For Quick Alerts
  ALLOW NOTIFICATIONS  
  For Daily Alerts

  ಹೆಸರು ಗಳಿಸಿದರೆ ನಿಮ್ಮಂತೆ ಗಳಿಸಬೇಕು; ದರ್ಶನ್ ಬಗ್ಗೆ ನಟಿ ಅಮೂಲ್ಯ ಹೀಗೆ ಹೇಳಿದ್ದೇಕೆ?

  |

  ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಮದುವೆ ನಂತರ ಅಭಿನಯದಿಂದ ದೂರ ಉಳಿದಿದ್ದಾರೆ. ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿರುವ ಅಮೂಲ್ಯ ಈಗ ರಾಜಕೀಯರಂಗದಲ್ಲಿ ಗುರುಸಿಕೊಂಡಿದ್ದಾರೆ. ಆಗಾಗ ಚುನಾವಣೆ ಕ್ಯಾಂಪೇನ್ ನಲ್ಲಿ ಕಾಣಿಸಿಕೊಳ್ಳುವ ಅಮೂಲ್ಯ ಇದೀಗ ಉಪಚುನಾವಣೆ ಆಖಾಡಕ್ಕೆ ಇಳಿದಿದ್ದಾರೆ.

  ಹೆಸರು ಮಾಡಿದ್ರೆ ನಿಮ್ಮಂತೆ ಹೆಸರು ಮಾಡ್ಬೇಕು ಅಂದ ದರ್ಶನ್ ತಂಗಿ ಅಮೂಲ್ಯ | Amulya | Darshan | Filmibeat kannada

  ನಿರ್ಮಾಪಕ ಮತ್ತು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಭಾರಿ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆಯ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ಪ್ರಚಾರದ ಕಣಕ್ಕೆ ಈಗ ತಾರಾಮೆರಗು ಬಂದಿದೆ. ನಿನ್ನೆ(ಅಕ್ಟೋಬರ್ 31) ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ಅಮೂಲ್ಯ ಮುನಿರತ್ನ ಪರ ಅಬ್ಬರದ ಪ್ರಚಾರ ಮಾಡಿದ್ದಾರೆ. ಮುಂದೆ ಓದಿ..

  ದರ್ಶನ್ ಗೆ ಅಂಕಲ್ ಎಂದು ಹೆಸರಿಟ್ಟಿದ್ದು ನಟಿ ಅಮೂಲ್ಯ!ದರ್ಶನ್ ಗೆ ಅಂಕಲ್ ಎಂದು ಹೆಸರಿಟ್ಟಿದ್ದು ನಟಿ ಅಮೂಲ್ಯ!

  ದರ್ಶನ್ ನೋಡಲು ಮುಗಿಬಿದ್ದಿದ್ದ ಅಭಿಮಾನಿಗಳು

  ದರ್ಶನ್ ನೋಡಲು ಮುಗಿಬಿದ್ದಿದ್ದ ಅಭಿಮಾನಿಗಳು

  ನಿನ್ನೆ(ಅಕ್ಟೋಬರ್ 31) ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ಅಮೂಲ್ಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಅಬ್ಬರದ ಪ್ರಚಾರ ಮಾಡಿದ್ದಾರೆ. ಡಿ ಬಾಸ್ ದರ್ಶನ್ ನೋಡಲು ಅಭಿಮಾನಿ ಸಾಗರವೆ ಹರಿದುಬಂದಿತ್ತು. ದರ್ಶನ್ ಪ್ರಚಾರಕ್ಕೆ ಬರ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಬೆಳಗ್ಗೆಯೇ ಆರ್ ಆರ್ ನಗರಕ್ಕೆ ಬಂದು ಜಾಮಾಯಿಸಿದ್ದರು.

  ಡಿ ಬಾಸ್ ಜೊತೆ ನಟಿ ಅಮೂಲ್ಯ ಪ್ರಚಾರ

  ಡಿ ಬಾಸ್ ಜೊತೆ ನಟಿ ಅಮೂಲ್ಯ ಪ್ರಚಾರ

  ಡಿ ಬಾಸ್ ಅಭಿಮಾನಿ ಬಳಗ ನೋಡಿ ನಟಿ ಅಮೂಲ್ಯ ಮೂಕವಿಸ್ಮಿತರಾಗಿದ್ದಾರೆ. ದರ್ಶನ್ ಪಕ್ಕದಲ್ಲೇ ನಿಂತು ತೆರೆದ ವಾಹನದಲ್ಲಿ ಮತಯಾಚನೆ ಮಾಡಿದ ಅಮೂಲ್ಯ, ದಾರಿಯುದ್ದಕ್ಕೂ ದರ್ಶನ್ ಅಭಿಮಾನಿ ಬಳಗ ಸಾಥ್ ನೀಡಿರುವುದನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. ಈ ಬಗ್ಗೆ ಅಮೂಲ್ಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಹೆಸರು ಗಳಿಸಿದರೆ ನಿಮ್ಮಂತೆ ಹೆಸರು ಗಳಿಸಬೇಕು- ಅಮೂಲ್ಯ

