ಬಾಲಿವುಡ್ ಬಾಳೆಹಣ್ಣು ವಿವಾದ : ಎಲ್ಲ ಹಣ್ಣುಗಳನ್ನು ಉಚಿತವಾಗಿ ನೀಡಿದ ತಾಜ್ ಹೋಟೆಲ್
ಇತ್ತೀಚಿಗಷ್ಟೆ ಬಾಲಿವುಡ್ ನಲ್ಲಿ ಬಾಳೆಹಣ್ಣು ವಿವಾದ ದೊಡ್ಡ ಚರ್ಚೆ ಮಾಡಿತ್ತು. ನಟ ರಾಹುಲ್ ಬೋಸ್ ಚಂಡಿಗಢದ JW Marriott ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾಗ, ಅಲ್ಲಿ ಎರಡು ಬಾಳೆಹಣ್ಣುಗಳಿಗೆ 442 ರೂಪಾಯಿ ಬಿಲ್ ಮಾಡಲಾಗಿತ್ತು. ಈ ವಿಷಯ ದೊಡ್ಡ ಮಟ್ಟ ಸುದ್ದಿ ಮಾಡಿತ್ತು.
ಹೋಟೆಲ್ ನವರು ನೀಡಿದ ಬಿಲ್ ನೋಡಿ ಶಾಕ್ ಆದ ರಾಹುಲ್ ಬೋಸ್ ಆ ಬಗ್ಗೆ ರಾಹುಲ್ ಬೋಸ್ ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿತ್ತು. ಎರಡೇ ಎರಡು ಬಾಳೆ ಹಣ್ಣುಗಳಿಗೆ 442 ರೂಪಾಯಿ ಬಿಲ್ ಮಾಡಿದ್ದ ಹೋಟೆಲ್ ಬಗ್ಗೆ ಅನೇಕರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು. ಸಿಕ್ಕಾಪಟ್ಟೆ ಟ್ರೋಲ್ ಗಳು ಕೂಡ ಆಯ್ತು.

ಸಾಮಾಜಿಕ ಜಾಲತಾಣಗಳಲ್ಲಿ ಆದ ಈ ಬೆಳವಣಿಗೆಗಳನ್ನು ಗಮನಿಸಿದ ತಾಜ್ ಹೋಟೆಲ್ ಈಗ ತಮ್ಮ ತಮ್ಮ ಗ್ರಾಹಕರಿಗೆ ಉಚಿತವಾಗಿ ಹಣ್ಣುಗಳನ್ನು ನೀಡಲು ತೀರ್ಮಾನ ಮಾಡಿದೆ.

ಪಂಚತಾರ ಹೋಟೆಲ್ ತಾಜ್ ಎಲ್ಲ ಹಣ್ಣುಗಳನ್ನು ಫ್ರೀಯಾಗಿ ನೀಡುತ್ತಿದೆ. ತಮ್ಮ ಗ್ರಾಹಕರಿಗೆ ಆಯಾ ಋತುವಿಗೆ ತಕ್ಕ ಹಾಗೆ ಹಣ್ಣುಗಳನ್ನು ಉಚಿತವಾಗಿ ಕೊಡಲು ಮುಂದಾಗಿದೆ. ಈ ರೀತಿ JW Marriott ಹೋಟೆಲ್ ಘಟನೆಯಿಂದ ಮುಂಬೈ ತಾಜ್ ಹೋಟೆಲ್ ಹೊಸ ನೀತಿ ತಂದಿದೆ.


Click it and Unblock the Notifications











