ್ತಪ್ಪಿಸಿ ಇಬ್ಬರು ದಿನನಿತ್ಯ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ವಿಶೇಷ ಅಂದರೆ ಈಗ ವೆಬ್ ಸರಣಿಯ 'ಮಹಾರಾಣಿ' ಹುಮಾ ಖುರೇಷಿ ನಿನ್ನೆಯಿಂದ ಟಾಕ್ಸಿಕ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಟಾಕ್ಸಿಕ್ ಚಿತ್ರದ ಚಿತ್ರೀಕರಣಕ್ಕೆ ಹುಮಾ ಖುರೇಷಿ ತೆರಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಶ್ ಅಭಿಮಾನಿಗಳ ಸಂಭ್ರಮವನ್ನೂ ಹೆಚ್ಚಿಸಿದೆ.

ಅಂದ್ಹಾಗೇ ಹುಮಾ ಖುರೇಷಿ ಕೇವಲ ರೂಪವತಿ ಅಷ್ಟೇ ಅಲ್ಲ ಅಭಿನಯದ ವಿಚಾರದಲ್ಲಿ ಕೂಡ ಇವರದ್ದು ಎತ್ತಿದ ಕೈ. ಗ್ಯಾಂಗ್ಸ್ ಆಫ್ ವಾಸೇಪುರ್, ಏಕ್ ಥಿ ಡಾಯನ್, ಬದ್ಲಾಪುರ್ ಮತ್ತು ಮಹಾರಾಣಿ ಎಂಬ ವೆಬ್ ಸರಣಿ ಇದಕ್ಕೆ ಕೈಗನ್ನಡಿ. ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಾಲಾ ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಬಂದಿದ್ದ ಹುಮಾ ಖುರೇಶಿ ಸದ್ಯಕ್ಕೆ ಜಾಲಿ ಎಲ್ ಎಲ್ ಬಿ 3 ಮತ್ತು ಗುಲಾಬಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇಂಥಾ ಹುಮಾ ಖುರೇಷಿ ಅವರ ಪಾತ್ರ ಯಶ್ ಅಭಿನಯದ ಟಾಕ್ಸಿಕ್‌ನಲ್ಲಿ ಹೇಗಿರಲಿದೆ ಎನ್ನುವುದು ಸದ್ಯಕ್ಕೆ ನಿಗೂಢವಾದರೂ ಹುಮಾ ಖುರೇಷಿ ಅವರದ್ದು ಚಿತ್ರದಲ್ಲಿ ತುಂಬಾ ಮಹತ್ತರವಾದ ಪಾತ್ರವೆನ್ನುವ ಮಾತು ಸದ್ಯಕ್ಕೆ ದಕ್ಷಿಣದಿಂದ ಉತ್ತರದವರೆಗೆ ಕೇಳಿ ಬರುತ್ತಿದೆ. ಚಿತ್ರದ ಮೇಲಿನ ಕುತೂಹಲವನ್ನು ಹುಮಾ ಖುರೇಷಿ ಅವರ ಪಾತ್ರ ಹೆಚ್ಚಿಸಿದೆ. ಒಟ್ನಲ್ಲಿ ಸದ್ಯಕ್ಕೆ ನಯನತಾರಾ ಮತ್ತು ಕಿಯಾರಾ ಅಡ್ವಾಣಿ ನಂತರ ಟಾಕ್ಸಿಕ್ ಚಿತ್ರದ ಚಿತ್ರೀಕರಣಕ್ಕೆ ಹುಮಾ ಖುರೇಷಿ ಹಾಜರಾಗಿದ್ದಾರೆ. ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X