  ಹೆಸರು ಗಳಿಸಿದರೆ ನಿಮ್ಮಂತೆ ಹೆಸರು ಗಳಿಸಬೇಕು- ಅಮೂಲ್ಯ

  'ಹೆಸರು ಗಳಿಸಿದರೆ ನಿಮ್ಮಂತೆ ಹೆಸರು ಗಳಿಸಬೇಕು ಅನಿಸಿತು. ಇಂದು ನಿಮ್ಮೊಂದಿಗೆ ಕ್ಯಾಂಪೇನ್(ಪ್ರಚಾರ) ಮಾಡಿ. ನಿಮ್ಮ ಅಭಿಮಾನಿ ಬಳಗವನ್ನು ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲೆ ಸದಾ ಇರಲಿ' ಎಂದು ಬರೆದುಕೊಂಡಿದ್ದಾರೆ.

  ಮಂಡ್ಯ to ಆರ್‌ಆರ್ ನಗರ: ಬದಲಾಯಿತೆ ದರ್ಶನ್ ರಾಜಕೀಯ ಆದರ್ಶ?ಮಂಡ್ಯ to ಆರ್‌ಆರ್ ನಗರ: ಬದಲಾಯಿತೆ ದರ್ಶನ್ ರಾಜಕೀಯ ಆದರ್ಶ?

  ದರ್ಶನ್ ಉತ್ತಮ ಬಾಂಧವ್ಯ ಹೊಂದಿರುವ ಅಮೂಲ್ಯ ಕುಟುಂಬ

  ದರ್ಶನ್ ಉತ್ತಮ ಬಾಂಧವ್ಯ ಹೊಂದಿರುವ ಅಮೂಲ್ಯ ಕುಟುಂಬ

  ಅಂದ್ಹಾಗೆ ದರ್ಶನ್ ಗೆ ಚಿತ್ರರಂಗದಲ್ಲಿರುವ ಆಪ್ತ ಸ್ನೇಹಿತರ ಬಳಗದಲ್ಲಿ ನಟಿ ಅಮೂಲ್ಯ ಕೂಡ ಒಬ್ಬರು. ಅಮೂಲ್ಯ ಕುಟುಂಬ ದರ್ಶನ್ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಹುಟ್ಟುಹಬ್ಬ ಮತ್ತು ವಿಶೇಷ ಸಮಯದಲ್ಲಿ ದರ್ಶನ್ ಅಮೂಲ್ಯ ಮನೆಗೆ ಭೇಟಿ ನೀಡುತ್ತಾರೆ. ಅಮೂಲ್ಯ ದಂಪತಿ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ದರ್ಶನ್ ರನ್ನು ಅಂಕಲ್ ಎಂದು ಕರೆಯುವ ಅಮೂಲ್ಯ

  ದರ್ಶನ್ ರನ್ನು ಅಂಕಲ್ ಎಂದು ಕರೆಯುವ ಅಮೂಲ್ಯ

  ಅಂದ್ಹಾಗೆ ನಟ ದರ್ಶನ್ ಅವರನ್ನು ಮೊದಲು ಅಂಕಲ್ ಎಂದು ಕರೆಯಲು ಪ್ರಾರಂಭಮಾಡಿದ್ದು ಅಮೂಲ್ಯ ಅವರಂತೆ. ಈ ಬಗ್ಗೆ ದರ್ಶನ್ ಪ್ರಚಾರ ಸಮಯದಲ್ಲಿ ಬಹಿರಂಗ ಪಡಿಸಿದ್ದಾರೆ. ಬಾಸ್ ಬಗ್ಗೆ ಏನು ಹೇಳೋದು ಎಂದು ಎನ್ನುತ್ತಿದ್ದ ಅಮೂಲ್ಯಗೆ ಪಕ್ಕದಲ್ಲೇ ನಿಂತಿದ್ದ ದರ್ಶನ್ ಅಂಕಲ್ ಬಗ್ಗೆ ಹೇಳು ಎಂದು ತಮಾಷೆ ಮಾಡಿದರು. ಈ ಸಮಯದಲ್ಲಿ ದರ್ಶನ್, ಮೊದಲು ಅಂಕಲ್ ಅಂತ ಸ್ಟಾರ್ಟ್ ಮಾಡಿದ್ದೇ ಅವಳು ಎಂದು ಹೇಳಿದರು.

  English summary
  Actor Darshan and Actress Amulya to campaign for RR Nagar BJP candidate Muniratna. After campaign Amulya Speak about Darshan stardom.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X